Advertisement

ಒಡಿಶಾದಲ್ಲೊಬ್ಬ ಮಾಂಝಿ; 15 ಕಿಮೀ ರಸ್ತೆ ನಿರ್ಮಾಣ

08:33 AM Jan 11, 2018 | |

ಫ‌ುಲ್ಬಾನಿ (ಒಡಿಶಾ): ಕೈಯಲ್ಲಿ ಚಲಿಕೆ, ಪುಟ್ಟಿ, ಪಿಕಾಸಿಗಳನ್ನು ಹಿಡಿದು ನಿಂತ ಕಂಧಮಾಲ್‌ನ ಫ‌ುಲ್ಬಾನಿಯ ಬುಡಕಟ್ಟು ಜನಾಂಗದ ಜಲಂಧರ್‌ ನಾಯಕ್‌ ಬೇಟೆಗೆ ನಿಂತವನಲ್ಲ, ಯುದ್ಧಕ್ಕೂ ಹೊರಟ ವನಲ್ಲ. ಬದಲಿಗೆ, ತನ್ನ ಹಳ್ಳಿಯಿಂದ ಸುಮಾರು 15 ಕಿ.ಮೀ. ದೂರ ವಿರುವ ಮುಖ್ಯ ರಸ್ತೆ ವರೆಗೆ ಒಂದು ಸಂಪರ್ಕ ರಸ್ತೆಯನ್ನು ಕಲ್ಪಿಸಲು ಟೊಂಕ ಕಟ್ಟಿ ನಿಂತವ ಈತ. 

Advertisement

ಉದ್ದೇಶ ಈಡೇರಿಕೆಗೆ 2 ವರ್ಷಗಳಿಂದ ಒಬ್ಬನೇ  ಹಳ್ಳಿ-ಮುಖ್ಯರಸ್ತೆ ನಡುವಿದ್ದ ಗುಡ್ಡಗಳನ್ನು ಕಡಿದು ರಸ್ತೆ ಮಾಡುತ್ತಿದ್ದಾನೆ. ಈಗಾಗಲೇ 7 ಕಿ.ಮೀ. ರಸ್ತೆ ಮಾಡಿರುವ ಈತ, ಮುಂದಿನ 3 ವರ್ಷಗಳಲ್ಲಿ 8 ಕಿ.ಮೀ. ಮಾಡುವ ಗುರಿಯಿಟ್ಟುಕೊಂಡಿ ದ್ದಾನೆ. ಈತನ ಕಥೆ ಕೇಳುತ್ತಿದ್ದರೆ, ಬಿಹಾರದಲ್ಲಿ ತನ್ನ ಜೀವನದ ಅಮೂಲ್ಯ 22 ವರ್ಷಗಳನ್ನು ಸವೆಸಿ ದೊಡ್ಡ ಗುಡ್ಡದ ಮಧ್ಯೆ ಏಕಾಂಗಿಯಾಗಿ ರಸ್ತೆ¤ ನಿರ್ಮಿಸಿದ್ದ ದಶರಥ್‌ ಮಾಂಝಿ ನೆನಪಾಗುತ್ತಾರೆ. ದಶರಥ್‌ ಪತ್ನಿ ನೆನಪಿಗಾಗಿ ಆ ರಸ್ತೆ ನಿರ್ಮಿಸಿದರೆ, ನಾಯಕ್‌ ತಮ್ಮ ಮಕ್ಕಳು ಶಾಲೆಗೆ ಹೋಗಲು ಅಡ್ಡಿಯಾ ಗಿ ರುವ ಈ ಗುಡ್ಡಗಳನ್ನು ಕರಗಿಸಲು ಹೊರಟಿ ದ್ದಾರೆ. ತಾವು ಒಂದಕ್ಷರ ಕಲಿಯದಿದ್ದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಜೀವ ತೇಯುತ್ತಿದ್ದಾನೆ. 

ಬೆಂಬಲಕ್ಕೆ ಬಂದ ಜಿಲ್ಲಾಡಳಿತ 
ಸ್ಥಳೀಯ ಪತ್ರಿಕೆಗಳಲ್ಲಿ ನಾಯಕ್‌ ಬಗ್ಗೆ ಬಂದ ವರದಿಗಳನ್ನು ನೋಡಿದ ಜಿಲ್ಲಾಧಿ ಕಾರಿ, ಈತನಿಗೆ ಹೆಚ್ಚಿನ ಕೂಲಿಯಾಳುಗಳ ನೆರವು ನೀಡಿ ಈತನ ಯೋಜನೆ ಬೇಗ ಮುಗಿಯುವಂತೆ ಆದೇಶಿಸಿದ್ದಾರೆ. ನರೇಗಾ ಯೋಜನೆಯಡಿಯಲ್ಲಿ ಕೂಲಿ ನೀಡಲೂ ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಇವರನ್ನು ಸಮ್ಮಾನಿಸಲೂ ಜಿಲ್ಲಾಡಳಿತ ಆಲೋಚಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next