ಬೀದರ್: ಜಿಲ್ಲೆಯಲ್ಲಿ ಸತತ ನಾಲ್ಕು ದಿನ ಮರಣ ಮೃದಂಗ ಬಾರಿಸಿರುವ ಹೆಮ್ಮಾರಿ ಕೋವಿಡ್ ಸೋಂಕು ಬುಧವಾರ ಸ್ವಲ್ಪ ತಗ್ಗಿದ್ದು, 29 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 879ಕ್ಕೆ ಏರಿಕೆಯಾಗಿದೆ.
ಕಳೆದ ಶನಿವಾರದಿಂದ ನಿರಂತರ ನಾಲ್ಕು ದಿನ ಜಿಲ್ಲೆಯಲ್ಲಿ ಕೋವಿಡ್ ಅಟ್ಟಹಾಸದಿಂದ 28 ಮೃತಪಟ್ಟಿದ್ದರು. ಬುಧವಾರ ಸಾವಿನ ಕೇಕೆಗೆ ಬಿಡುವು ನೀಡಿದ್ದರೂ ಆತಂಕ ಮಾತ್ರ ಕಡಿಮೆ ಆಗಿಲ್ಲ. ಕೋವಿಡ್ ಆಸ್ಪತ್ರೆ ಐಸಿಯು ವಾರ್ಡ್‌ನಲ್ಲಿ ಎರಡೂ¾ರು ಸೋಂಕಿತರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೀದರ್ ನಗರ ಸೇರಿ ತಾಲೂಕಿನಲ್ಲಿ 12 ಕೇಸ್, ಭಾಲ್ಕಿ 11, ಹುಮನಾಬಾದ 5 ಮತ್ತು ಔರಾದ ತಾಲೂಕಿನಲ್ಲಿ 1 ಸೋಂಕಿತ ಸೇರಿ 29 ಪ್ರಕರಣಗಳು ವರದಿಯಾಗಿವೆ.
ಬೀದರ್ ತಾಲೂಕಿನಲ್ಲಿ 7 ವರ್ಷದ ಹೆಣ್ಣು ಪಿ ಬಿಡಿಆರ್858, 8 ವರ್ಷದ ಹೆಣ್ಣು ಪಿ ಬಿಡಿಆರ್860, 36 ವರ್ಷದ ಹೆಣ್ಣು ಪಿ ಬಿಡಿಆರ್861, 24 ವರ್ಷ ಹೆಣ್ಣು ಪಿ ಬಿಡಿಆರ್867, 22 ವರ್ಷದ ಗಂಡು ಪಿ ಬಿಡಿಆರ್870, 28 ವರ್ಷದ ಗಂಡು ಪಿ ಬಿಡಿಆರ್871, 70 ವರ್ಷದ ಗಂಡು ಪಿ ಬಿಡಿಆರ್872, 28 ವರ್ಷದ ಗಂಡು ಪಿ ಬಿಡಿಆರ್873, 29 ವರ್ಷದ ಗಂಡು ಪಿ ಬಿಡಿಆರ್874, ಪಿ 45 ವರ್ಷದ ಗಂಡು ಪಿ 875, 28 ವರ್ಷದ ಹೆಣ್ಣು ಪಿ ಬಿಡಿಆರ್878, 19 ವರ್ಷದ ಗಂಡು ಪಿ ಬಿಡಿಆರ್879. ಭಾಲ್ಕಿ ತಾಲೂಕಿನಲ್ಲಿ 39 ವರ್ಷದ ಹೆಣ್ಣು ಪಿ ಬಿಡಿಆರ್852, 35 ವರ್ಷದ ಹೆಣ್ಣು ಪಿ ಬಿಡಿಆರ್853, 45 ವರ್ಷದ ಗಂಡು ಪಿ ಬಿಡಿಆರ್856, 10 ವರ್ಷದ ಗಂಡು ಪಿ ಬಿಡಿಆರ್862, 48 ವರ್ಷದ ಹೆಣ್ಣು ಪಿ ಬಿಡಿಆರ್863, 46 ವರ್ಷದ ಗಂಡು ಪಿ ಬಿಡಿಆರ್864, 22 ವರ್ಷದ ಗಂಡು ಪಿ ಬಿಡಿಆರ್865, 47 ವರ್ಷದ ಗಂಡು ಪಿ ಬಿಡಿಆರ್866, 21 ವರ್ಷದ ಹೆಣ್ಣು ಪಿ ಬಿಡಿಆರ್868, 75 ವರ್ಷದ ಹೆಣ್ಣು ಪಿ ಬಿಡಿಆರ್869, 4 ವರ್ಷದ ಗಂಡು ಪಿ ಬಿಡಿಆರ್876. ಹುಮನಾಬಾದ ತಾಲೂಕಿನಲ್ಲಿ 46 ವರ್ಷದ ಹೆಣ್ಣು ಪಿ ಬಿಡಿಆರ್851, 35 ವರ್ಷದ ಗಂಡು ಪಿ ಬಿಡಿಆರ್854, 45 ವರ್ಷದ ಗಂಡು ಹೆಣ್ಣು ಪಿ ಬಿಡಿಆರ್855, 68 ವರ್ಷದ ಹೆಣ್ಣು ಪಿ ಬಿಡಿಆರ್857, 51 ವರ್ಷದ ಹೆಣ್ಣು ಪಿ ಬಿಡಿಆರ್877 ಮತ್ತು ಔರಾದ ತಾಲೂಕಿನಲ್ಲಿ 45 ವರ್ಷದ ಹೆಣ್ಣು ಪಿ 859 ರೋಗಿಗಳಿಗೆ ಸೋಂಕು ಕಾಣಿಸಿಕೊಂಡಿದೆ..
ಜಿಲ್ಲೆಯಲ್ಲಿ ಈವರೆಗೆ 879 ಸೋಂಕಿತರ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 562 ಜನ ಡಿಸ್ಚಾರ್ಜ್ ಆಗಿದ್ದರೆ, 268 ಸಕ್ರಿಯ ಪ್ರಕರಣಗಳಿವೆ. 3171 ಜನರ ಗಂಟಲು ದ್ರವ ಪರೀಕ್ಷಾ ವರದಿ ಬರುವುದು ಬಾಕಿ ಇದೆ.