Advertisement
ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವಾಗ 12 ಕಡೆ, ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುವ ರಸ್ತೆಯಲ್ಲಿ 12 ಕಡೆ ದಿನದ 24 ತಾಸು ಈ ಕ್ಯಾಮೆರಾ ಕಾರ್ಯನಿರ್ವಹಿಸಲಿದ್ದು, ಹೆದ್ದಾರಿ ವಾಹನ ಮೇಲೆ ನಿಗಾವಹಿಸಲಿವೆ. ಇನ್ನು ಜಿಲ್ಲಾ ಪೊಲೀಸ್ ಮುಖ್ಯ ಕಚೇರಿಯಲ್ಲಿ ಈ ಕ್ಯಾಮೆರಾಗಳಲ್ಲಿ ಸೆರೆಯಾಗುವ ದೃಶ್ಯಗಳನ್ನು ವೀಕ್ಷಣೆ ಮಾಡಲಾಗುತ್ತದೆ. ಇದರಿಂದಾಗಿ ಹೆದ್ದಾರಿಯಲ್ಲಿ ನಡೆಯುವ ಎಲ್ಲಾ ಚಟುವಟಿಕೆ ಮೇಲೆ ಪೊಲೀಸರು ಹದ್ದಿನಕಣ್ಣಿರಿಸಲು ಸಹಕಾರಿಯಾಗಲಿದೆ.
Related Articles
Advertisement
10 ದಿನದಲ್ಲಿ 2 ಸಾವಿರಕ್ಕೂ ಅಧಿಕ ಪ್ರಕರಣ ದಾಖಲು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಿರುವ ಜಿಲ್ಲಾ ಪೊಲೀಸ್ ಇಲಾಖೆ, ಕಳೆದ 10 ದಿನಗಳಲ್ಲಿ 2161 ಪ್ರಕರಣ ದಾಖಲಿಸಿದ್ದು, ಭರ್ಜರಿ ದಂಡ ವಸೂಲಿ ಮಾಡಿದೆ. ಜು.6 ರಿಂದ ಎಕ್ಸ್‌ಪ್ರೆಸ್ ವೇನಲ್ಲಿ ರಾಡಾರ್‌ಗನ್‌ನೊಂದಿಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ದಂಡ ವಿಧಿಸಲು ಆರಂಭಿಸಿತ್ತು. ಇದುವರೆಗೆ ಜಿಲ್ಲೆಯ 4 ಠಾಣೆಗಳಿಂದ 16 ಲಕ್ಷ ರೂ.ಗಳಿಗೂ ಹೆಚ್ಚು ದಂಡವನ್ನು ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಂದ ವಸೂಲಿ ಮಾಡಲಾಗಿದೆ.ಜಿಲ್ಲೆಯಲ್ಲಿ ಅತಿವೇಗದ ಚಾಲನೆ 804, ಸೀಟ್‌ಬೆಲ್ಟ್ ಧರಿಸದಿರುವುದು 181, ಹೆಲ್ಮೆಟ್ ರಹಿತ ಪ್ರಯಾಣ 247, ಲೈನ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 553 ಪ್ರಕರಣ ದಾಖಲಿಸಲಾಗಿದೆ.
ಏನಿದು ಎಎನ್‌ಪಿಆರ್ ಕ್ಯಾಮೆರಾ?: ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಾರ್ಡ್‌ರ್ ಎಂಬ ಎಎನ್‌ಪಿಆರ್‌ನ ವಿಸ್ತೃತ ರೂಪ. ಹೆದ್ದಾರಿಯಲ್ಲಿ ಅಳವಡಿಸುವ ಇತರೆ ಕ್ಯಾಮರಾಗಳು ಹೆದ್ದಾರಿಯಲ್ಲಿ ಸಂಚರಿಸುವ ನಂಬರ್‌ಪ್ಲೇಟ್ ಅನ್ನು ತೀರಾ ಸನಿಹಕ್ಕೆ ಬರುವವರೆಗೆ ಗುರುತಿಸುವುದಿಲ್ಲ. ಆದರೆ, ಈ ಕ್ಯಾಮೆರಾ ಕಾರಿನ ನಂಬರ್‌ಪ್ಲೇಟ್ ಅನ್ನು ಸ್ಕ್ಯಾನ್ ಮಾಡಿ ರೆಕಾರ್ಡ್ ಮಾಡುತ್ತದೆ. ನಂಬರ್‌ಪ್ಲೇಟ್‌ನಲ್ಲಿರುವ ಐಎನ್‌ಡಿ ಬೋರ್ಡ್‌ನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್‌ಮಾಡಿ ಅದು ಡಾಟಾವನ್ನು ಸರ್ವರ್‌ಗೆ ಕಳುಹಿಸಿಕೊಡುತ್ತದೆ. ಈಗಾಗಲೇ ದೊಡ್ಡದೊಡ್ಡ ನಗರ, ಪ್ರಮುಖ ಎಕ್ಸ್‌ಪ್ರೆಸ್ ವೇಗಳಲ್ಲಿ ಈ ರೀತಿಯ ಕ್ಯಾಮೆರಾ ಅಳವಡಿಸಿ ಹೆದ್ದಾರಿ ಮೇಲೆ ಪೊಲೀಸ್ ಇಲಾಖೆ ನಿಗಾವಹಿಸುತ್ತದೆ.
ಕ್ಯಾಮೆರಾಗಳನ್ನು ಎಲ್ಲೆಲ್ಲಿ ಅಳವಡಿಸಬೇಕು ಎಂದು ಜಾಗವನ್ನು ಗುರುತಿಸಲಾಗಿದೆ. 24 ಕ್ಯಾಮೆರಾ ಅಳವಡಿಸಲಾಗುವುದು. ಇದರಿಂದ ಹೆದ್ದಾರಿಯಲ್ಲಿ ನಡೆಯುವ ಪ್ರತಿ ಚಟುವಟಿಕೆ ಮೇಲೆ ನಿಗಾವಹಿಸಲು ಸಹಕಾರಿ ಆಗಲಿದೆ. ●ಕಾರ್ತಿಕ್‌ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
-ಸು.ನಾ.ನಂದಕುಮಾರ್