Advertisement
ಆ್ಯಂಕ್ಲೆಟ್ ಫೂಟ್ ಆಭರಣಗಳುಆ್ಯಂಕ್ಲೆಟ್ಗಳು ಆ್ಯಂಕಲ್‌ಗೆ (ಕಾಲಿನ ಮಣಿಕಟ್ಟಿಗೆ) ಧರಿಸುವಂತಹ ಆಭರಣಗಳು. ಇವುಗಳನ್ನು ಫೂಟ್ ಬ್ರೇಸ್ಲೆ„ಟ್‌ಗಳೆಂದೂ ಕರೆಯಬಹುದು. ಇವುಗಳಲ್ಲಿಯೂ ಹಲವಾರು ವಿಧವಾದ ಆ್ಯಂಕ್ಲೆಟ್‌ಗಳಿವೆ. ಈ ಆ್ಯಂಕ್ಲೆಟ್ಟುಗಳು ಪ್ರತಿದಿನದ ಬಳಕೆಗೆ ಸೂಕ್ತ ಮತ್ತು ಎಲ್ಲಾ ಬಗೆಯ ಉಡುಗೆಗಳಿಗೂ ಸಾಮಾನ್ಯವಾಗಿ ಮ್ಯಾಚ್ ಆಗುತ್ತವೆ.
1. ಟ್ರೆಡಿಶನಲ್ ಗೋಲ್ಡ್ ಮತ್ತು ಸಿಲ್ವರ್ ಆ್ಯಂಕ್ಲೆಟ್‌ಗಳು
ಸಾಂಪ್ರದಾಯಿಕ ಕಾಲ್ಗೆಜ್ಜೆಗಳು ಇವುಗಳು. ಘಲ್-ಘಲ್‌ಎಂಬ ಸದ್ದಿನೊಂದಿಗೆ ಮನೆಯಲ್ಲಿ ಹೆಣ್ಣೊಬ್ಬಳು ಇರುವಳೆಂಬುದರ ಪ್ರತೀಕವೆಂಬಂತಿರುವ ಈ ಬಗೆಯ ಆಭರಣಗಳು ಎವರ್‌ಗ್ರೀನ್ ಆಭರಣಗಳಾಗಿವೆ. ಸಿಲ್ವರ್ ಮತ್ತು ಗೋಲ್ಡ್ ಗಳಲ್ಲಿ ಲಭ್ಯವಿರುವ ಇವುಗಳು ಹಲವಾರು ವಿನ್ಯಾಸಗಳಲ್ಲಿ ದೊರೆಯುತ್ತವೆ.
ಇವುಗಳನ್ನು ಕ್ರಿಸ್ಟಲ್ ಬೀಡ್ಸ್ ಗಳನ್ನು ಬಳಸಿ ತಯಾರಿಸಿರುತ್ತಾರೆ. ಇವುಗಳಲ್ಲಿ ಹಲವು ಬಗೆಯ ಬಣ್ಣಗಳ ಆಯ್ಕೆಗಳಿರುತ್ತವೆ. ಡ್ರೆಸ್ಸಿಗೆ ಹೊಂದುವಂತೆ ಆಯ್ದುಕೊಳ್ಳಬಹುದು. 3. ಪ್ಲಾಸ್ಟಿಕ್ ಆ್ಯಂಕ್ಲೆಟ್ಟುಗಳು
ಪ್ಲಾಸ್ಟಿಕ್ ಬ್ರೇಸ್‌ಲೆಟ್ಟುಗಳಂತೆಯೇ ಈ ಪ್ಲಾಸ್ಟಿಕ್ ಆ್ಯಂಕ್ಲೆಟ್ಟುಗಳು. ಪ್ಲಾಸ್ಟಿಕ್ಕಿನ ತೆಳುವಾದ ಎಳೆಗಳಲ್ಲಿ ನಾನಾ ವಿನ್ಯಾಸಗಳನ್ನು ಮಾದರಿಗೊಳಿಸಿ ತಯಾರಿಸಲಾಗಿರುತ್ತದೆ. ಟ್ವಿಸ್ಟೆಡ್ ಆ್ಯಂಕ್ಲೆಟ್ಟುಗಳು, ಜಾಲರಿಯಂತೆ ಹೆಣೆದಂತಿರುವ ಮಾದರಿಗಳು, ಹೂವಿನ ಆಕಾರದಲ್ಲಿರುವ ಮಾದರಿಗಳು ಇತ್ಯಾದಿಗಳಲ್ಲಿ ಹಲವಾರು ಕಲರ್ ಆಪ್ಷನ್ನೊಂದಿಗೆ ಲಭಿಸುತ್ತವೆ. ತ್ರೀಫೋರ್ತ್, ಶಾಟ್ಸ್ ಮಿನಿಸ್ಕರ್ಟುಗಳಿಗೆ ಚೆಂದವಾಗಿ ಕಾಣುತ್ತವೆ. ಸಾಂಪ್ರದಾಯಿಕ ಉಡುಗೆಗಳಿಗೆ ಧರಿಸುವುದು ಸೂಕ್ತವಲ್ಲ.
Related Articles
ಇವುಗಳು ಪುರಾತನ ಕಾಲದಿಂದ ಬಳಕೆಯಲ್ಲಿದ್ದು, ಹಲವಾರು ಬದಲಾವಣೆಗಳೊಂದಿಗೆ ಈಗಲೂ ಟ್ರೆಂಡಿ ಯಾಗಿರುವ ಆ್ಯಂಕ್ಲೆಟ್ಟುಗಳು. ಕಡಗಗಳನ್ನು ಧರಿಸಲು ವಯೋಮಾನದ ಮಿತಿಯಿಲ್ಲ ಅಂತೆಯೇ ಯಾವ ಬಗೆಯ ಡ್ರೆಸ್ಸಿಗಾದರೂ, ಯಾವ ಸಂದರ್ಭಕ್ಕಾದರೂ ಸೂಕ್ತವೆನಿಸುತ್ತವೆ. ಆದರೆ ಡಿಸೈನುಗಳ ಆಯ್ಕೆಯಲ್ಲಿ ಗಮನಹರಿಸಬೇಕಾಗುತ್ತದೆ. ಇವುಗಳನ್ನು ಧರಿಸುವು ದರಿಂದ ಕಾಲಿನ ಬಲ ಹೆಚ್ಚುವುದೆಂಬ ವೈಜ್ಞಾನಿಕ ಕಾರಣವೂ ಇದೆ.
Advertisement
5. ಸೆಣಬಿನ ಆ್ಯಂಕ್ಲೆಟ್ಟುಗಳುಇವುಗಳು ಸೆಣಬಿನ ದಾರವನ್ನು ವಿವಿಧ ಬಗೆಗಳಲ್ಲಿ ಹೆಣೆದು ತಯಾರಿಸಿರುವಂತದ್ದು. ಇವೂ ಸಹ ಹಲವು ವಿನ್ಯಾಸಗಳಲ್ಲಿ ದೊರೆಯುತ್ತವೆ. ಬಹಳ ಹಗುರವಾಗಿದ್ದು ಧರಿಸಲು ಆರಾಮದಾಯಕವಾಗಿರುತ್ತವೆ. 6. ಮರದ ಮಣಿಗಳ ಆ್ಯಂಕ್ಲೆಟ್ಸ್
ವಿವಿಧ ಬಣ್ಣಗಳ ಮಣಿಗಳನ್ನೊಳಗೊಂಡ ಆ್ಯಂಕ್ಲೆಟ್ಟುಗಳು ಮಾರುಕಟ್ಟೆಯಲ್ಲಿ ಲಭಿಸುತ್ತವೆ. ನೋಡಲು ಆಕರ್ಷಕವಾಗಿರುವ ಈ ಆಭರಣಗಳು ಧರಿಸಿದಾಗ ಒಳ್ಳೆಯ ಲುಕ್ಕನ್ನು ಕೊಡುತ್ತವೆ. ಅಲ್ಲದೆ ಇವು ಆ್ಯಂಟಿಕ್ ಲುಕ್ ಕೊಡುತ್ತವೆ. 7. ಸಣ್ಣ ಸಣ್ಣ ಶಂಖಗಳಿಂದ ಮತ್ತು ಕಪ್ಪೆ ಚಿಪ್ಪುಗಳಿಂದ ತಯಾರಿಸಿದ ಆ್ಯಂಕ್ಲೆಟ್ಟುಗಳು ದೊರೆಯುತ್ತವೆ. ಇವು ಬೀಚ್ ಪಾರ್ಟಿಗಳಿಗೆ ಹೇಳಿಮಾಡಿಸಿದಂತಿರುತ್ತವೆ.
ಪ್ರಯೋಜನಗಳು:
.ಸಾಂಪ್ರದಾಯಿಕ ಗೆಜ್ಜೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಆಂಕ್ಲೆಟ್ಟುಗಳು ಹಗುರವಾಗಿದ್ದು ಧರಿಸಲು ಆರಾಮದಾಯಕ.
.ಕಾಲಿನ ಅಂದವನ್ನು ಹೆಚ್ಚಿಸುತ್ತದೆ.
.ಎಲ್ಲ ಬಗೆಯ ದಿರಿಸುಗಳಿಗೆ ಹೊಂದುವಂತವುಗಳು..ಎಥಿ°ಕ್ ಮತ್ತು ಮಾಡರ್ನ್ ಎರಡೂ ಮಾದರಿಗಳಲ್ಲಿ ದೊರೆಯುವುದರಿಂದ ಆಯ್ಕೆಗಳು ಹೆಚ್ಚು.
.ವಯಸ್ಸಿನ ಮಿತಿಯಿರುವುದಿಲ್ಲ. 8. ವೈರ್ (ತಂತಿ) ಫೂಟ್ ಆಭರಣಗಳು
ಇವುಗಳು ಸಖತ್ ವೈಲ್ಡ್ ಲುಕ್ ಕೊಡುವಂತಹ ಆಭರಣಗಳು. ತುಂಬಾ ಮಾಡರ್ನ್ ಇರುವಂತಹ ಡ್ರೆಸ್ಸುಗಳಿಗೆ ಈ ಬಗೆಯ ಆಭರಣಗಳು ಹೊಂದುತ್ತವೆ. ಗೋಲ್ಡ್ ಅಥವ ಸಿಲ್ವರ್ ಪ್ಲೇಟೆಡ್ ತಂತಿಗಳಿಂದ ವಿವಿಧ ಆಕೃತಿಗಳನ್ನು ವಿನ್ಯಾಸಮಾಡಿ ತಯಾರಿಸಿರುವಂತದ್ದಾಗಿದೆ. ಆ್ಯಂಕಲ್‌ನಿಂದ ಆರಂಭವಾಗಿ ಮೇಲ್ದಿಕ್ಕಿನಲ್ಲಿ ಡಿಸೈನ್ ಮುಂದುವರೆಯುತ್ತವೆ. ಹೂವುಗಳು, ಚಿಟ್ಟೆಗಳು ಇನ್ನಿತರೆ ಡಿಸೈನುಗಳೊಂದಿಗೆ ದೊರೆಯುವ ಈ ಆಭರಣಗಳು ಶಾರ್ಟ್ಸ್, ಮಿನಿಡ್ರೆಸ್ಸುಗಳಿಗೆ ಮೆರುಗನ್ನು ನೀಡುತ್ತವೆ. ಇವುಗಳ ಧರಿಸುವಿಕೆಯಿಂದ ಹೊಸ ಸ್ಟೈಲ… ಸ್ಟೇಟೆ¾ಂಟ… ಸೃಷ್ಟಿಯಾಗುತ್ತದೆ. ಸಧ್ಯದಲ್ಲಿ ಇನ್ನೂ ಜನಸಾಮಾನ್ಯರಿಗೆ ತಲುಪದ ಬಗೆಯಾಗಿದ್ದು ಸೆಲೆಬ್ರೆಟಿಗಳಿಂದ ಬಳಸಲ್ಪಡುತ್ತದೆ. ತಂತಿಯಾಭರಣಗಳಾಗಿರುವುದರಿಂದ ಒಳ್ಳೆಯ ಫಿಟ್ಟಿಂಗನ್ನು ಹೊಂದಿದ್ದು ಕ್ಲಾಸಿ ಲುಕ್ಕನ್ನು ಕೊಡುತ್ತವೆ. 9. ಟೋ ರಿಂಗ್ಸ್ (ಕಾಲುಂಗುರಗಳು)
ವಿವಾಹಿತ ಮಹಿಳೆಯ ಶುಭ ಸಂಕೇತಗಳಲ್ಲೊಂದಾದ ಆಭರಣಗಳಲ್ಲಿ ಈ ಕಾಲುಂಗರವೂ ಒಂದು. ಸಾಮಾನ್ಯವಾಗಿ ಎಳೆಗಳಿರುವ ಕಾಲುಂಗುರಗಳು ಅಥವಾ ಪಿಲ್ಲಿಗಳ ಬಗೆಗೆ ಪ್ರತಿಯೊಬ್ಬ ಮಹಿಳೆಯು ತಿಳಿದಿರುತ್ತಾಳೆ. ಆದರೆ ಇವುಗಳನ್ನು ಹೊರತುಪಡಿಸಿ ಫ್ಯಾಷನೇಬಲ್ ಮತ್ತು ಟ್ರೆಂಡಿಯಾದ ಕಾಲುಂಗುರಗಳು ದೊರೆಯುತ್ತವೆ. ಕಾಲಿನ ಉಂಗುರ ಬೆರಳಿನ ನರವು ಮಹಿಳೆಯರ ಗರ್ಭಕೋಶಕ್ಕೆ ಸಂಬಂಧಿಸಿರುವುದರಿಂದ ಕಾಲುಂಗುರಗಳು ಗರ್ಭಕೋಶವನ್ನು ಬಲಗೊಳಿಸುತ್ತವೆ ಎಂಬ ವೈಜಾnನಿಕ ಕಾರಣವು ಇವೆ. ಅಲ್ಲದೆ ಸಾಂಪ್ರದಾಯಿಕ ಹಿನ್ನಲೆಯಿಂದ ವಿವಾಹಿತ ಮಹಿಳೆಯ ಸೌಭಾಗ್ಯದ ಸಂಕೇತವೆನ್ನಲಾಗುತ್ತದೆ. ಮುಖ್ಯವಾಗಿ ಮೂರು ಬಗೆಯ ಟ್ರೆಂಡಿ ಟೋ ರಿಂಗುಗಳು ಇಂತಿವೆ. ಬೆಳ್ಳಿ ಮತ್ತು ಗೋಲ್ಡ್ ರಿಂಗ್ಸ್ : ಸಾಧಾರಣವಾಗಿ ಬಳಸುವ ಎಳೆ ಕಾಲುಂಗುರಗಳು, ಪಿಲ್ಲಿಗಳು, ಜಿಗ್-ಜಾಗ್ ಕಾಲುಂಗುರಗಳು ಈ ವಿಭಾಗಕ್ಕೆ ಸೇರಿರುವಂತದ್ದು. ಸಿಂಪಲ್ಲಾದ ಡಿಸೈನುಗಳಿದ್ದು ಸಾಮಾನ್ಯ ಸಂದರ್ಭಗಳಿಗೆ ಧರಿಸಬಹುದು. ಟೋ ರಿಂಗ್ ವಿಥ್ ಪಾಯಲ್: ಇವುಗಳು ಮೇಲೆ ತಿಳಿಸಿದ ಬೇರ್ ಫೂಟ್ ಆಭರಣಗಳಿಗೆ ಹೋಲುವಂತವುಗಳು. ಉಂಗುರ ಬೆರಳಿನಿಂದ ಆರಂಭವಾಗಿ ಆ್ಯಂಕ್ಲೆಟ್ಟಿಗೆ ಜೋಡಣೆಯಾಗಿರುತ್ತವೆ. ಇವು ವಿಶೇಷವಾದ ಸಂದರ್ಭಗಳಿಗೆ ಸೂಕ್ತವಾದವುಗಳು. ತ್ರೀ ಫಿಂಗರ್ ಟೋ ರಿಂಗ್ಸ್: ಇವು ವಿಶೇಷವಾದ ಮತ್ತು ಸಧ್ಯದ ಟ್ರೆಂಡಿ ಟೋ ರಿಂಗಾಗಿದೆ. ಮೂರು ಉಂಗುರಗಳನ್ನು ಒಂದಕ್ಕೊಂದು ಚೈನುಗಳ ಸಹಾಯದಿಂದ ಜೋಡಿಸಲಾಗಿರುತ್ತದೆ. ಸಿಲ್ವರ್ ಮತ್ತು ಗೋಲ್ಡ್ ಎರಡೂ ಬಗೆಗಳಲ್ಲಿ ಲಭಿಸುತ್ತವೆ ಮತ್ತು ವಿಶೇಷ ಸಂದರ್ಭಗಳಿಗೆ ಹೊಂದುತ್ತವೆ. ಮೇಲಿನ ಬಗೆಗಳಲ್ಲದೆ ಇನ್ನೂ ಅನೇಕ ವಿಧವಾದ ಫೂಟ್ ಆಭರಣಗಳು ಫ್ಯಾಷನ್ ಲೋಕದಲ್ಲಿ ಮಾದರಿ ಗೊಳ್ಳುತ್ತಿರುತ್ತವೆ. ಅವುಗಳಿಗೆ ಅಪ್ಡೆàಟ್ ಆಗುವುದು ಉಚಿತವಾದುದು. ನೀವೂ ಕೂಡ ಸಂದರ್ಭಕ್ಕನುಗುಣವಾದ ಲಭ್ಯವಿರುವ ಮಾದರಿಗಳನ್ನು ಬಳಸಬಹುದು ಮತ್ತು ಕಾಲಿನ ಅಂದವನ್ನು ಹೆಚ್ಚಿಸಿಕೊಳ್ಳಬಹುದು. – ಪ್ರಭಾ ಭಟ್