Advertisement

ಬಿಸಿಲಿನ ಝಳದಲ್ಲಿ ಮತ್ತೊಂದು ಚುನಾವಣೆ

04:22 PM May 06, 2019 | Team Udayavani |

ಶಿಗ್ಗಾವಿ: ಲೋಕಸಭೆ ಚುನಾವಣೆ ಮುಗಿದು ಜನ ಫಲಿತಾಂಶ ಎದುರು ನೋಡುತ್ತಿರುವಾಗಲೇ, ಪಟ್ಟಣದ ಜನತೆಗೆ ಸ್ಥಳೀಯ ಸಂಸ್ಥೆ ಪುರಸಭೆ ಸದಸ್ಯರ ಆಯ್ಕೆ ಅವಕಾಶ ಒದಗಿ ಬಂದಿದ್ದು, ಮತ್ತೇ ಚುನಾವಣೆ ಕಾವು ಹೆಚ್ಚಲಿದೆ.

Advertisement

ಈ ವರೆಗೂ ಮೌನವಾಗಿದ್ದ ವಾರ್ಡ್‌ ಉಮೇದುವಾರರು ಮೇ 9 ರಿಂದ 16ರೊಳಗಾಗಿಯೇ ನಾಮಪತ್ರ ಸಲ್ಲಿಸಬೇಕಾಗಿದ್ದು, ಮೇ 17 ರಂದು ಅಭ್ಯರ್ಥಿಗಳ ನಾಮ ಪತ್ರ ಪರಿಶೀಲನೆ. 20ಕ್ಕೆ ನಾಮಪತ್ರ ವಾಪಸ್‌ ಹಾಗೂ ಮೇ 29ಕ್ಕೆ ಮತದಾನ ನಡೆಯಲಿದೆ.
25, ಮಾರ್ಚ್‌ 2014ರಲ್ಲಿ 10 ಜನ ಸದಸ್ಯಬಲದಲ್ಲಿ ಅಧಿ ಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ, 8 ತಿಂಗಳು ಶ್ರೀಕಾಂತ ಬುಳ್ಳಕ್ಕನವರ, 11 ತಿಂಗಳು ಸುಭಾಸ್‌ಚೌವ್ಹಾಣ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದರು. ಈ ಮಧ್ಯ ಬಿಎಸ್‌ ಆರ್‌, ಜೆಡಿಎಸ್‌ ಮತ್ತು ಪಕ್ಷೇತರ ಬಾಹ್ಯ ಬೆಂಬಲದೊಂದಿಗೆ 9 ಸದಸ್ಯ ಬಲದ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿ ಸದಾಶಿವಪ್ಪ ಕಂಕನವಾಡ ಅವರನ್ನು ಆಯ್ಕೆ ಮಾಡಿತ್ತು. 10 ತಿಂಗಳ ನಂತರ ಪ್ರಸಕ್ತ ಚುನಾವಣೆವರೆಗೂ ಬಿಜೆಪಿ ಶಿವಪ್ರಸಾದ ಸುರಗೀಮಠ ಅವರಿಗೆ
ಅವಕಾಶ ಒದಗಿಸಿತ್ತು. ಈ ಹಿಂದಿನ ಆಡಳಿತ ಮಂಡಳಿ
ಅಧಿಕಾರ ಅವಧಿ  ಮಾ. 25, 2019ಕ್ಕೆ ಮುಕ್ತಾಯಗೊಳ್ಳುತ್ತಿದ್ದಂತೆ ಏಪ್ರಿಲ್‌ ತಿಂಗಳದಲ್ಲಿ ನಡೆಯಬಹುದೆನ್ನಲಾದ ಚುನಾವಣೆಗೆ ಪೂರ್ವ ನಿಯೋಜಿತವಾಗಿ ಸಿದ್ಧಗೊಂಡು ಟಿಕೆಟ್‌ ಗಿಟ್ಟಿಸಿಕೊಳ್ಳಲು
ವರಿಷ್ಠರ ದುಂಬಾಲು ಬಿದ್ದಿದ್ದ ಆಕಾಂಕ್ಷೆಗಳು, ಸ್ಥಳೀಯ ಸಂಸ್ಥೆಯ ಮೊದಲೇ ಲೋಕಸಭೆ ಚುನಾವಣೆ ಎದುರಾಗುತ್ತಿದ್ದಂತೆ ಮೌನಕ್ಕೆ
ಶರಣಾಗಿದ್ದರು. ಮತ್ತೇ ಪುರಸಭೆ ಗದ್ದುಗೆ ಹಿಡಿಯಲು ಸದಸ್ಯರು ಮೀಸಲಾತಿ ಹುಡುಕಿಕೊಂಡು ವಿವಿಧ ವಾರ್ಡ್‌ಗಳ ಜನರನ್ನು ಓಲೈಸಲು ಮುಂದಾಗಿದ್ದಾರೆ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ
ನಡೆಸಲು ದಿನಾಂಕ ನಿಗ ಪಡಿಸಿ ಚುನಾವಣಾ ಆಯೋಗ ಗುರುವಾರ
ಸಂಜೆ ಅಧಿ ಸೂಚನೆ ಹೊರಡಿಸುತ್ತಿದ್ದಂತೆ ಆಕಾಂಕ್ಷೆಗಳು ಟಿಕೆಟ್‌ ಗಿಟ್ಟಿಸಿಕೊಳ್ಳಲು ವರಿಷ್ಠರ ದುಂಬಾಲು ಬಿದ್ದಿದ್ದಾರೆ. ಕಳೆದ ಬಾರಿ ಸ್ಪಧಿ ìಸಿದ್ದ ಕೆಲವು ಸದಸ್ಯರು ಮತ್ತೂಮ್ಮೆ ಚುನಾವಣೆ ಎದುರಿಸಲು
ಅವಕಾಶಕ್ಕಾಗಿ ಕಾಯ್ದು ಕುಳಿತ್ತಿದ್ದಾರೆ.ಆದರೆ, ಹಿಂದಿನ ಅವಧಿ ಯಲ್ಲಿನ ವಾರ್ಡ್‌ಮೀಸಲಾತಿ ಬದಲಾವಣೆಯಾದ ಕಾರಣ
ಕೆಲವು ಅಭ್ಯರ್ಥಿಗಳು ಬೇರೆ ಬೇರೆ ವಾರ್ಡಿಗೆ ವಲಸೆ ಹೋಗಲು ಚಿಂತನೆ ನಡೆಸಿದ್ದಾರೆ. ಒಟ್ಟು 23 ವಾರ್ಡ್‌ ವ್ಯಾಪ್ತಿಯಲ್ಲಿ ವಿವಿಧ ವರ್ಗದ 11 ಜನ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾತಿ
ಲಭ್ಯವಾದ ಹಿನ್ನೆಲೆ ಸದಸ್ಯರು ತಮ್ಮ ಪತ್ನಿಯರನ್ನೇ ಚುನಾವಣಾ ಕಣಕ್ಕಿಳಿಸಲು ಸಿದ್ಧತೆಯಲ್ಲಿದ್ದಾರೆ.

ಬಸವರಾಜ್‌ ಹೊನ್ನಣ್ಣವರ

Advertisement

Udayavani is now on Telegram. Click here to join our channel and stay updated with the latest news.

Next