Advertisement
ಇಂಡಿಯನ್ ಅಸೋಸಿಯೇಶನ್ ಆಫ್ ಯೂನಿವರ್ಸಿಟೀಸ್ ಆಶ್ರಯದಲ್ಲಿ, ರಜತ ಸಂಭ್ರಮದಲ್ಲಿರುವ ರಾಜೀವ ಗಾಂಧಿ ಆರೋಗ್ಯ ವಿ.ವಿ. ಮತ್ತು ಮೂಡುಬಿದಿರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್ 2020ರ ಜನವರಿ 2ರಿಂದ 6ರ ವರೆಗೆ ನಡೆಸಲಿರುವ 80ನೇ ಅಖೀಲ ಭಾರತ ಅಂತರ್ ವಿ.ವಿ. ಕ್ರೀಡಾಕೂಟದ ಕಚೇರಿಯನ್ನು ಸ್ವರಾಜ್ಯ ಮೈದಾನದ ಬಳಿಯ ಆಳ್ವಾಸ್ ಆಡಳಿತ ಕಚೇರಿಯ ಕಟ್ಟಡದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಈ ಕೂಟಕ್ಕೆ ಕ್ರೀಡಾಇಲಾಖೆಯಿಂದ ರೂ. 50 ಲಕ್ಷ ಅನುದಾನ ಒದಗಿಸುವ ಜತೆಗೆ ಸಂಘಟಕ ಡಾ| ಮೋಹನ ಆಳ್ವರ ಕೋರಿಕೆ ಮೇರೆಗೆ ಕೂಟಕ್ಕೆ ಅಗತ್ಯವಾದ ಕ್ರೀಡಾಸಲಕರಣೆಗಳನ್ನು ಒದಗಿಸುವುದಾಗಿ ಘೋಷಿಸಿದರು.
ಆಳ್ವಾಸ್ ಪ್ರವರ್ತಕ ಡಾ| ಮೋಹನ ಆಳ್ವರು ಶಿಕ್ಷಣ, ಕ್ರೀಡೆ, ಸಂಸ್ಕೃತಿ ವಿಚಾರದಲ್ಲಿ ಹೊಂದಿರುವ ಕಾಳಜಿ, ಪರಿಶ್ರಮ, ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಗೂ ಮನವರಿಕೆಯಾಗಿದೆ. ಈ ಎಲ್ಲ ವಿಚಾರಗಳಲ್ಲಿ ಸರಕಾರವು ಅಧಿಕಾರಿಗಳು ಹಾಗೂ ಮುತ್ಸದ್ದಿಗಳ ಜತೆ ಸಮಾಲೋಚನೆ ನಡೆಸುವಾಗ ಡಾ| ಆಳ್ವರನ್ನೂ ಖಂಡಿತ ಆಹ್ವಾನಿಸುತ್ತೇವೆ’ ಎಂದು ಈಶ್ವರಪ್ಪ ತಿಳಿಸಿದರು. ಕ್ರೀಡಾ ಆಯುಕ್ತ ಶ್ರೀನಿವಾಸ್ ಅವರು “ಪಾಟಿಯಾಲದ ಮಾದರಿಯಲ್ಲಿ ತುಮಕೂರಿನಲ್ಲಿ ಕ್ರೀಡಾ ವಿ.ವಿ. ಸ್ಥಾಪಿಸಲು ಸಿದ್ಧತೆ ನಡೆದಿದೆ’ ಎಂದು ತಿಳಿಸಿ, ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವ ಪ್ರೋತ್ಸಾಹಧನ, ಪೊಲೀಸ್ ಇಲಾಖೆಯಿಂದ ತೊಡಗಿ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಸೌಲಭ್ಯಗಳ ವಿವರ ನೀಡಿದರು.
Related Articles
Advertisement
ಕ್ರೀಡಾ ನೀತಿ ರಾಜ್ಯಕ್ಕೂ ಅನ್ವಯವಾಗಲಿಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಸ್ವಾಗತಿಸಿ, ಪ್ರಸ್ತಾವನೆಗೈದು, “ಈ ಹಿಂದೆ 3 ಬಾರಿ ಅಂತರ್ ವಿ.ವಿ. ಕ್ರೀಡಾಕೂಟಗಳನ್ನು ಆಳ್ವಾಸ್ ನಡೆಸಿದ್ದು, ಮುಂದಿನ ಕೂಟದಲ್ಲಿ 4,000 ಕ್ರೀಡಾಳುಗಳು ಸೇರಿದಂತೆ 6,000 ಮಂದಿ ಪಾಲ್ಗೊಳ್ಳಲಿದ್ದಾರೆ’ ಎಂದರು. ಕೇಂದ್ರದ ಕ್ರೀಡಾನೀತಿಗೂ ರಾಜ್ಯದ ಕ್ರೀಡಾ ನೀತಿಗೂ ಬಹಳ ವ್ಯತ್ಯಾಸ ಇರುವುದರಿಂದ ರಾಜ್ಯದ ಕ್ರೀಡಾಳುಗಳಿಗೆ ಅನ್ಯಾಯ ವಾಗುತ್ತಿದೆ. ಕೇಂದ್ರದ ಕ್ರೀಡಾ ನೀತಿ ಯನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳಬೇಕಾಗಿದೆ; ರಾಜ್ಯದ ಕ್ರೀಡೆ ಯಾವುದು, ಕಲೆ ಯಾವುದು ಎಂಬುದೂ ಘೋಷಣೆ ಯಾಗಬೇಕಾಗಿದೆ’ ಎಂದು ಅವರು ಆಗ್ರಹಿಸಿದರು. ಕ್ರೀಡಾ ಇಲಾಖೆಯ ವಿಶೇಷ ಅಧಿಕಾರಿ ಜಯರಾಮ್, ಈಶ್ವರಪ್ಪ ಅವರ ಪುತ್ರ, ಶಿವಮೊಗ್ಗ ಜಿ.ಪಂ. ಆರೋಗ್ಯ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತೇಶ್, ದ.ಕ. ಜಿ.ಪಂ. ಸಿಇಒ ಆರ್. ಸೆಲ್ವಮಣಿ ಉಪಸ್ಥಿತರಿ ದ್ದರು. ಉಪನ್ಯಾಸಕ ವೇಣುಗೋಪಾಲ್ ನಿರೂಪಿಸಿದರು. ಫಿಟ್ ಕರ್ನಾಟಕ
“ಕೇರಳ, ಹರ್ಯಾಣವೇ ಮೊದಲಾದ ರಾಜ್ಯಗಳಲ್ಲಿ ಪ್ರತಿಭಾವಂತ ಕ್ರೀಡಾಳುಗಳಿಗೆ ನೀಡಲಾಗುವಂತೆ ಕರ್ನಾಟಕದಲ್ಲೂ ಕೃಪಾಂಕ ನೀಡುವಂತಾಗಬೇಕು. ಕಲೆ, ಕ್ರೀಡೆ, ಶಿಕ್ಷಣ ಮೊದಲಾದ ರಂಗಗಳ ವಿಷಯದಲ್ಲಿ “ಫಿಟ್ ಕರ್ನಾಟಕ’ ಎಂಬ ಸಮಾವೇಶ ನಡೆಸಿ ಈ ರಾಜ್ಯದ ವಿಶಿಷ್ಟತೆ, ತಾಕತ್ತು ಏನು ಎಂಬುದು ಎಲ್ಲರಿಗೂ ಗೊತ್ತಾಗುವಂತಾಗಲಿ; ಈ ವಿಚಾರದಲ್ಲಿ ಸರಕಾರ ಬಯಸುವುದಾದರೆ ಎಲ್ಲ ಸಹಕಾರ ನೀಡುವೆ’ ಎಂದು ಡಾ| ಮೋಹನ ಆಳ್ವರು ಪ್ರಕಟಿಸಿದರು. “1984ರಿಂದ ಏಕಲವ್ಯ ಕ್ರೀಡಾ ಸಂಸ್ಥೆಯ ಮೂಲಕ 50 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಅವಕಾಶ ಕಲ್ಪಿಸಿ, ನಾಡಿಗೆ ಕೀರ್ತಿ ತಂದ ಕ್ರೀಡಾಳುಗಳನ್ನು ಬೆಳೆಸಿ, ಈಗ 800 ಮಂದಿ ಇದ್ದಾರೆ, ವಾರ್ಷಿಕ ರೂ. 10 ಕೋಟಿ ನಿರ್ವಹಣ ವೆಚ್ಚವಾಗುತ್ತಿದೆ. ಆದರೆ, ಸರಕಾರದ ಯಾವುದೇ ಆರ್ಥಿಕ ನೆರವು ಲಭಿಸಿಲ್ಲ ‘ ಎಂದು ವಿಷಾದಿಸಿದರು. ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿ ಎಳವೆಯಿಂದಲೂ ಆಟೋಟಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತ ಬಂದಿದ್ದು ಕಾಲೇಜಿನಲ್ಲಿ ಕಬಡ್ಡಿ , ಕೊಕ್ಕೋ ತಂಡಗಳ ನಾಯಕನಾಗಿದ್ದೆ. ಎಷ್ಟು ವ್ಯಸ್ತನಾಗಿದ್ದರೂ ಸುಮಾರು 25 ವರ್ಷ ಶಟ್ಲ ಆಡಿದ ಜೀವ ಇದು. ನನ್ನಂಥವರಿಗೆ ಶುಗರ್, ಬಿಪಿ ಬರೋದಿಲ್ಲ, ನನ್ನ ತಂಟೆಗೆ ಬಂದವರಿಗೆ ಬರುತ್ತೆ ನೋಡಿ.
– ಈಶ್ವರಪ್ಪ,ಕ್ರೀಡಾ ಸಚಿವ