ಎಚ್.ಡಿ.ಕೋಟೆ: ಸಾಮಾಜಿಕ ವಲಯಾರಣ್ಯ ವ್ಯಾಪ್ತಿಯ ಶವ ಟೈಗರ್‌ಬ್ಲಾಕ್ ಸಮೀಪದ ಜಮೀನೊಂದರ ಬಳಿ ಮತ್ತೊಂದು ಹುಲಿ ಅನುಮಾನಸ್ಪಾದವಾಗಿ ಸಾವನ್ನಪ್ಪಿರುವುದು ಸೋಮವಾರ ಬೆಳಕಿಗೆ ಬಂದಿದೆ. ಒಂದು ವಾರದ ಅಂತರದಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಎರಡು ಹುಲಿಗಳು ಸಾವನ್ನಪ್ಪಿದಂತಾಗಿದೆ.
ತಾಲೂಕಿನ ಬುದನೂರು, ಕಲ್ಲಹಟ್ಟಿ, ಕೆ.ಎಡತೊರೆ, ಅಣ್ಣೂರು, ಹೊಸಹಳ್ಳಿ, ಟೈಗರ್ ಬ್ಲಾಕ್ ಗ್ರಾಮಗಳ ಹಂಚಿನಲ್ಲಿ ಆಗಾಗ ಕಾಣಿಸಿಕೊಂಡು ದನಕರುಗಳ ಮೇಲೆ ದಾಳಿ ಮಾಡಿ ಗ್ರಾಮಗಳ ಜನರಲ್ಲಿ ಭಯ ಹುಟ್ಟಿಸಿದ್ದ ಸುಮಾರು 12 ವರ್ಷ ಪ್ರಾಯದ ಹೆಣ್ಣು ಹುಲಿಯ ಶವ ಟೈಗರ್ ಬ್ಲಾಕ್ ಸಮೀಪದ ಜಮೀನೊಂದರ ಬಳಿ ಸೋಮವಾರ ಬೆಳಗ್ಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗ್ರಾಮದ ಜನರು ತಕ್ಷಣ ಎಚ್.ಡಿ.ಕೋಟೆ ಸಾಮಾಜಿಕ ವಲಯಾರಣ್ಯಾ ಕಾರಿಗಳಿಗೆ ತಕ್ಷಣ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅ ಧಿಕಾರಿಗಳು ಇಲಾಖೆಯ ಮೇಲ ಧಿಕಾರಿಗಳ ಬರುವಿಕೆಗಾಗಿ ಕಾದು ಕೂತರು. ಹಿರಿಯ ಅಧಿ ಕಾರಿಗಳು ಹಾಗೂ ವೈದ್ಯರು ಬಂದ ನಂತರ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಸುಟ್ಟು ಹಾಕಲಾಯಿತು. ಸ್ಥ
ಳಕ್ಕೆ ಬಂಧ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಹುಲಿಗೆ ವಯಸ್ಸಾಗಿದ್ದು, ಎರಡು ದಿನಗಳ ಹಿಂದಷ್ಟೇ ಸಾವಿಗೀಡಾಗಿದೆ ಎಂದು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಸಾಮಾಜಿಕ ವಲಯಾರಣ್ಯದ ಡಿಸಿಎಫ್ ಪ್ರಸನ್ನಕುಮಾರ್, ಆರ್‌ಎಫ್‌ಒ ಮಧು, ವನ್ಯಜೀವಿ ವಿಭಾಗದ ಪಶುವೈದ್ಯ ಡಾ.ನಾಗರಾಜ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.
ಹುಲಿಗೆ ವಿಷ ಇಟ್ಟರಾ ಪಾಪಿಗಳು..?: ತಾಲೂಕಿನ ಟೈಗರ್ ಬ್ಲಾಕ್ ಬಳಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ 12 ವರ್ಷ ಪ್ರಾಯದ ಹೆಣ್ಣು ಹುಲಿ ಕಳೆದ ಒಂದು ವರ್ಷದಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಣಿಸಿಕೊಂಡರೂ, ಇದುವರೆಗೂ ಯಾರಿಗೂ ತೊಂದರೆ ನೀಡಿರಲಿಲ್ಲ. ಜನ ನೋಡಿದರೇ ತಾನೆ ಕಾಲ್ಕಿಳುತಿತ್ತು. ಸಂಜೆ ನಂತರ ಹತ್ತಿರದ ಮೇಟಿಕುಪ್ಪೆ ವನ್ಯಜೀವಿ ವಲಯದ ಕಾಡು ಸೇರುತ್ತಿದ್ದ ಹುಲಿಗೆ ಯಾರೋ ಕಿಡಿಗೇಡಿಗಳು ಹಂದಿ ಹಾವಳಿ ತಡೆಗೆ ಇರಿಸಿದ್ದ ವಿಷದ ಆಹಾರ ತಿಂದು ಸಾವನ್ನಪ್ಪಿದೆ ಎಂದು ಗ್ರಾಮಗಳ ಜನರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಳೆದ ವಾರ ಪಿರಿಯಪಟ್ಟಣ ತಾಲೂಕಿನ ಅಳಲೂರು ಸಮೀಪದ ಭೀಮನಕಟ್ಟೆ ಬಳಿ ಗಂಡು ಹುಲಿ ಶವ ಪತ್ತೆಯಾಗಿತ್ತು. ಈಗ ತಾಲೂಕಿನ ಟೈಗರ್ ಬ್ಲಾಕ್ ಬಳಿ ಮತ್ತೊಂದು ಹುಲಿ ಶವ ಪತ್ತೆಯಾಗಿದ್ದು, ಒಟ್ಟಾರೆ ಒಂದು ವಾರದ ಅಂತರದಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಎರಡು ಹುಲಿಗಳು ಅನುಮಾಸ್ಪಾದವಾಗಿ ಸಾವನ್ನಪ್ಪಿರುವುದು ಪ್ರಾಣಿ ಪ್ರಿಯರಲ್ಲಿ ಅತಂಕ ಮೂಡಿಸಿದೆ.