Advertisement
ಈಗಾಗಲೇ ಬಿಬಿಎಂಪಿ ವರ್ಷಾಂತ್ಯದೊಳಗೆ ಪ್ರಾಥಮಿಕ ಆಸ್ಪತ್ರೆಗಳು ಇಲ್ಲದ ವಾರ್ಡ್‌ಗಳಲ್ಲಿ ಆಸ್ಪತ್ರೆ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ಆರಂಭಿಸಲು ಮುಂದಾಗುತ್ತಿದೆ. ಅಲ್ಲದೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಜಯ ನಗರದಲ್ಲಿ ಸಿಬ್ಬಂದಿಗೆ ಮೀಸಲಿಟ್ಟಿದ್ದ ಆಸ್ಪತ್ರೆಗಳನ್ನು ಮಕ್ಕಳ ಆಸ್ಪತ್ರೆಯಾಗಿ ಪರಿವರ್ತನೆಮುಂದಾಗಿದ್ದು, ನವೆಂಬರ್ ಒಳಗಾಗಿ ಸೇವೆ ಪ್ರಾರಂಭವಾಗಲಿದೆ. 2ನೇ ಅಲೆ ಆರಂಭದಲ್ಲಿಯೇ ಕೆ.ಸಿ.ಜನರಲ್ ಆಸ್ಪತ್ರೆಯು ಮೇಕ್‌ಶಿಪ್ಟ್ ಕೊರೊನಾ ಆಸ್ಪತ್ರೆಯನ್ನು ಆರಂಭಿಸಿತ್ತು. ಇದರ ಮುಂದುವರೆದ ಭಾಗವಾಗಿ ರಾಜ್ಯದ ಮೊದಲ ಕೊರೊನಾ ಚಿಕಿತ್ಸಾಕೇಂದ್ರವಾಗಿದ್ದ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿದೆ.
Related Articles
ತಾತ್ಕಾಲಿಕ ಆಸ್ಪತ್ರೆಯಾಗಿರುವುದರಿಂದ ಸದ್ಯ ಈ ಆಸ್ಪತ್ರೆಗೆ ನಗರದ ಪ್ರಮುಖ ಆಸ್ಪತ್ರೆಗಳ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತಿದೆ.
Advertisement
ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣ: ಕೊರೊನಾ ಎರಡನೇ ಅಲೆ ಆರಂಭದಲ್ಲಿಯೇ ಸರ್ಕಾರಿ ಆಸ್ಪತ್ರೆಗಳ ಹಾಸಿಗೆಗಳು ಭರ್ತಿಯಾಗಿ ಖಾಸಗಿ ಆಸ್ಪತ್ರೆಗಳ ಅವಲಂಬನೆ ಅನಿವಾರ್ಯವಾಗಿತ್ತು. ಮೇ ಮೊದಲ ಎರಡು ವಾರ ಬೆಂಗಳೂರಿನಲ್ಲಿ25 ಸಾವಿರ ಹಾಸಿಗೆ ಬೇಡಿಕೆ ಇತ್ತು. ಆದರೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಸೇರಿ ಕೇವಲ 17 ಸಾವಿರ ಹಾಸಿಗೆಗಳು ಮಾತ್ರಲಭ್ಯವಾಗಿದ್ದವು. ಶೇ.30 ರಷ್ಟು ಹಾಸಿಗೆ ಕೊರತೆ ಉಂಟಾಗಿತ್ತು. ಆ ಸಂದರ್ಭದಲ್ಲಿ ಹಾಸಿಗೆ ಲಭ್ಯವಾಗದೇ ನೂರಾರು ಸೋಂಕಿತರು ಆ್ಯಂಬುಲೆನ್ಸ್, ರಸ್ತೆ ಬದಿಯಲ್ಲಿಯೇ ಪ್ರಾಣಬಿಟ್ಟಿದ್ದರು. ಇದರಿಂದ ಪಾಠ ಕಲಿತ ಸರ್ಕಾರವು ಕೊರೊನಾ ಮೂರನೇ ಅಲೆಗೆ ಸಿದ್ಧತೆಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣವಾಗುತ್ತಿವೆ. ಮೂರನೇ ಅಲೆಯ ಮುಂಜಾಗ್ರತಾಕ್ರಮವಾಗಿ ಆಸ್ಪತ್ರೆ ಮೇಕ್‌ಶಿಫ್ಟ್ ನಿರ್ಮಿಸಲಾಗಿದೆ. ಅಂತಿಮ ಹಂತದ ತಯಾರಿ ನಡೆಸಿದ್ದು, ಇನ್ನೆರಡು ವಾರಗಳಲ್ಲಿ ಆಸ್ಪತ್ರೆ ಕಾರ್ಯಾರಂಭ ವಾಗಲಿದೆ. ಕೊರೊನಾ ಸೋಂಕಿತರು, ತೀವ್ರ ಉಸಿರಾಟ ಸಮಸ್ಯೆ ಹೊಂದಿರುವ ರೋಗಿಗಳಿಗೆ (ಸಾರಿ) ಇಲ್ಲಿಯೇ ಚಿಕಿತ್ಸೆ ನೀಡಲಾಗುವುದು. ಹಾಸಿಗೆಗಳಕೊರತೆ ತಗ್ಗಲಿದೆ.
●ಡಾ.ಸಿ.ನಾಗರಾಜ್, ನಿರ್ದೇಶಕರು,
ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ. ● ಜಯಪ್ರಕಾಶ್ ಬಿರಾದಾರ