Advertisement
ರೈಲು ನಿಲ್ದಾಣದ ಒಳಭಾಗದಲ್ಲಿ ಒಂದು ಫ್ಲಾಟ್ ಫಾರಂನಿಂದ ಇನ್ನೊಂದು ಫ್ಲಾಟ್ ಫಾರಂಗೆ ಸಂಚರಿಸಲು ಸೂಕ್ತ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕಾಗಿ ಪ್ರಯಾಣಿಕರು ಹಾಗೂ ರೈಲ್ವೇ ಹೋರಾಟಗಾರರು ಸಮಸ್ಯೆಯನ್ನು ರೈಲ್ವೇ ಇಲಾಖೆಯ ಗಮನಕ್ಕೆ ತಂದಿದ್ದರು. ರೈಲು ನಿಲ್ದಾಣದಲ್ಲಿದ್ದ ಎಸ್ಕಲೇಟರ್ ತಾಂತ್ರಿಕ ತೊಂದರೆಗಳಿಂದ ಒಮ್ಮೊಮ್ಮೆ ಕೈ ಕೊಡುತ್ತಿತ್ತು. ಈ ಎಲ್ಲ ಸಮಸ್ಯೆಗಳನ್ನು ಮನಗಂಡ ಇಲಾಖೆ ವಿವಿಧ ಕಾಮಗಾರಿಗಳ ಜತೆಗೆ ನೂತನ ಪಾದಚಾರಿ ಮೇಲ್ಸೇತುವೆ ಮಾಡಲು ಯೋಜನೆ ರೂಪಿಸಲಾಯಿತು. ಈ ಕಾಮಗಾರಿಗೆ 2017 ಎಪ್ರಿಲ್ನಲ್ಲಿ ಶಿಲಾನ್ಯಾಸ ಮಾಡ ಲಾಯಿತು. ಕಾಮಗಾರಿಯನ್ನು 2019 ಆಗಸ್ಟ್ 31ರೊಳಗಾಗಿ ಮುಗಿಸಲು ದಿನ ನಿಗದಿಪಡಿ ಸಲಾಗಿತ್ತು. ಆದರೆ ನಿಗದಿತ ಅವಧಿಯ ಮುಂಚಿತ ವಾಗಿಯೇ ಕಾಮಗಾರಿ ಮುಗಿದಿದ್ದು, ಪ್ರಯಾಣಿಕರಿಗೆ ಸಂಚಾರ ಮುಕ್ತವಾಗಿದೆ.
Related Articles
ಹೊಸದಾಗಿ ನಿರ್ಮಾಣಗೊಂಡ ಪಾದಚಾರಿ ಸೇತುವೆ 25 ಮೀಟರ್ ಉದ್ದವಿದ್ದು, 3 ಮೀಟರ್ ಅಗಲವಿದೆ. ಇದು ರೈಲು ನಿಲ್ದಾಣದ ಪ್ಲಾಟ್ ಫಾರಂ 1, 2 ಹಾಗೂ 3ಕ್ಕೆ ಸಂಪರ್ಕ ಕಲ್ಪಿಸಲಿದೆ. ಪಾದಚಾರಿ ಸೇತುವೆಯು ರೈಲು ನಿಲ್ದಾಣದಿಂದ ವೆನ್ಲಾಕ್ ಆಸ್ಪತ್ರೆಯ ಒಂದು ಬದಿಯ ವರೆಗೆ ತಲುಪಲಿದೆ. ಆ ಮೂಲಕ ರೈಲ್ವೇ ನಿಲ್ದಾಣದ ಮೂಲಕ ವೆನ್ಲಾಕ್ ಆಸ್ಪತ್ರೆಗೆ ತೆರಳುವ ಅವಕಾಶವಿದೆ. ಸೇತುವೆಯ ಕಾಮಗಾರಿ 1.75 ಕೋ.ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ.
Advertisement