Advertisement

ಕೋವಿಡ್-19 ಮಹಾಮಾರಿಗೆ ಭಾರತೀಯ ಮೂಲದ ಯುಕೆ ವೈದ್ಯ ಬಲಿ

10:02 AM Apr 22, 2020 | Mithun PG |

ಲಂಡನ್ : ಇಂಗ್ಲೇಂಡ್ ನಲ್ಲಿರುವ ಭಾರತೀಯ ಮೂಲದ ವೈದ್ಯ ಮಂಜೀತ್ ಸಿಂಗ್  ರಿಯಾದ್ ಕೋವಿಡ್ 19 ಮಹಾಮಾರಿಗೆ ಬಲಿಯಾಗಿದ್ದಾರೆ. ತುರ್ತು ಔಷಧ ಸಲಹೆಗಾರರಾಗಿದ್ದಇವರಿಗೆ ಡರ್ಬಿಶೈರ್ ನಲ್ಲಿ  ಸಹೋದ್ಯೋಗಿಗಳು ಮತ್ತು ರೋಗಿಗಳಿಂದ ಭಾರೀ ಗೌರವವಿತ್ತು.

Advertisement

1992 ರಲ್ಲಿ ಲೀಸೆಸ್ಟರ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ  ಪಡೆದ ರಿಯಾತ್, ಅಪಘಾತ ಮತ್ತು ರಾಷ್ಟ್ರೀಯ ಆರೋಗ್ಯ ಸೇವೆಯ ಮೊದಲ ಸಿಖ್  ತುರ್ತು ಸಲಹೆಗಾರರಾಗಿದ್ದರು. ಆ ಮೂಲಕ ವೈರಸ್‌ಗೆ ಬಲಿಯಾದ  ಭಾರತೀಯ ಮೂಲದ ವೃತ್ತಿಪರ ವೈದ್ಯರೆನಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ  ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಗೇವಿನ್ ಬೊಯೆಲ್ , ಮಂಜೀತ್ ರಿಯಾತ್ ರೋಗಿಗಳ ಮತ್ತು ಸಹೋದ್ಯೋಗಿಗಳ  ಪ್ರೀತಿ ಪಾತ್ರರಾಗಿದ್ದರು. ಅವರನ್ನು ಕಳೆದುಕೊಂಡಿದ್ದು ಅಪಾರ ದುಃಖ ತರಿಸುತ್ತಿದೆ ಎಂದರು ಸಂತಾಪ ಸೂಚಿಸಿದರು.

ಮಂಜೀತ್ ಹೆಂಡತಿ ಮತ್ತು ಮತ್ತು ಇಬ್ಬರು ಗಂಡು ಮಕ್ಕಳಿದ್ದರು. 2003ರಲ್ಲಿ, ಡರ್ಬಿಶೈರ್ ರಾಯಲ್ ಆಸ್ಪತ್ರೆಯಲ್ಲಿ ತುರ್ತು ಔಷಧ ನಾಲ್ಕು ಸಲಹೆಗಾರರಲ್ಲಿ ಮಂಜೀತ್ ಕೂಡ ಒಬ್ಬರು. ಮಂಜೀತ್ ಅಗಾಧವಾಗಿ ಮೌಲ್ಯಯುತ ಜೀವನ ನಡೆಸುತ್ತಿದ್ದರು ಎಂದು ಸಹೋದ್ಯೋಗಿ ಸೂಸಿ ಹೆವಿಟ್ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next