Advertisement

ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಇನ್ನೊಂದು ಒಪಿಡಿ

01:16 PM Apr 26, 2021 | Team Udayavani |

ಬೆಂಗಳೂರು: ನಗರದ ಕೆ.ಸಿ.ಜನರಲ್‌ಆಸ್ಪತ್ರೆಯಲ್ಲಿ ಹೆಚ್ಚು ತಜ್ಞ ವೈದ್ಯರು ಕರ್ತವ್ಯನಿರ್ವಹಿಸುತ್ತಿದ್ದು, ಅತ್ಯುತ್ತಮಸೌಲಭ್ಯಗಳು ಕೂಡ ಇವೆ. ಹೀಗಾಗಿಇಲ್ಲಿಯೇ ಇನ್ನೊಂದು ದೊಡ್ಡ ಪ್ರಮಾಣದಹೊರ ರೋಗಿಗಳ ವಿಭಾಗ (ಒಪಿಡಿ)ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದುಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

Advertisement

ಸಂಸದ ಪಿ.ಸಿ.ಮೋಹನ್‌ ಅವರೊಂದಿಗೆಭಾನುವಾರ ಬೆಳಗ್ಗೆ ಪಿಪಿಇ ಕಿಟ್‌ ಧರಿಸಿಕೆ.ಸಿ.ಜನರಲ್‌ ಆಸ್ಪತ್ರೆಯ ಕೋವಿಡ್‌ ಚಿಕಿತ್ಸಾಘಟಕಗಳಿಗೆ ಭೇಟಿ ನೀಡಿ, ಸೋಂಕಿತರಯೋಗ ಕ್ಷೇಮ ವಿಚಾರಿಸಿದರು. ಆಸ್ಪತ್ರೆಆವರಣದಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವಮಾಡ್ನೂಲರ್‌ ಕೋವಿಡ್‌ ಐಸಿಯುಘಟಕಕ್ಕೂ ಭೇಟಿ ನೀಡಿ ಪರಿಶೀಲಿಸಿದರು.ನಗರದಲ್ಲಿ ಕೋವಿಡ್‌ ಸೋಂಕಿತರಿಗೆಹಾಸಿಗೆಗಳ ಕೊರತೆ ಇದೆ.

ಆದರೆ, ಆಸಮಸ್ಯೆಯನ್ನು ಬಗೆಹರಿಸಲು ಎಲ್ಲರೀತಿಯ ಪ್ರಯತ್ನವನ್ನು ಮಾಡಲಾಗುತ್ತಿದೆ.ಎಲ್ಲಿಯೂ ಬೆಡ್‌ ಸಿಗದಿದ್ದರೂಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಯಾರೇಬಂದರೂ ಅವರನ್ನು ತಪಾಸಣೆ ಮಾಡಿಉತ್ತಮ ಚಿಕಿತ್ಸೆ ನೀಡುವ ವ್ಯವಸ್ಥೆಮಾಡಿದ್ದೇವೆ.

ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ450 ಬೆಡ್‌ ಇದೆ. ಸಾಕಾಗುತ್ತಿಲ್ಲ ನಿಜ,ಆದರೆ ದಿನಕ್ಕೆ ಕೊನೆಪಕ್ಷ 2,000 ಜನರಿಗೆಚಿಕಿತ್ಸೆ ಸಿಗುವ ವ್ಯವಸ್ಥೆ ಆಗಬೇಕು. ಅದಕ್ಕೆಅಗತ್ಯವಾದ ಪ್ರಯತ್ನ ಮಾಡುತ್ತೇವೆ. ಒಪಿಡಿಗೆ ಬಂದು ಚಿಕಿತ್ಸೆ ಪಡೆದುಮನೆಯಲ್ಲೇ ಹೋಮ್‌ ಕ್ವಾರಂಟೈನ್‌ ಆಗಿಚಿಕಿತ್ಸೆ ಪಡೆಯಬಹುದು ಎಂದರು.ರಾಜ್ಯದಲ್ಲಿ ರೆಮ್‌ಡೆಸಿವಿಯರ್‌ ಕೊರತೆಬಹತೇಕ ನೀಗುತ್ತಿದೆ. ಕೇಂದ್ರ ಸರ್ಕಾರದಿಂದ1.50 ಲಕ್ಷಕ್ಕೂ ಅಧಿಕ ರೆಮ್‌ಡೆಸಿವಿಯರ್‌ವೇಲ್ಸ್‌ ರಾಜ್ಯಕ ಹಂಚಿಕೆಯಾಗಿದೆ. ಇದನ್ನುಅಗತ್ಯ ಇರುವವರಿಗೆ ನೀಡಲಾಗುವುದು.ಅದಕ್ಕೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next