Advertisement

ಉಳ್ಳಾಲ ಕೋಡಿಯಲ್ಲಿ ಇನ್ನೋರ್ವ ಮಹಿಳೆಗೆ ಸೋಂಕು ದೃಢ

12:15 AM Jun 26, 2020 | Sriram |

ಉಳ್ಳಾಲ: ಉಳ್ಳಾಲದಲ್ಲಿ ಕೋವಿಡ್ 19 ಆತಂಕ ಮುಂದುವರಿದಿದ್ದು ಉಳ್ಳಾಲ ಠಾಣಾ ಎಸ್‌ಐ ಸೇರಿದಂತೆ ಇಬ್ಬರು ಮಹಿಳೆಯರಿಗೆ ಸೋಂಕು ತಗಲಿ ಮಹಿಳೆ ಯೊಬ್ಬರು ಮೃತಪಟ್ಟ ಬೆನ್ನಿಗೆ ಇಂದು ಉಳ್ಳಾಲ ಕೋಡಿಯಲ್ಲಿ ಇನ್ನೋರ್ವ ಮಹಿಳೆಗೆ ಸೋಂಕು ದೃಢವಾಗಿದೆ.

Advertisement

ಉಳ್ಳಾಲ ಕೋಡಿಯ ಮಹಿಳೆ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾ ಗಿ ದ್ದು, ಚಿಕಿತ್ಸೆಯ ಮೊದಲು ಗಂಟಲ ದ್ರವ ಪರೀಕ್ಷೆಯ ಸಂದರ್ಭ ಸೋಂಕು ತಗಲಿರುವುದು ದೃಢಪಟ್ಟಿದೆ. ಉಳ್ಳಾಲ ಕೋಡಿ ಮನೆ ಯನ್ನು ಸೀಲ್‌ಡೌನ್‌ ಮಾಡಲು ಸಿದ್ಧತೆ ನಡೆದಿದೆ.

ಅಝಾದ್‌ನಗರದಲ್ಲಿ 56 ಜನರಿಗೆ ಕ್ವಾರಂಟೈನ್‌
ಉಳ್ಳಾಲದ ಅಝಾದ್‌ನಗರದಲ್ಲಿ ಇಬ್ಬರು ಮಹಿಳೆಯರಿಗೆ ಸೋಂಕು ದೃಢ ವಾದ ಹಿನ್ನೆಲೆಯಲ್ಲಿ ಎರಡು ಕಾಂಪೌಂಡ್‌ ನಲ್ಲಿದ್ದ ನಾಲ್ಕು ಮನೆಗಳನ್ನು ಸೀಲ್‌ಡೌನ್‌ ಮಾಡಿದ್ದು ಮನೆಯಲ್ಲಿದ್ದ ಒಟ್ಟು 26 ಜನರನ್ನು ಕ್ವಾರಂಟೈನ್‌ಗೆ ಒಳಪಡಿ ಸಲಾ ಗಿದೆ. ಇದರೊಂದಿಗೆ ಎರಡು ಖಾಸಗಿ ಆಸ್ಪತ್ರೆಯ 30 ಸಿಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಪೊಲೀಸ್‌ ಠಾಣೆ ಸೀಲ್‌ಡೌನ್‌
ಉಳ್ಳಾಲ ಎಸ್‌ಐಗೆ ಕೊರೊನಾ ಸೋಂಕು ದೃಢ ವಾದ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆ ಯನ್ನು ಇಂದು ಸೀಲ್‌ಡೌನ್‌ ಮಾಡಲಾಯಿತು.

ಸೋಂಕು ತಗಲಿರುವ ಪೊಲೀಸ್‌ ಸಿಬಂದಿ ಐದು ದಿನಗಳಿಂದ ಠಾಣೆಗೆ ಬಂದಿರಲಿಲ್ಲ. ಆದರೆ ಪೊಲೀಸ್‌ ಠಾಣೆಯ ಎಲ್ಲ ಪೊಲೀಸರು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

Advertisement

ಪೊಲೀಸ್‌ ಕ್ವಾರ್ಟರ್ಸ್‌ಸೀಲ್‌ಡೌನ್‌
ಪೊಲೀಸ್‌ ಠಾಣಾ ಕಚೇರಿಯನ್ನು ಹೊರಗಿನ ಫೋರ್ಟಿಕಾದಲ್ಲಿ ಆರಂಭಿಸಿದ್ದು ಪಕ್ಕದ ಕಟ್ಟಡದಲ್ಲಿ ಪೊಲೀಸರು ಠಾಣೆಯ ದೈನಂದಿನ ಕಾರ್ಯವನ್ನು ನಡೆಸುತ್ತಿದ್ದಾರೆ. ಅದಲ್ಲದೆ ಅಲ್ಲಿಯ ಪೊಲೀಸ್‌ ಕ್ವಾರ್ಟರ್ಸ್‌ಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ಜಾಗೃತಿ ಅಗತ್ಯ
ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ತೋರಿಸದೆ ಜ್ವರ ಬಂದಲ್ಲಿ ತತ್‌ಕ್ಷಣ ಪರೀಕ್ಷೆ ನಡೆಸಬೇಕು. ನಾಲ್ಕು ಪ್ರಕರಣಗಳಿಂದ ಸೋಂಕು ಇನ್ನಷ್ಟು ಹರಡುವ ಸಾಧ್ಯತೆ ಇದ್ದು ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿ.
 - ಯು.ಟಿ.ಖಾದರ್‌, ಶಾಸಕರು

ರಕ್ಷಣೆ ಅಗತ್ಯ
ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ನಾಲ್ಕು ಜನರಿಗೆ ಸೋಂಕು ದೃಢ ವಾಗಿದೆ. ಆವಶ್ಯಕತೆ ಇದ್ದರೆ ಮಾತ್ರ ಹೊರಗೆ ಬನ್ನಿ, ಸಾಮಾ ಜಿಕ ಅಂತರವನ್ನು ಕಾಪಾಡಿಕೊಳ್ಳಿ. ನಮ್ಮ ರಕ್ಷಣೆ ನಮ್ಮ ಜವಾಬ್ದಾರಿಯಾಗಿರಬೇಕು . ರೋಗಕ್ಕೆ ಭಯಪಡಬೇಕಾಗಿಲ್ಲ. ಆದರೆ ಎಚ್ಚೆತ್ತುಕೊಳ್ಳಬೇಕು.
ರಾಯಪ್ಪ,
ಉಳ್ಳಾಲ ನಗರಸಭೆ ಪೌರಾ ಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next