ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಹುಲಿ ಯೋಜನೆ ವ್ಯಾಪ್ತಿಗೆ ಒಳಪಡುವ ಮದ್ದೂರು ಅರಣ್ಯ ವಲಯದ ದೋಣಗಲ್ಲಾರೆ ಅರಣ್ಯ ಪ್ರದೇಶದಲ್ಲಿ ಸುಮಾರು ಆರು ವರ್ಷ ಪ್ರಾಯದ ಗಂಡು ಹುಲಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇದು ಕಳೆದ ಐದಾರು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಹುಲಿಯ ಮೈಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದು, ಇದು ಮತ್ತೂಂದು ಹುಲಿಯೊಂದಿಗೆ ಸೀಮೆಯನ್ನು ಕಾಯ್ದುಕೊಳ್ಳುವ ಸಲುವಾಗಿ (ಟೆರಿಟೋರಿಯಲ್ ಫೈಟ್) ಕಾದಾಟ ನಡೆಸಿ ಮೃತಪಟ್ಟಿರಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಹುಲಿಯ ಮರಣೋತ್ತರ ಪರೀಕ್ಷೆಯನ್ನು ಡಾ.ನಾಗರಾಜು ನಡೆಸಿದ ನಂತರ ಕಳೇಬರವನ್ನು ಸ್ಥಳದಲ್ಲೇ ಸುಟ್ಟು ಹಾಕಲಾಯಿತು. ಕಳೆದ ಎರಡು ತಿಂಗಳ ಅವಧಿಯಲ್ಲಿ ಬಂಡೀಪುರ ಅರಣ್ಯದಲ್ಲಿ ಮೂರು ಆನೆ ಮರಿ ಮತ್ತು ಒಂದು ಕಾಡಾನೆ ಹಾಗೂ 3 ಹುಲಿಗಳು
ಸಾವನ್ನಪ್ಪಿವೆ.