Advertisement

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಂಟನಿ ವೇಸ್ಟ್ ಕಾರ್ಮಿಕರ ಪ್ರತಿಭಟನೆ

02:58 PM Dec 17, 2020 | sudhir |

ಸುರತ್ಕಲ್ : ಮಂಗಳೂರು ಪಾಲಿಕೆಯ ಸ್ವಚ್ಚತಾ ಕಂಪನಿ ಆಂಟನಿ ವೇಸ್ಟ್ ಇದರ ವಾಹನ ಚಾಲಕರು ಅದರಲ್ಲಿನ ಕೆಲಸಗಾರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಫಾಯಿ ಕರ್ಮಾಚಾರಿ ಸಂಘದ ವತಿಯಿಂದ ಆಂಟನಿ ವೇಸ್ಟ್ ಕಚೇರಿ ಮುಂಭಾಗ ವಾಹನ ನಿಲ್ಲಿಸಿ ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಜಂಟಿ ಆಯುಕ್ತರು ತಿಂಗಳ ವೇತನ ಹಾಕುವ ಬಗ್ಗೆ ಭರವಸೆ ನೀಡಿದ್ದು. ಇದರ ಜತೆ ಈ ಬಾರಿಯ ಬೋನಸ್ ನೀಡಲು ಸ್ವಲ್ಪ ಕಾಲಾವಕಾಶ ಕೇಳಿ ಶೀಘ್ರ ಹಾಕುವ ಭರವಸೆ ನೀಡಿದರು.

ಇದೇ ವೇಳೆ ಈ ತಿಂಗಳ 21ತಾರೀಕಿನ ಒಳಗಾಗಿ ವೇತನ ಮತ್ತು ಜನವರಿ ತಿಂಗಳಲ್ಲಿ ಬೋನಸ್ ಕೊಡುವ ಬಗ್ಗೆ ಆಂಟನಿ ವೇಸ್ಟ್ ಮ್ಯಾನೇಜ್ ಮೆಂಟ್ ಕಂಪನಿ ಲಿಖಿತ ಭರವಸೆ ನೀಡಿದ್ದು. ಇದರ ಜತೆ ಹೆಚ್ಚುವರಿ ಕೆಲಸಕ್ಕೆ ಒ ಟಿ ಮತ್ತು ಸಕಾಲಕ್ಕೆ ವಾಹನ ದುರಸ್ತಿ,ಹಿರಿಯ ಅಧಿಕಾರಿಗಳಿಂದ ಕಿರುಕುಳ ತಡೆ ಮತ್ತಿತರ ಭರವಸೆ ನೀಡಿದೆ.

ಕಂಪನಿ ನೀಡಿರುವ ಭರವಸೆ ತಪ್ಪಿದಲ್ಲಿ 21ರ ಬಳಿಕ ಸಫಾಯಿ ಕರ್ಮಾಚಾರಿಗಳು ಮತ್ತೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಎಚ್ಚರಿಕೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next