ಸ್ಟಾಕ್‌ಹೋಂ/ಕೀವ್: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾಗೆ ಮತ್ತೊಂದು ಶಾಕ್ ಎಂಬಂತೆ, ಫಿನ್ಲಂಡ್ ಜೊತೆಗೆ ಸ್ವೀಡನ್ ಕೂಡ ಈಗ ನ್ಯಾಟೋ ಸದಸ್ಯತ್ವ ಪಡೆಯಲು ಮುಂದಾಗಿದೆ.
ಈ ಮೂಲಕ ಈವರೆಗೆ ತಾನು ಅನುಸರಿಸಿಕೊಂಡು ಬಂದ “ನಿಷ್ಪಕ್ಷ’ ನೀತಿಗೆ ಅಂತ್ಯಹಾಡಿದೆ.
30 ದೇಶಗಳ ಸೇನಾ ಮೈತ್ರಿಗೆ ನಾವೂ ಸೇರ್ಪಡೆಯಾಗುತ್ತೇವೆ ಎಂದು ಭಾನುವಾರವಷ್ಟೇ ಫಿನ್ಲಂಡ್ ಘೋಷಿಸಿತ್ತು. ಇದರ ಬೆನ್ನಲ್ಲೇ ಸೋಮವಾರ ಸ್ವೀಡನ್ ಕೂಡ ಇದೇ ನಿರ್ಧಾರ ಕೈಗೊಂಡಿದೆ. ಇದು ನಮ್ಮ ದೇಶದ ಭದ್ರತಾ ನಿಯಮದಲ್ಲಿನ ಐತಿಹಾಸಿಕ ಅಧ್ಯಾಯ ಎಂದು ಅಲ್ಲಿನ ಪ್ರಧಾನಿ ಮ್ಯಾಗ್ಡಲೀನಾ ಆ್ಯಂಡರ್ಸನ್ ಹೇಳಿದ್ದಾರೆ.
ಇದನ್ನೂ ಓದಿ:ತಾಜ್‌ಮಹಲ್‌ನಲ್ಲಿ ಮುಚ್ಚಿರುವ ಕೋಣೆಗಳ ಫೋಟೋ ಬಿಡುಗಡೆ
ತಮ್ಮ ನೆರೆಯಲ್ಲಿನ ರಾಷ್ಟ್ರಗಳು ನ್ಯಾಟೋಗೆ ಸೇರ್ಪಡೆಯಾಗಬಾರದು ಎಂಬ ಉದ್ದೇಶದಿಂದಲೇ ರಷ್ಯಾ ಅಧ್ಯಕ್ಷ ಪುಟಿನ್ ಅವರು ಉಕ್ರೇನ್ ಮೇಲೆ ದಾಳಿ ನಡೆಸಿದ್ದಾರೆ.
ಈಗ ಫಿನ್ಲಂಡ್, ಸ್ವೀಡನ್‌ನಂಥ ನೆರೆರಾಷ್ಟ್ರಗಳು ನ್ಯಾಟೋಗೆ ಸೇರುತ್ತಿರುವುದು ಪುಟಿನ್ ಆಕ್ರೋಶಕ್ಕೆ ಕಾರಣವಾಗಲಿದೆ.