Advertisement

ಭಾರತಕ್ಕೆ ಮತ್ತೂಂದು ನೊಬೆಲ್‌

11:09 AM Oct 16, 2019 | mahesh |

2019ನೇ ಸಾಲಿನ ನೊಬೆಲ್‌ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಪ್ರಕಟಿಸಲಾಗಿದೆ. ಈ ಬಾರಿ ಭಾರತೀಯ ಮೂಲದ ಅಭಿಜಿತ್‌ ಬ್ಯಾನರ್ಜಿ ಅವರಿಗೆ ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಸಲ್ಲಿಸಿದ ವಿಶೇಷ ಸೇವೆಗೆ ನೊಬೆಲ್‌ ಪುರಸ್ಕಾರ ಲಭಿಸಿದೆ. ಅತ್ಯುನ್ನತ ಜನೋಪಕಾರಿ ಸಾಧನೆ, ಸಂಶೋಧನೆ, ಆವಿಷ್ಕಾರ ಮತ್ತು ಸೇವಾ ಕ್ಷೇತ್ರದಲ್ಲಿನ ಅಮಿತ ಸಾಧನೆಯನ್ನು ಗುರುತಿಸಿ ನೀಡಲಾಗುತ್ತಿರುವ ಪುರಸ್ಕಾರ ಇದಾಗಿದೆ.

Advertisement

ಏನಿದು ನೊಬೆಲ್‌?
ಸ್ವೀಡನ್‌ನ ವಿಜ್ಞಾನಿ ಆಲ್ಫೆ†ಡ್‌ ನೊಬೆಲ್‌ ಅವರ ಹೆಸರಿನ ಪುರಸ್ಕಾರ ಇದಾಗಿದೆ. ಇವರು ಡೈನಮೈಟ್‌ ಸ್ಫೋಟಕ ಆವಿಷ್ಕರಿಸಿದರು. ಯುದ್ಧದಲ್ಲಿ ಅದು ಮಾಡಿದ ಹಾನಿಯನ್ನು ಕಂಡು ಕೊರಗಿದ್ದರು. ಈ ವೇದನೆಯಿಂದ ಹೊರ ಬರಲು 1895ರಲ್ಲಿ ತನ್ನ ಸಂಪತ್ತಿನ ಶೇ. 94ರಷ್ಟು ಭಾಗವನ್ನು ಭೌತಶಾಸ್ತ್ರ, ರಸಾಯನ ಶಾಸ್ತ್ರ, ಸಾಹಿತ್ಯ ಮತ್ತು ಶಾಂತಿ ವೈದ್ಯಕೀಯ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆಗೈದಿರುವವರಿಗೆ ಪ್ರಶಸ್ತಿ ನೀಡಲು ಮೀಸಲಿಡ ಬೇಕೆಂದು ಉಯಿಲು ಬರೆದರು.

ಡಿ. 10ರಂದೇ ಪ್ರದಾನ!
ನೊಬೆಲ್‌ ವಿಜೇತರ ಹೆಸರುಗಳನ್ನು ಪ್ರತಿವರ್ಷ ಅಕ್ಟೋಬರ್‌ ಮಧ್ಯಭಾಗದಲ್ಲಿ ಘೋಷಿಸಲಾಗುತ್ತದೆ. ಡಿಸೆಂಬರ್‌ 10, 1896ರಂದು ಆಲ್ಫೆ†ಡ್‌ ನೊಬೆಲ್‌ ನಿಧನ ಹೊಂದಿದ ಸ್ಮರಣಾರ್ಥ ಪ್ರತಿವರ್ಷ ಅದೇ ದಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

200
ಇತರ ಪ್ರಶಸ್ತಿಗಳಂತೆ ನೊಬೆಲ್‌ ಪ್ರಶಸ್ತಿಗೆ ಸಾಧಕರು ತಾವೇ ನಾಮ ನಿರ್ದೇಶನ ಮಾಡಿಕೊಳ್ಳುವಂತಿಲ್ಲ. ಬೇರೊಬ್ಬರು ಅವರ ಹೆಸರು ಸೂಚಿಸಬೇಕು. ನಾಮನಿರ್ದೇಶನದ ಸಂದರ್ಭ ಸಾಧಕ ಜೀವಂತವಾಗಿರಬೇಕು. ಅಲ್ಲದೆ ಪ್ರತಿ ವರ್ಷ ಎಲ್ಲ ಕ್ಷೇತ್ರಗಳಿಂದ ಒಟ್ಟಾರೆ 200 ನಾಮ ನಿರ್ದೇಶನಗಳು ಮಾತ್ರ ಇರಬೇಕು.

ನೊಬೆಲ್‌ ಪುರಸ್ಕೃತ ಭಾರತೀಯರು
ರವೀಂದ್ರನಾಥ ಠಾಗೋರ್‌ : ಸಾಹಿತ್ಯ (1913)
ಸರ್‌. ಸಿ. ವಿ. ರಾಮನ್‌: ಭೌತಶಾಸ್ತ್ರ (1930)
ಮದರ್‌ ತೆರೇಸಾ : ಶಾಂತಿ ಪ್ರಶಸ್ತಿ (1979)
ಅಮರ್ತ್ಯ ಸೇನ್‌ : ಅರ್ಥಶಾಸ್ತ್ರ (1998)
ರಾಜೇಂದ್ರಕುಮಾರ್‌ ಪಚೌರಿ: ನೊಬೆಲ್‌ ಶಾಂತಿ (2007)
ಕೈಲಾಸ್‌ ಸತ್ಯಾರ್ಥಿ: ಶಾಂತಿ (2014)

Advertisement

ಭಾರತೀಯ ಸಂಜಾತರು
ಡಾ| ಹರಗೋಬಿಂದ ಖುರಾನ : ವೈದ್ಯಶಾಸ್ತ್ರ (1968)
ಸುಬ್ರಹ್ಮಣ್ಯಂ ಚಂದ್ರಶೇಖರ್‌: ಭೌತಶಾಸ್ತ್ರ (1983)
ವೆಂಕಟರಾಮನ್‌ ರಾಮಕೃಷ್ಣನ್‌: ರಸಾಯನ ಶಾಸ್ತ್ರ (2009)

596: ನೀಡಲಾದ ಪ್ರಶಸ್ತಿಗಳು
948 : ನೊಬೆಲ್‌ ಪುರಸ್ಕೃತರು

ಗರಿಷ್ಠ 3: ನಿಯಮಗಳ ಪ್ರಕಾರ ಪ್ರತಿ ಕ್ಷೇತ್ರದಲ್ಲಿ ಗರಿಷ್ಠ ಮೂವರಿಗೆ ಮಾತ್ರ ನೊಬೆಲ್‌ ನೀಡಲಾಗುತ್ತದೆ.

1897 : ನೊಬೆಲ್‌ ಫೌಂಡೇಶನ್‌ ಸ್ಥಾಪನೆ
6.5 ಕೋಟಿ ರೂ.: ನೊಬೆಲ್‌ ಬಹುಮಾನ ಮೊತ್ತ
1901ರಲ್ಲಿ: ಸ್ವಿಟ್ಜರ್ಲೆಂಡ್‌ನ‌ ಹೆನ್ರಿ ಡ್ಯುನಂಟ್‌, ಫ್ರಾನ್ಸ್‌ನ ಫೆಡ್ರಿಕ್‌ ಪ್ಯಾಸಿ ಅವರಿಗೆ ಮೊದಲ ನೊಬೆಲ್‌ ಪುರಸ್ಕಾರ.

ಮೂಲ ಭಾರತ
ಇವರು ಭಾರತದಲ್ಲಿದ್ದು, ಬಳಿಕ ಬೇರೆ ದೇಶಕ್ಕೆ ತೆರಳಿದವರಾಗಿದ್ದಾರೆ. ದಲಾೖ ಲಾಮ ಅವರು ಟಿಬೆಟ್‌ ನಲ್ಲಿ ಜನಿಸಿ, ಭಾರತಕ್ಕೆ ಬಂದಿದ್ದರು. ರೊನಾಲ್ಡ್‌ ರೋಸ್‌ (ಮೆಡಿಸಿನ್‌, 1902), ರುಡ್ಯಾರ್ಡ್‌ ಕ್ಲಿಪ್ಪಿಂಗ್‌ (ಸಾಹಿತ್ಯ, 1907), ದಲಾೖ ಲಾಮ (1989, ಶಾಂತಿ), ವಿ.ಎಸ್‌. ನೈಪುಲ್‌ (ಸಾಹಿತ್ಯ, 2001)

ಮಾಹಿತಿ: ಇಂಟರ್‌ನೆಟ್‌

Advertisement

Udayavani is now on Telegram. Click here to join our channel and stay updated with the latest news.

Next