Advertisement

ಬಳ್ಳಾರಿ: ಕೋವಿಡ್-19 ಆಸ್ಪತ್ರೆಯಿಂದ ಗುಣಮುಖರಾದ ಇನ್ನೋರ್ವ ಬಿಡುಗಡೆ

02:18 PM May 03, 2020 | keerthan |

ಬಳ್ಳಾರಿ: ನಗರದ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಸೊಂಕಿನಿಂದ ಗುಣಮುಖರಾದ ಹೊಸಪೇಟೆಯ ಮತ್ತೊಬ್ಬ ಪಿ.336 ಭಾನುವಾರ ಬಿಡುಗಡೆ ಮಾಡಲಾಯಿತು. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದವರ ಸಂಖ್ಯೆ 8 ಕ್ಕೆ ಏರಿದಂತಾಗಿದೆ.

Advertisement

ಜಿಲ್ಲೆಯಲ್ಲಿ ಇದುವರೆಗೆ 13 ಜನ ಸೋಂಕಿತರಾಗಿದ್ದರು. ಅವರಲ್ಲಿ ಈ ಮೊದಲು ಗುಣಮುಖರಾದ ಪಿ-89, ಪಿ-91 ಮತ್ತು ಪಿ-141 ನಂತರ ಪಿ-90 ಮತ್ತು ಪಿ-151 ಅವರನ್ನು ಬಿಡುಗಡೆ ಮಾಡಲಾಗಿತ್ತು. ಮೇ 1 ರಂದು ಹೊಸಪೇಟೆಯ 21 ವರ್ಷದ ಪಿ-333 ಮತ್ತು 24 ವರ್ಷದ ಪಿ- 337 ಅವರನ್ನು ಗುಣಮುಖರಾದ ಹಿನ್ನೆಲೆ ಎರಡು ದಿನಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು. ಇದೀಗ ಇದೇ ಕುಟುಂಬಕ್ಕೆ ಸೇರಿದ ಹೊಸಪೇಟೆಯ ಪಿ-336 ಅವರನ್ನು ಭಾನುವಾರ ಬಿಡುಗಡೆ ಮಾಡಲಾಗಿದ್ದು, ಹೊಸಪೇಟೆಯ ಒಂದೇ ಕುಟುಂಬದ 11 ಜನ ಸೋಂಕಿತರ ಪೈಕಿ 7 ಜನರು ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದ್ದಾರೆ. ಹೊಸಪೇಟೆ ನಗರದ ಇವರು, ಈ ಮುಂಚೆ ಬಿಡುಗಡೆಯಾದ ಜಿಲ್ಲೆಯ ಮೊದಲ ಸೋಂಕಿತರ ಪ್ರಥಮ ಸಂಪರ್ಕಿತರಾಗಿದ್ದಾರೆ.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ದರಾಗಿ ನಿಂತಿದ್ದ ಪಿ-336 ಅವರಿಗೆ ಹೂಗುಚ್ಛ ನೀಡಿ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಕಳುಹಿಸಿದರು. ನಂತರ ಅವರಿಗೆ ಪಡಿತರ ಕಿಟ್ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಅವರು ಮಾತನಾಡಿ, ಇವರು ಬಂದಾಗ ಸಾಕಷ್ಟು ಭಯಭೀತರಾಗಿದ್ದರು, ಇವರಿಗೆ ಆಪ್ತ ಸಮಾಲೋಚನೆ ಮಾಡಿ ಅವರಲ್ಲಿದ್ದ ಭಯ ಹೋಗಲಾಡಿಸಿ, ಚಿಕಿತ್ಸೆ ನೀಡಿದೆವು,  ಅವರು‌ ಇಂದು ಗುಣಮುಖರಾಗಿ ಹೊರಬಂದಿದ್ದಾರೆ ಎಂದರು.

ಇವರನ್ನು 14 ದಿನಗಳವರೆಗೆ ಹೋಮ್ ಕ್ವಾರಂಟೈನ್ ಮತ್ತು 14 ದಿನಗಳ ಕಾಲ ಸೆಲ್ಪ್ ರಿಪೋರ್ಟಿಂಗ್ ಮಾಡಲಾಗುವುದು ಹಾಗೂ ಜಿಲ್ಲಾ ಕಂಟ್ರೋಲ್ ರೂಂ ಮತ್ತು ನಮ್ಮ ರ್ಯಾಪಿಡ್ ರಿಸ್ಪಾನ್ಸ್ ತಂಡದಿಂದ 28 ದಿನಗಳ ಕಾಲ ನಿಗಾವಹಿಸಲಾಗುವುದು ಎಂದು ತಿಳಿಸಿದ ಅವರು, ಈ ಆರ್‍ ಆರ್‍ಟಿ ತಂಡಗಳು ಗುಣಮುಖರಾಗಿರುವ ಈ ಜನರ ಮನೆಗಳ ಸುತ್ತಮುತ್ತಲಿನ ಮನೆಯವರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಗುಣಮುಖರಾಗಿ ಹೊರಬಂದ ಪಿ- 336 ಅವರು ತೀವ್ರ ಭಾವುಕರಾದರು. ನಂತರ ಮಾತನಾಡಿದ ಅವರು ಆಸ್ಪತ್ರೆಗೆ ದಾಖಲಾಗಿ‌ ಬಂದಾಗಿನಿಂದ ಇಲ್ಲಿಯವರೆಗೆ ಚೆನ್ನಾಗಿ ನೋಡಿಕೊಂಡರು. ಸಮರ್ಪಕ ಚಿಕಿತ್ಸೆ ಕೊಟ್ಟರು , ಸ್ಥೈರ್ಯ ಕಳೆದುಕೊಂಡಿದ್ದ ನಮ್ಮನ್ನು ಮಾನಸಿಕವಾಗಿಯೂ ಸಜ್ಜುಗೊಳಿಸಿದರು ಮತ್ತು ಗುಣಮಟ್ಟ ಆಹಾರ ಒದಗಿಸಿದರು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಋಣವನ್ನು‌ ನಾವೆಂದು ಮರೆಯುವುದಿಲ್ಲ ಎಂದರು.

Advertisement

ಈ ಸಂದರ್ಭದಲ್ಲಿ ಕೋವಿಡ್ ನೋಡಲ್ ಅಧಿಕಾರಿ ಡಾ.ಮಲ್ಲಿಕಾರ್ಜುನ, ಡಾ.ಅನಿಲ್, ಡಾ.ಲಿಂಗರಾಜು, ಡಾ.ವಿಜಯ ಶಂಕರ್, ಡಾ.ಸುನೀಲ್, ಡಾ.ವಿನಯ್, ಡಾ.ಸುಜಾತಾ , ಶುಶ್ರೂಷಾ ಅಧೀಕ್ಷಕಿ ಶಾಂತಾಬಾಯಿ, ಡಾ.ಚಿತ್ರಶೇಖರ್, ಡಾ.ಉಮಾ‌ಮಹೇಶ್ವರಿ‌‌ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next