ಚೆನ್ನೈ: ಇತ್ತೀಚೆಗಷ್ಟೇ ತಮಿಳುನಾಡಿನ ಪ್ರಸಿದ್ಧ ವಂಡಲೂರು ಝೂನಲ್ಲಿ ಕೋವಿಡ್ ಸೋಂಕಿನಿಂದ ಸಿಂಹವೊಂದು ಮೃತಪಟ್ಟಿದ್ದ ಬೆನ್ನಲ್ಲೇ ಇದೀಗ ಬುಧವಾರ(ಜೂನ್ 16) ಬೆಳಗ್ಗೆ ಮತ್ತೊಂದು ಗಂಡು ಸಿಂಹ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಭೀಮಾ ತೀರದಲ್ಲಿ ಚಿರತೆ ಹಾವಳಿ: ರೈತರು ಹೊಲದಲ್ಲಿ ಕಟ್ಟಿದ್ದ ಆಕಳು ಕೊಂದು ಭಕ್ಷಣೆ
ಜೂನ್ 3ರಂದು 12 ವರ್ಷದ ಪದ್ಮನಾಥನ್ ಎಂಬ ಗಂಡು ಸಿಂಹದಲ್ಲಿ ಕೋವಿಡ್ 19 ಸೋಂಕು ದೃಢಪಟ್ಟ ನಂತರ ಚಿಕಿತ್ಸೆ ನೀಡಲು ಪ್ರಾರಂಭಿಸಲಾಗಿತ್ತು. ವಂಡಲೂರಿನ ಅರಿಗ್ನಾರ್ ಅನ್ನಾ ಝೂಯೊಲಾಜಿಕಲ್ ಪಾರ್ಕ್ ಬಿಡುಗಡೆಗೊಳಿಸಿರುವ ಪತ್ರಿಕಾ ಪ್ರಕಟಣೆ ಪ್ರಕಾರ, ಜೂನ್ 16ರಂದು ಬೆಳಗ್ಗೆ ಗಂಡು ಸಿಂಹ ಕೋವಿಡ್ ನಿಂದ ಸಾವನ್ನಪ್ಪಿರುವುದಾಗಿ ತಿಳಿಸಿದೆ.
ಪದ್ಮನಾಥನ್ ಸಿಂಹ ಕೋವಿಡ್ ಸೋಂಕಿಗೆ ಬಲಿಯಾದ ಎರಡನೇ ಏಷ್ಯಾಟಿಕ್ ಸಿಂಹವಾಗಿದೆ. ಜೂನ್ 3ರಂದು ಮೃಗಾಲಯದಲ್ಲಿ 9ವರ್ಷದ ಹೆಣ್ಣು ಸಿಂಹವೊಂದು ಕೋವಿಡ್ ನಿಂದ ಸಾವನ್ನಪ್ಪಿತ್ತು. ಮೇ 26ರಂದು ಸಫಾರಿ ಪಾರ್ಕ್ ನಲ್ಲಿದ್ದ ಐದು ಸಿಂಹಗಳಲ್ಲಿ ಕೆಮ್ಮ ಕಾಣಿಸಿಕೊಂಡಿತ್ತು ಎಂದು ವರದಿ ಹೇಳಿದೆ.
ಸಾಮಾನ್ಯ ರೋಗ ಲಕ್ಷಣ ಕಂಡು ಬಂದ ತಕ್ಷಣವೇ ಸಿಂಹಗಳಿಗೆ ಮೃಗಾಲಯದ ಪಶುವೈದ್ಯಾಧಿಕಾರಿಗಳ ತಂಡ ಚಿಕಿತ್ಸೆ ನೀಡಲು ಪ್ರಾರಂಭಿಸಿರುವುದಾಗಿ ವರದಿ ತಿಳಿಸಿದೆ. ವಂಡಲೂರು ಝೂನಲ್ಲಿನ 11 ಸಿಂಹಗಳ ಗಂಟಲು ದ್ರವವನ್ನು ಭೋಪಾಲ್ ಮತ್ತು ಮಧ್ಯಪ್ರದೇಶದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.