Advertisement

ದೇಶವಿರೋಧಿ ಹೇಳಿಕೆ ಜೆ.ಎನ್.ಯು. ವಿದ್ಯಾರ್ಥಿ ಶರ್ಜೀಲ್ ಇಮಾಮ್ ಗೆ ಪೊಲೀಸ್ ಕಸ್ಟಡಿ

08:25 AM Jan 30, 2020 | Team Udayavani |

ನವದೆಹಲಿ: ನಿನ್ನೆ ಬಿಹಾರದಲ್ಲಿ ಪೊಲೀಸರಿಂದ ಬಂಧಿನಕ್ಕೊಳಗಾಗಿದ್ದ ಜೆ.ಎನ್.ಯು. ವಿದ್ಯಾರ್ಥಿ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರ ಶರ್ಜಿಲ್ ಇಮಾಮ್ ಅವರನ್ನು ದೆಹಲಿ ನ್ಯಾಯಾಲಯವು ಐದು ದಿನಗಳ ಕಾಲ ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರ ವಶಕ್ಕೆ ಒಪ್ಪಿಸಿದೆ.

Advertisement

ದೇಶ ವಿರೋಧಿ ಪ್ರಚೋದನಕಾರಿ ಹೇಳಿಕೆಯನ್ನು ನೀಡಿ ಬಳಿಕ ತಲೆತಪ್ಪಿಸಿಕೊಂಡಿದ್ದ ಇಮಾಮ್ ಅವರನ್ನು ಮಂಗಳವಾರದಂದು ಬಿಹಾರದ ಜೆಹ್ನಾಬಾದ್ ನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಬುಧವಾರ ಬೆಳಿಗ್ಗೆ ಇಮಾಮ್ ಅವರನ್ನು ಟ್ರಾನ್ಸಿಟ್ ರಿಮಾಂಡ್ ಮೇಲೆ ಪಟ್ನಾದಿಂದ ದೆಹಲಿಗೆ ಕರೆತರಲಾಗಿತ್ತು. ಬಳಿಕ ಅವರನ್ನು ಭದ್ರತಾ ಕಾರಣಗಳಿಗಾಗಿ ಪಟಿಯಾಲಾ ಹೌಸ್ ನ್ಯಾಯಾಲಯದ ಮುಖ್ಯ ಮಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಅವರ ನಿವಾಸದಲ್ಲಿ ಹಾಜರುಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next