Advertisement

Kuno National Park: ಚೀತಾಗಳ ಸ್ಥಳಾಂತರಕ್ಕೆ ಕೇಂದ್ರಕ್ಕೆ ಪತ್ರ

10:00 PM Apr 24, 2023 | Team Udayavani |

ಭೋಪಾಲ್‌: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ನಮೀಬಿಯಾದಿಂದ ತರಲಾಗಿದ್ದ ಎರಡು ಚೀತಾಗಳು ಮೃತಪಟ್ಟ ಹಿನ್ನೆಲೆಯಲ್ಲಿ ಚೀತಾಗಳನ್ನು ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸುವಂತೆ ಕೋರಿ ಉದ್ಯಾನದ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

Advertisement

ಕಳೆದ ಸೆಪ್ಟೆಂಬರ್‌ನಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಎರಡೂ ಬ್ಯಾಚ್‌ಗಳಲ್ಲಿ ಬಂದ 8 ಮತ್ತು 12 ಸೇರಿ ಒಟ್ಟು 20 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬಿಡಲಾಗಿತ್ತು. ಭಾನುವಾರ “ಉದಯ್‌’ ಹೆಸರಿನ ಗಂಡು ಚೀತಾ ಮೃತಪಟ್ಟಿತ್ತು.

“ಇಲ್ಲಿ ಸ್ಥಳದ ಸಮಸ್ಯೆ ಇದೆ. ಮುಖ್ಯವಾಗಿ ಲಾಜಿಸ್ಟಿಕ್ಸ್‌ ಸಮಸ್ಯೆ ಇದೆ. ಒಂದು ಚೀತಾ ಕುರಿತು ದಿನದ 24 ಗಂಟೆ ಗಮನಹರಿಸಲು 9 ಸಿಬ್ಬಂದಿ ಬೇಕು. ಆದರೆ ಇಲ್ಲಿ ಸಿಬ್ಬಂದಿ ಕೊರತೆ ಇದೆ,’ ಎಂದು ಉದ್ಯಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next