Advertisement
ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ದೇಶದ ಕೇಂದ್ರ, ಪೂರ್ವ, ವಾಯವ್ಯ ಭಾಗದಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚೇ ಆಗಿರುತ್ತದೆ. ಇದರ ಜತೆಗೆ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಛತ್ತೀಸ್‌ಗಡ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಹರ್ಯಾಣಗಳ ಕೆಲವು ಭಾಗಗಳಲ್ಲಿ ತಾಪಮಾನ ಸಾಮನ್ಯಕ್ಕಿಂತ ಹೆಚ್ಚೇ ಆಗಿರಲಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.
ಬಯಲು ಪ್ರದೇಶದಲ್ಲಿ ತಾಪಮಾನ ಕನಿಷ್ಠ 40 ಡಿಗ್ರಿ ಸೆಲಿÏಯಸ್, ಕರಾವಳಿಯಲ್ಲಿ 37 ಡಿಗ್ರಿ ಸೆಲಿÏಯಸ್, ಗುಡ್ಡಗಾಡು ಪ್ರದೇಶದಲ್ಲಿ 30 ಡಿಗ್ರಿ ಸೆಲಿÏಯಸ್ ಏರಿಕೆಯಾದರೆ ಅದನ್ನು ಬಿಸಿ ಗಾಳಿಯ ಪರಿಸ್ಥಿತಿ ಎಂದು ತೀರ್ಮಾನಿಸಲಾಗುತ್ತದೆ. 1901ರ ಬಳಿಕ ಫೆಬ್ರವರಿಯಲ್ಲಿ ಎರಡನೇ ಅತ್ಯಧಿಕ ತಾಪಮಾನ ತಿಂಗಳು ಎಂದು ದಾಖಲೂ ಆಗಿತ್ತು. ಕಳೆದ ವರ್ಷದ ಮಾರ್ಚ್‌ನಲ್ಲಿ ಕೂಡ 121 ವರ್ಷಗಳ ಮೂರನೇ ಅತ್ಯಂತ ಗರಿಷ್ಠ ಒಣ ಹವೆ ಎಂಬ ಅಂಶ ಕೂಡ ದಾಖಲಾಗಿತ್ತು. ಮಳೆಯೂ ಬೀಳಲಿದೆ:
ತಾಪಮಾನ ಏರಿಕೆಯ ಜತೆಗೆ ಈ ತಿಂಗಳಲ್ಲಿ ದೇಶದ ಅಲ್ಲಲ್ಲಿ ಮಳೆಯೂ ಬೀಳಲಿದೆ. ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವರ್ಷ ಧಾರೆಯ ಸಿಂಚನ ತಂಪನ್ನೆರೆಯುವ ನಿರೀಕ್ಷೆ ಇದೆ. 1971ರಿಂದ 2020ರ ನಡುವಿನ ಅವಧಿಯಲ್ಲಿ ಏಪ್ರಿಲ್‌ನಲ್ಲಿ ಸರಾಸರಿ ಮಳೆಯಾಗಿತ್ತು. ಹೀಗಾಗಿ, ಈ ತಿಂಗಳಲ್ಲಿ ಮಳೆ ಬೀಳುವ ಸಾಧ್ಯತೆಯನ್ನು ಐಎಂಡಿ ನೀಡಿದೆ.
Related Articles
ಮುಂಗಾರು ಪೂರ್ವ ಮಳೆಯಿಂದಾಗಿ ಉತ್ತರ ಪ್ರದೇಶದ ಕೆಲವು ಭಾಗಗಳು, ಹರ್ಯಾಣ, ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿನ ತರಕಾರಿ ಮತ್ತು ಹಣ್ಣುಗಳ ನಾಶವಾಗಿದೆ.
Advertisement
ಬೆಂಗಳೂರಲ್ಲಿ 35; ಕಲಬುರಗಿಯಲ್ಲಿ 38ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ತಾಪಮಾನ 35 ಡಿಗ್ರಿ ಸೆಲಿÏಯಸ್ ದಾಖಲಾಗಿದೆ. ಕಲಬುರಗಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾಯಚೂರು 37, ಗದಗ 36.2, ವಿಜಯಪುರ, ಮೈಸೂರು, ಶಿವಮೊಗ್ಗ ತಲಾ 36, ಮಂಡ್ಯ 35.6, ಮಂಗಳೂರು 34.5 ಡಿಗ್ರಿ ಸೆಲಿÏಯಸ್ ಉಷ್ಣಾಂಶ ದಾಖಲಾಗಿದೆ. ಇದೇ ವೇಳೆ, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಏ.3ರ ವರೆಗೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ಕೊಟ್ಟಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಏ.3ರ ವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಗಳಿವೆ. ಶನಿವಾರ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರೆದಿದೆ. ಕೋಲಾರದ ರಾಯಲ್ಪಾಡುವಿನಲ್ಲಿ 7 ಸೆಂ.ಮೀ, ದೇವನಹಳ್ಳಿಯಲ್ಲಿ 3 ಸೆಂ.ಮೀ ಮಳೆಯಾಗಿದೆ.