Advertisement

ಮತ್ತೂಂದು ಸುತ್ತಿನ ಬ್ಯಾಂಕ್‌ ವಿಲೀನ?

06:00 AM Sep 20, 2018 | Team Udayavani |

ಹೊಸದಿಲ್ಲಿ: ಬ್ಯಾಂಕ್‌ ಆಫ್ ಬರೋಡಾ, ವಿಜಯಾ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳನ್ನು ವಿಲೀನ ಘೋಷಣೆ ಮಾಡಿದ ಕೇಂದ್ರ ಇದೀಗ ಮತ್ತೂಂದು ಸುತ್ತಿನ ವಿಲೀನಕ್ಕೆ ಸಿದ್ಧತೆ ನಡೆಸಿದೆ. “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿರುವ ಪ್ರಕಾರ ನಷ್ಟದಲ್ಲಿರುವ ಅಲಹಾಬಾದ್‌ ಬ್ಯಾಂಕ್‌, ಯುಕೋ ಬ್ಯಾಂಕ್‌ ಹಾಗೂ ಯುನೈಟೆಡ್‌ ಬ್ಯಾಂಕ್‌ ಆಫ್ ಇಂಡಿಯಾ ವಿಲೀನಕ್ಕೂ ಸರಕಾರ ಚಿಂತನೆ ನಡೆಸಿದೆ. ಸದ್ಯ ನಿರ್ಧರಿಸಿರುವ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ತೆಗೆದುಕೊಳ್ಳಬಹುದಾಗಿದ್ದರೂ, ಇನ್ನು ಕೆಲವೇ ದಿನಗಳಲ್ಲಿ ಈ ಮೂರು ಬ್ಯಾಂಕ್‌ಗಳನ್ನೂ ವಿಲೀನ ನಿರ್ಧಾರ ಹೊರಡಿಸ ಬಹುದು ಎಂದು ಹೇಳಲಾಗಿದೆ. ಅಲಹಾಬಾದ್‌ ಹಾಗೂ ಯುಕೋ ಬ್ಯಾಂಕ್‌, ಯುನೈಟೆಡ್‌ ಬ್ಯಾಂಕ್‌ ಆಫ್ ಇಂಡಿಯಾ ನಷ್ಟದಲ್ಲಿದ್ದು, ಸಾಲ ನೀಡುವಿಕೆಗೆ ಸಂಬಂಧಿಸಿದಂತೆ ರಿಸರ್ವ್‌ ಬ್ಯಾಂಕ್‌ ಈಗಾಗಲೇ ಹಲವು ನಿರ್ಬಂಧಗಳನ್ನು ಹೇರಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next