Advertisement

ದರ್ಶನ್ ‌ರಾಬರ್ಟ್‌ ಮತ್ತೊಂದು ಪೋಸ್ಟರ್‌

04:23 AM May 25, 2020 | Lakshmi GovindaRaj |

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ರಾಬರ್ಟ್‌ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಚಿತ್ರದ ತಂಡ ರಂಜಾನ್‌ ಹಬ್ಬದ ಪ್ರಯುಕ್ತ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡುವುದಾಗಿ ಹೇಳಿದೆ. ಈ ನಡುವೆಯೇ  ಅಭಿಮಾನಿಗಳು ಸಖತ್‌ ಖುಷಿಯಾಗಿದ್ದು, ಚಿತ್ರ ಕೂಡ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ.

Advertisement

ರಂಜಾನ್‌ ಹಬ್ಬದ ಪ್ರಯುಕ್ತ ರಾಬರ್ಟ್‌ ಚಿತ್ರದ ಹೊಸ ಪೋಸ್ಟರ್‌  ಬಿಡುಗಡೆ ಮಾಡುತ್ತೇವೆಂದು ಚಿತ್ರದ  ನಿರ್ದೇಶದ ತರುಣ್‌ ಸುಧೀರ್‌ ಹೇಳಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು  ಕೂಡ ಖುಷಿಯಾಗಿದ್ದು, ಆಗಲೇ ಸೋಶಿಯಲ್‌ ಮೀಡಿಯಾಗಳಲ್ಲಿ ಈ ವಿಷಯವನ್ನು ಶೇರ್‌ ಮಾಡುತ್ತಿದ್ದಾರೆ. ರಾಬರ್ಟ್‌ ಚಿತ್ರ ಭಾರೀ  ನಿರೀಕ್ಷೆಗಳನ್ನು ಮೂಡಿಸಿದ್ದು, ಈಗಾಗಲೇ ಚಿತ್ರತಂಡ ಪ್ರತೀ ಹಬ್ಬದ ಸಂಭ್ರಮಗಳಿಗೆ ವಿಶೇಷ ಉಡುಗೊರೆಯನ್ನು ನೀಡುತ್ತಲೇ ಬಂದಿದೆ.

ಕ್ರಿಸ್‌ ಮಸ್‌, ಸಂಕ್ರಾಂತಿ, ಯುಗಾದಿ, ಶ್ರೀರಾಮನವಮಿ, ಕಾರ್ಮಿಕರ ದಿನ ಹೀಗೆ ಒಂದೊಂದು ದಿನ ಚಿತ್ರದ ಕುರಿತ ಒಂದೊಂದು ಅಂಶಗಳನ್ನು ಚಿತ್ರತಂಡ ತಿಳಿಸಿದೆ. ಪೋಸ್ಟರ್‌, ಮೋಷನ್‌ ಮೋಸ್ಟರ್‌, ಫ‌ಸ್ಟ್‌ ಲುಕ್‌, ಟೀಸರ್‌, ಮೇಕಿಂಗ್‌ ವಿಡಿಯೋಗಳನ್ನು ಬಿಡುಗಡೆ ಮಾಡುವ ಮೂಲಕ  ಚಿತ್ರತಂಡ ಅಭಿಮಾನಿಗಳಲ್ಲಿ ಕುತೂಹಲವನ್ನು  ಹೆಚ್ಚು ಮಾಡುವಲ್ಲಿ  ಯಶಸ್ವಿಯಾಗಿದೆ. ಇದೀಗ ರಾಬರ್ಟ್‌ ಮತ್ತೊಂದು ಪೋಸ್ಟರ್‌ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿರುವುದು ಅಭಿಮಾನಿಗಳಲ್ಲಿನ ಕಾತರವನ್ನು ಮತ್ತಷ್ಟು ಹೆಚ್ಚು ಮಾಡಿದಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next