Advertisement

ಸೌದಿಯಿಂದ ಮತ್ತೂಂದು ದಿಟ್ಟ ಹೆಜ್ಜೆ

11:07 AM Oct 07, 2019 | sudhir |

ರಿಯಾದ್‌: ಸೌದಿ ಅರೇಬಿಯಾದ ಹೊಟೇಲ್‌ ಮತ್ತು ಲಾಡಿjಂಗ್‌ಗಳಲ್ಲಿ ಸೌದಿಯ ಮಹಿಳೆಯರು ಸೇರಿ ಯಾವುದೇ ವಿದೇಶಿ ಮಹಿಳೆಯರು ಏಕಾಂಗಿಯಾಗಿ ಉಳಿದುಕೊಳ್ಳ ಬಹುದಾದ ಸ್ವಾತಂತ್ರ್ಯವನ್ನು ಅಲ್ಲಿ ಸರಕಾರ ಕಲ್ಪಿಸಿದೆ.

Advertisement

ಈ ಮೊದಲು, ಸಂಪ್ರದಾಯಸ್ಥರ ದೇಶವಾದ ಸೌದಿ ಮಹಿಳೆಯರು ತಮ್ಮ ಕುಟುಂಬದ ಸದಸ್ಯರಲ್ಲಿನ ಪುರುಷರ ಜತೆಗೆ ಮಾತ್ರ ತಾವಿರುವ ಸ್ಥಳದಿಂದ ಬೇರೆಡೆಗೆ ಪ್ರಯಾಣಿಸಲು ಅವಕಾಶ ವಿತ್ತು. ಈಗ, ಆಧುನಿಕ ಸೌದಿಯನ್ನು ಕಟ್ಟಲು ಮುಂದಾಗಿರುವ ರಾಜಕುಮಾರ್‌ ಮೊಹಮ್ಮದ್‌ ಸಲ್ಮಾನ್‌, ಕಳೆದ ವರ್ಷ ಅಲ್ಲಿನ ಮಹಿಳೆಯರಿಗೆ ಫ‌ುಟ್ಬಾಲ್‌ ಕ್ರೀಡಾಂಗಣಗಳಿಗೆ ಹೋಗಿ ಪಂದ್ಯ ವೀಕ್ಷಿಸುವ, ಸಿನೆಮಾ ಮಂದಿರಗಳಿಗೆ ಹೋಗುವ ಸ್ವಾತಂತ್ರ್ಯ ನೀಡಿದ್ದರು. ಈಗ, ಮಹಿಳಾ ಸಬಲೀಕರಣ ಸಾಧಿಸುವ ನಿಟ್ಟಿನಲ್ಲಿ ಮತ್ತೂಂದು ಹೆಜ್ಜೆಯನ್ನಿಟ್ಟಿದ್ದಾರೆ. ಇದೇ ವೇಳೆ, ಸೌದಿಗೆ ಭೇಟಿ ನೀಡುವ ವಿದೇಶಿ ಪುರುಷ ಮತ್ತು ಮಹಿಳೆಯರಿಗೆ ಸೌದಿಯ ಹೊಟೇಲ್‌ಗ‌ಳ ಕೊಠಡಿಯಲ್ಲಿ ತಮ್ಮ ನಡುವಿನ ಸಂಬಂಧವನ್ನು ಸಾಬೀತುಪಡಿಸದೇ ಉಳಿದುಕೊಳ್ಳಲು ಅನುವು ಮಾಡಿಕೊಡಲಾಗಿದೆ. ಈ ಹಿಂದೆ, ಸೌದಿಯ ನಾಗರಿಕರು ಸೇರಿದಂತೆ ವಿದೇಶಿ ಪುರುಷ ಮತ್ತು ಮಹಿಳೆಯರಿಗೆ, ಅವರು ದಂಪತಿಗಳಾಗಿರದಿದ್ದಲ್ಲಿ ಅವರಿಗೆ ಯಾವುದೇ ಹೊಟೇಲ್‌ ಕೊಠಡಿಗಳಲ್ಲಿ ಒಟ್ಟಿಗೆ ತಂಗಲು ಅವಕಾಶ ವಿರಲಿಲ್ಲ.

ಆದರೆ, ದಂಪತಿಗಳಿಗೆ ಮಾತ್ರ ಹೊಟೇಲ್‌ ಬುಕ್ಕಿಂಗ್‌ ಎಂಬ ಹಿಂದಿನ ನಿಯಮವನ್ನು ವಿದೇಶಿಗರಿಗೆ ಮಾತ್ರ ಬದಲಾಯಿಸಲಾಗಿದ್ದು, ಸೌದಿ ನಾಗರಿಕರಿಗೆ ಅದನ್ನು ಯಥಾವತ್ತಾಗಿ ಮುಂದುವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next