Advertisement

ಇಂದಿನಿಂದ ಮತ್ತೊಂದು ವಿಮಾನ ನಭಕ್ಕೆ

11:55 AM Sep 08, 2017 | Team Udayavani |

ಹುಬ್ಬಳ್ಳಿ: ಮೋಡಗಳ ಲಭ್ಯತೆ ಆಧಾರದ ಮೇಲೆ ಐದನೇ ದಿನ ಎರಡು ಹಂತದಲ್ಲಿ ಮೋಡ ಬಿತ್ತನೆ ಕಾರ್ಯ ಗುರುವಾರ ನಡೆದಿದ್ದು, ಸೆ.8 ರಿಂದ ಎರಡು ವಿಶೇಷ ವಿಮಾನಗಳ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ. 

Advertisement

ಗದಗ ರಡಾರ ಮಾಹಿತಿ ಮೇರೆಗೆ ಮಧ್ಯಾಹ್ನ 1:05 ಗಂಟೆಯಿಂದ 3:25 ರವರೆಗೆ ಮೋಡಬಿತ್ತನೆ ನಡೆಯಿತು. ಮೊದಲ ಹಂತದಲ್ಲಿ ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ವಿಜಯಪುರ, ನವಲಗುಂದ, ನರಗುಂದ, ಗದಗ, ಹಳಿಯಾಳ, ದಾಂಡೇಲಿ ಭಾಗದಲ್ಲಿ ಬಿತ್ತನೆ  ನಡೆಯಿತು. ಸುಮಾರು ಒಂಬತ್ತು ಪ್ರದೇಶದಲ್ಲಿ ನಡೆದ ಮೋಡ ಬಿತ್ತನೆಗೆ ಸಂಪೂರ್ಣ 24 ಫೇರ್‌ಗಳನ್ನು ಬಳಕೆ ಮಾಡಿದ್ದಾರೆ. 

ಸಂಜೆ 4:40ಗಂಟೆಯಿಂದ 6:40ರವರೆಗೆ ಎರಡನೇ ಹಂತದ ಮೋಡ ಬಿತ್ತನೆ ನಡೆಯಿತು. ಈ ಸಂದರ್ಭದಲ್ಲಿ ಹಳಿಯಾಳ, ಸವದತ್ತಿ, ರಾಮದುರ್ಗ, ಮುಧೋಳ ಭಾಗದಲ್ಲಿ ಬಿತ್ತನೆ ನಡೆದಿದ್ದು, ಒಟ್ಟು 10  ಫ್ಲೇರ್‌ಗಳನ್ನು ಸಿಡಿಸಿದ್ದಾರೆ. ಮೋಡ ಬಿತ್ತನೆ ನಂತರ ಕೆಲವೆಡೆ ಮಳೆಯಾಗಿದೆ ಎಂದು ತಿಳಿದು ಬಂದಿದೆ. 

ಎರಡನೇ ವಿಮಾನ: ಉತ್ತರ ಕರ್ನಾಟಕ ಭಾಗದಲ್ಲಿ ಮೋಡಗಳ ಲಭ್ಯತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ವಿಶೇಷ ವಿಮಾನಗಳ ಮೂಲಕ ಮೋಡ ಬಿತ್ತನೆ ಕಾರ್ಯ ನಡೆಯಲಿದೆ. ಗುರುವಾರ ಸಂಜೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮತ್ತೂಂದು ವಿಶೇಷ ವಿಮಾನ ಆಗಮಿಸಿದ್ದು, ಸೆ.8 ರಿಂದ ಕ್ಯಾಪ್ಟನ್‌ ಆ್ಯಂಡ್ರಿವ್‌ ಹಾಗೂ ತರುಣ್‌, ಇಂಜಿನೀಯರ್‌ ರಿಚರ್ಡ್‌ ನೇತೃತ್ವದ ಕಿಂಗ್‌ ಏರ್‌ ಸಿ 90 ವಿಮಾನ ಕಾರ್ಯಾಚರಣೆ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next