ಆಕ್ಲಂಡ್: ಕಳೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್- ನ್ಯೂಜಿಲ್ಯಾಂಡ್ ಪಂದ್ಯ ಟೈ ಆಗಿರುವ ಇನ್ನೂ ನೆನಪಿನಂಗಳದಲ್ಲಿರುವಾಗಲೇ ಉಭಯ ತಂಡಗಳ ಮತ್ತೊಂದು ಪಂದ್ಯ ಟೈ ಆಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಇಂಗ್ಲೆಂಡ್ ಜಯ ಸಾಧಿಸಿದೆ.
ಆಂಕ್ಲಡ್ ಮೈದಾನದಲ್ಲಿ 11 ಓವರ್ ಗೆ ಕಡಿತವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ 146 ರನ್ ಗಳಿಸಿತು. ಗಪ್ಟಿಲ್ 20 ಎಸೆತಗಳಲ್ಲಿ 50 ರನ್, ಮನ್ರೋ 31 ಎಸೆತಗಳಲ್ಲಿ 46 ರನ್ ಬಾರಿಸಿದರು.
ಇದಕ್ಕೆ ಉತ್ತರಿಸಿದ ಆಂಗ್ಲರು 11 ಓವರ್ ಗಳಲ್ಲಿ 146 ರನ್ ಗಳಿಸಿದರು. ಕೊನೆಯ ಮೂರು ಎಸೆಗಳಲ್ಲಿ 13 ರನ್ ಅವಶ್ಯಕತೆಯಿದ್ದಾಗ 9ನೇ ಆಟಗಾರನಾಗಿ ಬಂದ ಕ್ರಿಸ್ ಜೋರ್ಡನ್ 12 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿದರು.
ಸೂಪರ್ ಓವರ್ ಆಡಲು ಬಂದ ಇಂಗ್ಲೆಂಡ್ ನ ಬೆರಿಸ್ಟೋ ಎರಡು ಸಿಕ್ಸರ್ ಸಹಿತ 17 ರನ್ ಬಾರಿಸಿದರು. ಕಿವೀಸ್ ಗೆಲುವಿಗೆ ಆರು ಎಸೆತದ ಮುಂದೆ 18 ರನ್ ಗುರಿ. ಆದರೆ ಕಿವೀಸ್ ಅಟಗಾರ ಸೈಫರ್ಟ್ ವಿಫಲರಾಗಿ ತಂಡ ಎಂಟು ರನ್ ನಿಂದ ಸೋಲನುಭವಿಸಿತು.
ಈ ಜಯದೊಂದಿಗೆ ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯನ್ನು 3-2 ಅಂತರದಿಂದ ವಶಪಡಿಸಿತು.