Advertisement

ವಿಧಾನಸಭೆ ಚುನಾವಣೆ ಬಳಿಕ ಮತ್ತೂಂದು ಚುನಾವಣೆ!

12:16 PM May 17, 2018 | |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸತತ ನಾಲ್ಕೈದು ತಿಂಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ವಿಧಾನಸಭಾ ಚುನಾ
ವಣೆಯು ಸುಸೂತ್ರವಾಗಿ ಮುಗಿದ ಬೆನ್ನಲೇ ಇದೀಗ ಚಿಕ್ಕಬಳ್ಳಾಪುರ ಜಿಲ್ಲೆ ಮತ್ತೂಂದು ಚುನಾವಣೆ ಸಜ್ಜಾಗ ಬೇಕಿದೆ.

Advertisement

ಅವಧಿ ಮುಗಿದ ಹಿನ್ನೆಲೆಯಲ್ಲಿ ರಾಜ್ಯ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಜೂನ್‌ 8 ರಂದು ಚುನಾವಣೆ
ನಡೆಯಲಿದ್ದು, ಈಗಾಗಲೇ ರಾಜ್ಯ ಚುನಾವಣಾ ಆಯೋಗವು ಕೂಡ ಅಧಿಸೂಚನೆ ಹೊರ ಹೊರಡಿಸಿರುವ ಹಿನ್ನೆಲೆಯಲ್ಲಿ ಆಗ್ನೇಯ ಶಿಕ್ಷಕರ ಚುನಾವಣೆ ಜಿಲ್ಲೆಯಲ್ಲಿ ಸದ್ದಿಲ್ಲದೇ ಕಾವೇರುತ್ತಿದೆ. ರಾಜಕೀಯ ಪಕ್ಷಗಳು ಈಗಾಗಲೇ ಆಗ್ನೇಯ ಶಿಕ್ಷಕರ ಚುನಾವಣೆ ಕ್ಷೇತ್ರಕ್ಕೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದು. ಆಕಾಂಕ್ಷಿಗಳು ಕ್ಷೇತ್ರಗಳಲ್ಲಿ ಮತ ಬೇಟೆ ಶುರು ಮಾಡಿದ್ದಾರೆ.

 ಜೆಡಿಎಸ್‌ ವಶದಲ್ಲಿ ಕ್ಷೇತ್ರ: ಆಗ್ನೇಯ ಶಿಕ್ಷಕರ ಕ್ಷೇತ್ರ ಸದ್ಯ ಜೆಡಿಎಸ್‌ ವಶದಲ್ಲಿದ್ದು, ಜೆಡಿಎಸ್‌ ಮಾಧ್ಯಮ ವಕ್ತಾರ
ಆಗಿರುವ ತುಮಕೂರು ಮೂಲದ ರಮೇಶ್‌ ಬಾಬು ಕಳೆದ ಒಂದೂ ವರೆ ವರ್ಷದ ಹಿಂದೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಗೆದಿದ್ದರು. ಅದಕ್ಕೂ ಮೊದಲು ಹೆಬ್ಟಾಳ ಶಾಸಕ ರಾಗಿದ್ದ ಬಿಜೆಪಿ ವೈ.ಎ.ನಾರಾ ಯಣಸ್ವಾಮಿ
ಆಗ್ನೇಯ ಶಿಕ್ಷಕರ ಕ್ಷೇತ್ರ ವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿ ದ್ದರು. ಆದರೆ ವೈ.ಎ.ನಾರಾಯಣಸ್ವಾಮಿ ಹೆಬ್ಟಾಳದಲ್ಲಿ ಒಂದೂವರೆ ವರ್ಷದ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಗೆದ್ದ ನಂತರ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ರಮೇಶ್‌ ಬಾಬು ಬಿಜೆಪಿ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ದರು. ಆದರೆ ಅವಧಿ ಮುಗಿದ
ಹಿನ್ನೆಲೆಯಲ್ಲಿ ಮತ್ತೆ ಚುನಾವಣೆ ಎದುರಾಗಿದ್ದು, ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಪ್ರಮುಖವಾಗಿವೆ.

ನಾಮಪತ್ರ ಸಲ್ಲಿಕೆಗೆ 22 ಕೊನೆ: ಈಗಾಗಲೇ ಚುನಾವಣಾ ಆಯೋಗವು ಚುನಾವಣೆ ನಡೆಸಲು ಆದಿಸೂಚನೆ
ಹೊರಡಿಸಿದ್ದು, ಆಕಾಂಕ್ಷಿಗಳು ನಾಮ ಪತ್ರ ಸಲ್ಲಿಸಲು ಮೇ.22 ಕೊನೆ ದಿನವಾಗಿದೆ. ಬೆಂಗಳೂರು ಪ್ರಾದೇಶಿಕ ಅಭಿವೃದ್ಧಿ ಆಯುಕ್ತರು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಅಧಿಕಾರಿಗಳಾಗಿದ್ದಾರೆ. ಮೇ.23 ರಂದು ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮೇ.25ಕ್ಕೆ ನಾಮಪತ್ರಗಳ ವಾಪಸ್‌ಗೆ ಕೊನೆ ದಿನವಾಗಿರುತ್ತದೆ. ಮತ್ತೆ ವೈಎಎನ್‌ ಸ್ಪರ್ಧಿಸುತ್ತಾರಾ? ಆಗ್ನೇಯ ಶಿಕ್ಷಕರ ಚುನಾವಣೆ ಯಿಂದಲೇ ರಾಜಕಾರಣ ಪ್ರವೇಶಿಸಿ ಬಿಜೆಪಿ ಪಕ್ಷದಲ್ಲಿ
ಪ್ರಭಾವಿ ನಾಯಕರಾಗಿ ಬೆಳೆದು ಸದ್ಯ ಹೆಬ್ಟಾಳದಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಸೋತಿರುವ ವೈ.ಎ. ನಾರಾಯಣ ಸ್ವಾಮಿ ಮತ್ತೆ ಆಗ್ನೇಯ ಶಿಕ್ಷಕರ ಚುನಾವಣೆಗೆ ಸ್ಪರ್ಧಿಸುತ್ತಾರಾ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ವೈ.ಎ.ನಾರಾಯಣಸ್ವಾಮಿ ಬೆಂಬಲಿಗರು ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಕರೆತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next