Advertisement

ಇನ್ನೊಂದು ವಾರ ಕಾಯ್ರಿ, ಮಂತ್ರಿ ಯಾರಾಗ್ತಾರೆ ನೋಡಿ: ವಿನಯ್‌

06:40 AM Jun 18, 2018 | |

ಧಾರವಾಡ: “ಇನ್ನೊಂದು ವಾರ, ಯಾರ್ಯಾರು ಮಂತ್ರಿ ಆಗುತ್ತಾರೆ ಎಂಬುದನ್ನು ನೀವೇ ನೋಡಿ’ ಎಂದು ಮಾಜಿ ಸಚಿವ ವಿನಯ್‌ ಕುಲಕರ್ಣಿ ಹೇಳಿದರು. 

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಬಿ.ಪಾಟೀಲರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಗೌರಿ ಲಂಕೇಶ್‌ ಹಂತಕರು ತಮ್ಮನ್ನು ಕೊಲೆ ಮಾಡಲು ಯೋಜಿಸಿದ್ದರು ಎನ್ನುವ ಸತ್ಯ ಹೊರ ಬಿದ್ದಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ವಿನಯ್‌, ಮಾಧ್ಯಮಗಳ ಮೂಲಕ ನನಗೆ ಈ ವಿಷಯ ಗೊತ್ತಾಗಿದೆ. ಆದರೆ ಇದೆಲ್ಲವನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಅದು ಪೊಲೀಸರಿಗೆ ಮೊದಲೇ ಗೊತ್ತಿರಬಹುದು. ನನಗೆ ಹಿಂದಿನಿಂದಲೂ ಭದ್ರತೆ ಒದಗಿಸಿದ್ದಾರೆ. ಪೊಲೀಸರು ಮತ್ತು ಗುಪ್ತಚರ ಇಲಾಖೆಗೆ ಆ ವಿಚಾರ ಬಿಟ್ಟಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next