ವ್ಯಾಟ್ಸಾಪ್‌ನಲ್ಲಿ ಬೆಳಗ್ಗೆ ಎದ್ದ ತಕ್ಷಣ ನಿನ್ನ ಗುಡ್ ಮಾರ್ನಿಂಗ್ ಮೆಸೇಜ್ ಇರದಿದ್ದರೆ ದೇವರಿಗೂ ಕೈ ಮುಗಿಯುವುದನ್ನು ಮರೆತು, ಯಾಕಿರಬಹುದು ಎಂಬ ಯೋಚನೆಗಳಲ್ಲಿ ಮುಳುಗುತ್ತದೆ ಮನಸು. ನನ್ನ ಪ್ರತಿಯೊಂದು ಭಾವನೆಗಳನ್ನು ನಿನ್ನ ಜೊತೆ ಹಂಚಿಕೊಳ್ಳದಿದ್ದರೆ ಸಮಾಧಾನವೇ ಇರದು.
ನಿನ್ನನ್ನು ಯಾಕಾದ್ರೂ ಪ್ರೀತಿಸಿದೆ ಅಂತಾ ಸಿಟ್ಟು ಬರಿ¤ದೆ ನೋಡು. ಸುಮ್ನೆ ಇದ್ದಿದ್ರೆ ಎಷ್ಟೋ ನೆಮ್ಮದಿಯಾಗಿರಿ¤ದ್ದೆ ಅನ್ನಿಸುತ್ತದೆ. ಪ್ರೀತಿ, ಪ್ರೇಮ ಎಂದರೆ ಅದೊಂದು ಉದ್ಯೋಗ ಇಲ್ಲದವರ ಕೆಲಸ ಎಂದು ಮಾರುದೂರ ಓಡುತ್ತಿದ್ದ ನನ್ನನ್ನು ಅದೇ ಪಾಶದಲ್ಲಿ ಅದೆಷ್ಟು ಸುಲಭವಾಗಿ ಬಂಧಿಸಿಬಿಟ್ಟೆ. ನನ್ನ ಜೀವನದಲ್ಲಿ ನೀನು ಬರಬಾರದಿತ್ತು ಕಣೋ. ಚಿತ್ತವೆಲ್ಲಾ ಕದಡಿ ಹೋಗಿದೆ. ಈವರೆಗೂ ಗೆಳತಿಯರು, ಸಿನಿಮಾ, ಕಾದಂಬರಿಯಲ್ಲಿ ಕಳೆದು ಹೋಗುತ್ತಿದ್ದ ಮನಸು ಈಗ ಪ್ರತಿಕ್ಷಣ ನಿನ್ನನ್ನೇ ಧ್ಯಾನಿಸುತ್ತಾ, ಅದೇ ಗುಂಗಿನಲ್ಲಿರುವಂತೆ ಮಾಡಿದ್ದೀಯಾ.
ನಿನ್ನ ಬಗ್ಗೆ ಒಂದು ಹುಚ್ಚು ವ್ಯಾಮೋಹ ಬೆಳೆಸಿಕೊಂಡಿದೆ ಮನಸು. ನೀನು ಯಾವ ಹುಡುಗಿಯ ಹತ್ತಿರ ಮಾತನಾಡಿದರೂ ಸಿಟ್ಟು, ನಕ್ಕರಂತೂ ಸಿಷ್ಟು ನೆತ್ತಿಗೇರುತ್ತದೆ. ಫೇಸ್‌ಬುಕ್‌ನಲ್ಲಿಯೂ ನೀನು ಸ್ನೇಹಿತೆಯರಿಗೆ ಕೊಡುವ ಹಾಟ್, ಕ್ಯೂಟ್, ಡಿಯರ್ ಎನ್ನುವ ಕಮೆಂಟು, ತೂರಿಬಿಡುವ ಮುತ್ತು ಕೊಡುವ ಇಮೋಜಿಗಳನ್ನು ನೋಡುತ್ತಿದ್ದರೆ ನನ್ನ ಹೃದಯವಿಲ್ಲಿ ಕಾರಣವಿಲ್ಲದೆ ಹಾರುತ್ತಿರುತ್ತದೆ. ಅವುಗಳ ಹಿಂದೆ ಬರೀ ಸ್ನೇಹದ ಉದ್ದೇಶ ನಿನ್ನದು ಎಂದು ಗೊತ್ತಿದ್ದರೂ, ಸಹಿಸಿಕೊಳ್ಳುತ್ತಿಲ್ಲ ಹೇಳು. ಈ ಮನಸು, ನಾನೇನು ಮಾಡಲಿ?
ವ್ಯಾಟ್ಸಾಪ್‌ನಲ್ಲಿ ಬೆಳಗ್ಗೆ ಎದ್ದ ತಕ್ಷಣ ನಿನ್ನ ಗುಡ್ ಮಾರ್ನಿಂಗ್ ಮೆಸೇಜ್ ಇರದಿದ್ದರೆ ದೇವರಿಗೂ ಕೈ ಮುಗಿಯುವುದನ್ನು ಮರೆತು, ಯಾಕಿರಬಹುದು ಎಂಬ ಯೋಚನೆಗಳಲ್ಲಿ ಮುಳುಗುತ್ತದೆ ಮನಸು. ನನ್ನ ಪ್ರತಿಯೊಂದು ಭಾವನೆಗಳನ್ನು ನಿನ್ನ ಜೊತೆ ಹಂಚಿಕೊಳ್ಳದಿದ್ದರೆ ಸಮಾಧಾನವೇ ಇರದು. ಅದಕ್ಕೆ ನಿನ್ನ ಪ್ರತಿಸ್ಪಂದನೆಯನ್ನು ಚಾತಕ ಪಕ್ಷಿಯ ಹಾಗೆ ಕಾಯುತ್ತಿರುತ್ತದೆ ಮನಸು. ನಿನ್ನ ಡಿಪಿ ಸ್ವಲ್ಪ ಸಪ್ಪಗಿದ್ದರೂ ಪ್ರಶ್ನೆ, ಜೋಶ್‌ನಲ್ಲಿದ್ದರೂ ಮತ್ತೂಂದು ಪ್ರಶ್ನೆ. ಒಟ್ಟಾರೆ, ನಿನ್ನನ್ನು ಮಾತಿಗೆಳೆಯಲು ನನಗೊಂದು ನೆಪಬೇಕು ಅಷ್ಟೇ. ನನ್ನ ಡಿಪಿಗೆ ನೀನು ಚಂದದ ಪ್ರೀತಿಯ ಕಣ್ಣರಳಿಸಿರುವ ಎಮೋಜಿಯ ಜೊತೆ ಕಮೆಂಟು ಮಾಡದಿದ್ದರಂತೂ ಬಲು ಕೋಪ. ಹೋದಲ್ಲಿ, ಬಂದಲ್ಲಿ, ಹಾದೀಲಿ, ಬೀದೀಲಿ ಎಲ್ಲ ಕಡೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಹಿಡಿಸಿದ್ದು ನೀನೇ ತಾನೇ. ನನ್ನ ಮೊಬೈಲ್ ಗ್ಯಾಲರಿ ತುಂಬೆಲ್ಲಾ ಬರೀ ನಮ್ಮಿಬ್ಬರ ಫೋಟೋಗಳೇ ತುಂಬಿ ಹೋಗಿವೆ. ಅದು ನನ್ನೊಬ್ಬಳ ಆಸ್ತಿ. ಹಾಗಾಗಿ ಎಲ್ಲದಕ್ಕೂ ಸ್ಕಿ$›àನ್‌ಲಾಕ್, ನೀನು ನನ್ನ ಹೃದಯದಲ್ಲಿ ಲಾಕ್ ಆದ ಹಾಗೆ.
ಮೊನ್ನೆ ನೀನು ಯಾವುದೋ ಒಂದು ಕವಿತೆ ಓದಿ ಅಭಿಪ್ರಾಯಿಸಲು ಕಳಿಸಿದ್ದನ್ನು ನಾನು ತಮಾಷೆಗೆ ಚೆನ್ನಾಗಿಲ್ಲ ಎಂದಿದ್ದಕ್ಕೆ ಅದೆಷ್ಟು ಬೇಸರ ಮಾಡಿಕೊಂಡೆಯೋ ಹುಡುಗ, ನಿಜ, ತುಂಬಾ ಚಂದದ ಕವಿತೆ, ಅದರಲ್ಲೂ ನನ್ನ ಮೇಲೇ ಬರೆದಿದ್ದೆ ಎಂದು ಗೊತ್ತಾಗದಷ್ಟು ಮೂರ್ಖಳಲ್ಲ ಕಣೋ. ಆದರೆ, ನಿನ್ನನ್ನು ಕಾಡಿಸಿದಾಗ ನಿನ್ನ ಕೆಂಪನೆಯ ಕೆನ್ನೆಗಳು ಮತ್ತಷ್ಟು ರಂಗೇರಿ, ಸಿಟ್ಟಿನಿಂದ ಮುಖ ಧುಮ್ಮಿಸಿ ಕುಳಿತ ನಿನಗೆ ಸಾರಿ ಹೇಳಿ ಒಂದು ಮುತ್ತು ಕೊಟ್ಟು ಸಮಾಧಾನ ಪಡಿಸುವ ಚಾನ್ಸ್ ಅನ್ನು ನಾನು ತಪ್ಪಿಸಿಕೊಳ್ಳೋಕೆ ಇಷ್ಟ ಪಡುವುದಿಲ್ಲ ಗೊತ್ತಾ? ಪ್ರತಿಯೊಂದು ವಿಷಯದಲ್ಲೂ ಶಾಂತ ಮೂರ್ತಿಯಂತಿರುವ ನೀನು, ನಿನ್ನ ಕವಿತೆಯ ವಿಷಯದಲ್ಲಿ ತುಂಬಾ ಕರಾರುವಕ್ಕು . ತಪ್ಪಾಯಿತು ಮಾರಾಯಾ, ಇನ್ನು ನಿನ್ನ ಕವಿತೆಗಳ ಮೇಲೆ ತಮಾಷೆ ಮಾಡುವುದಿಲ್ಲ, ನಿನ್ನ ಕವಿತೆಗಳ ಮೇಲಾಣೆ. ಈಗಲಾದರೂ ಕೋಪ ಬಿಟ್ಟು ನನಗೆ ಮೆಸೇಜ್ ಮಾಡುತ್ತೀಯಾ ತಾನೆ?
ನಳಿನಿ. ಟಿ. ಭೀಮಪ್ಪ