Advertisement

ವಿವೇಕಾನಂದರಂತೆ ಸಂಸ್ಕೃತಿ ಪರಿಚಾರಿಕೆ ಮಾಡಿದ್ದ ಮತ್ತೂರು

11:43 AM Aug 09, 2017 | |

ಬೆಂಗಳೂರು: “ಇನ್ನೊಬ್ಬರ ಸಂಪತ್ತಿನ ಮೇಲೆ ಹೊಂದುವ ವ್ಯಾಮೋಹ ಅಥವಾ ಅದನ್ನು ಕೊಳ್ಳೆ ಹೊಡೆಯುವ ಪ್ರವೃತ್ತಿ ಸರಿಯಲ್ಲ,’ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಹೇಳಿದ್ದಾರೆ.

Advertisement

ಗಾಂಧಿ ಕಾಮರಾಜ್‌ ಸ್ಮಾರಕ ಟ್ರಸ್ಟ್‌ ವತಿಯಿಂದ ಮಂಗಳವಾರ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ಡಾ. ಮತ್ತೂರು ಕೃಷ್ಣಮೂರ್ತಿ ಅವರ 89ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, “ಮತ್ತೂಬ್ಬರ ಸಂಪತ್ತು ಕೊಳ್ಳೆ ಹೊಡೆಯುವ ಮನೋಭಾವನೆ ಇಂದಿನ ವಿದ್ಯಾರ್ಥಿಗಳಲ್ಲಿ ಬರಬಾರದು. ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಹಾಗೂ ತೃಪ್ತಿ ಹೊಂದಿರಬೇಕು,’ ಎಂದು ತಿಳಿಸಿದರು.

“ಹುಟ್ಟಿನಿಂದಲೇ ಎಲ್ಲರಿಗೂ ಮಾನವೀಯ ಗುಣ ಇರುತ್ತದೇ ಎಂಬು ಉಹಿಸಲು ಸಾಧ್ಯವಿಲ್ಲ. ಬುದ್ಧಿ ಬೆಳೆದಂತೆ, ಯೋಚನಾ ಶಕ್ತಿ ಹೆಚ್ಚಿದಂತೆ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕು. ಆದರೆ ಇಂದಿನ ಸಮಾಜದಲ್ಲಿ ಮಾನವೀಯತೆಯೇ ಕಣ್ಮರೆಯಾಗಿದೆ. ಸರ್ಕಾರಿ ನೌಕರರಿಗೆ ಸಂಬಳ ನೀಡಿ, ನಿವೃತ್ತಿ ನಂತರ ಪಿಂಚಾಣಿ ಸೌಲಭ್ಯವಿದ್ದರೂ, ತೃಪ್ತಿ ಇಲ್ಲದೆ ಭ್ರಷ್ಟಚಾರದಲ್ಲಿ ತೊಡಗಿಕೊಂಡಿರುತ್ತಾರೆ,’ ಎಂದು ಕಳವಳ ವ್ಯಕ್ತಪಡಿಸಿದರು.

“ಡಾ.ಮತ್ತೂರು ಕೃಷ್ಣಮೂರ್ತಿ ಅವರು, ಬಡಕುಟುಂಬದಲ್ಲಿ ಹುಟ್ಟಿ ಸಾಧನೆಯ ಶಿಖರವನ್ನೇ ಏರಿದ್ದಾರೆ. ಸ್ವಾಮೀ ವಿವೇಕನಂದರ ನಂತರ ಭಾರತ ಸಂಸ್ಕೃತಿಯನ್ನು ವಿದೇಶಿ ನೆಲೆದಲ್ಲಿ ಪಸರಿಸಲು ಕೃಷ್ಣಮೂರ್ತಿ ಅವರ ಕೊಡುಗೆ ಅಪಾರ. ಅವರ ಸ್ಮರಣೆ ನಿತ್ಯ ನಿರಂತರವಾಗಲಿ,’ ಎಂದು ಹೇಳಿದರು.

ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್‌.ಎನ್‌.ಸುರೇಶ್‌ ಮಾತನಾಡಿ, “ಇಂದಿನ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವತ್ತ ಸಾಗುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಶಿಕ್ಷಣ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಠಿಣಕವಾದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಕಾರ್ಯಕ್ರಮದಲ್ಲಿ ಲಿಟ್ಲಲ್‌ ಫ್ಲವರ್‌ ಹೈ ಸ್ಕೂಲ್‌ ವಿದ್ಯಾರ್ಥಿಗಳಿಗೆ ನೋಟ್‌ ಬುಕ್‌, ಬ್ಯಾಗ್‌ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಜಂಟಿ ನಿರ್ದೇಶಕ ಸಿ.ಎನ್‌.ಅಶೋಕ್‌ ಕುಮಾರ್‌, ಗಾಂಧಿ ಕಾಮರಾಜ್‌ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಮಾ.ನಟರಾಜ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next