Advertisement
ಆ ಶಾಸಕರು ಯುವತಿಯ ಪ್ರತಿ ನಡೆಯನ್ನು ಮತ್ತೂಂದು ಪಕ್ಷದ ಶಾಸಕರೊಬ್ಬರೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂಬುದು ಗೊತ್ತಾಗಿದೆ. ಆದರೆ, ಬಿಜೆಪಿಯ ಆ ಶಾಸಕ ಜಾರಕಿಹೊಳಿ ಸಹೋದರರ ಜತೆ ಗುರುತಿಸಿಕೊಂಡಿಲ್ಲ. ಅವರ ರಾಜಕೀಯ ವಿರೋಧಿ ಬಣದಲ್ಲಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕದ ಆ ಶಾಸಕರೊಬ್ಬರಿಗೆ ಸಿ.ಡಿ. ಹಿಂದಿನ ರಹಸ್ಯ ನಾಲ್ಕೈದು ತಿಂಗಳ ಹಿಂದೆಯೇ ಗೊತ್ತಿತ್ತು ಎಂಬುದು ಮೂಲಗಳಿಂದ ತಿಳಿದು ಬಂದಿದೆ.
Related Articles
Advertisement
ಪದೇಪದೆ ಲೊಕೇಷನ್ ಬದಲಾವಣೆ :
ಸಿ.ಡಿ. ಪ್ರಕರಣದ ಶಂಕಿತ ಆರೋಪಿಗಳು ಆಗಾಗ ಸ್ಥಳ ಬದಲಾಯಿಸುತ್ತಿದ್ದಾರೆ ಎಂಬುದು ತನಿಖಾಧಿಕಾರಿಗಳಿಗೆ ತಿಳಿದು ಬಂದಿದೆ.ಪ್ರಕರಣದ ಕಿಂಗ್‌ಪಿನ್‌ಗಳು ಎನ್ನಲಾದ ಇಬ್ಬರು ಪತ್ರಕರ್ತರು ಹಾಗೂ ಯುವತಿ ಗಂಟೆಗೊಮ್ಮೆ ಲೊಕೇಷನ್ ಬದಲಾಯಿಸುತ್ತಿದ್ದು, ಹೀಗಾಗಿ ಆರೋಪಿತರ ಪತ್ತೆ ಸಾಧ್ಯವಾಗುತ್ತಿಲ್ಲ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಕೆಲವು ದಿನಗಳ ಹಿಂದೆ ತನ್ನ ಹೇಳಿಕೆಯ ವೀಡಿಯೋ ಬಿಡುಗಡೆ ಮಾಡಿದ್ದ ನರೇಶ್ ಗೌಡನ ಜಾಡು ಹಿಡಿದಾಗ ಆತ ದಿಲ್ಲಿಯಿಂದ ಸುಮಾರು 200 ಕಿ.ಮೀ. ದೂರದಲ್ಲಿರುವುದು ತಿಳಿದುಬಂದಿತ್ತು. ಆತನನ್ನು ವಶಕ್ಕೆ ಪಡೆಯುಲ ಎರಡು ತಂಡಗಳು ದಿಲ್ಲಿಗೆ ತೆರಳಿದ್ದವು. ಆದರೆ ಪ್ರಯೋಜನವಾಗಲಿಲ್ಲ. ನರೇಶ್ ಗೌಡ ಜತೆ ಶ್ರವಣ್ ಹಾಗೂ ಯುವತಿಯೂ ಇದ್ದಾಳೆ. ಶ್ರವಣ್ ಹ್ಯಾಂಕರ್ ಆಗಿದ್ದು, ಸಾಫ್ಟ್ವೇರ್, ಮೊಬೈಲ್, ಲೊಕೇಷನ್ ಸೇರಿ ಎಲ್ಲವನ್ನು ಹ್ಯಾಕ್ ಮಾಡುವ ನೈಪುಣ್ಯ ಹೊಂದಿದ್ದಾನೆ. ಈ ಹಿಂದೆ ಮಾಜಿ ಸಚಿವರ ವೀಡಿಯೋವನ್ನು ಕರ್ನಾಟಕದಲ್ಲಿ ಪ್ರಾಕ್ಸಿ ಸರ್ವರ್ ಬಳಸಿ ಅಪ್‌ಲೋಡ್ ಮಾಡಿ ರಷ್ಯಾದಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಬಿಂಬಿಸಲಾಗಿತ್ತು ಎನ್ನಲಾಗಿದೆ.