Advertisement
ಮೇ 8ರಂದು ಸಂತ್ರಸ್ತೆಯೊಬ್ಬರು ಪ್ರಜ್ವಲ್ ವಿರುದ್ಧ ನೀಡಿರುವ ದೂರಿಗೆ ಸಂಬಂಧಿಸಿದಂತೆ 3ನೇ ಎಫ್ಐಆರ್ ದಾಖಲಾಗಿದೆ.
ಪ್ರಕರಣದಲ್ಲಿ ಸಿಲುಕಿರುವ ಕೆಲವು ಮಹಿಳಾ ಸರಕಾರಿ ಅಧಿಕಾರಿಗಳು ಎಸ್‌ಐಟಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರು ಮಹಿಳಾ ಅಧಿಕಾರಿಗಳಿಂದ ಎಸ್‌ಐಟಿ ಹೇಳಿಕೆ ದಾಖಲಿಸಿಕೊಂಡಿದೆ ಎನ್ನಲಾಗಿದೆ. ವರ್ಗಾವಣೆಗಾಗಿ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಿಲ್ಲ. ಸಂತ್ರಸ್ತ ಮಹಿಳೆಯರ ಹೇಳಿಕೆಯನ್ನು ಹಳೆಯ ಎಫ್ಐಆರ್‌ಗೆ ಸೇರ್ಪಡ ಮಾಡಬೇಕೇ ಅಥವಾ ಪ್ರತ್ಯೇಕ ಎಫ್ಐಆರ್ ದಾಖಲಿಸಬೇಕೇ ಎಂಬ ಬಗ್ಗೆ ತಿಳಿದುಕೊಳ್ಳಲು ಎಸ್‌ಐಟಿ ಕಾನೂನು ತಜ್ಞರ ಮೊರೆ ಹೋಗಿದೆ.
Related Articles
376(2)(ಎನ್): ಮಹಿಳೆಯ ಮೇಲೆ ಅತ್ಯಾಚಾರ. ಕನಿಷ್ಠ 10 ವರ್ಷಗಳಿಂದ ಗರಿಷ್ಠ ಜೀವಾವಧಿ ಶಿಕ್ಷೆ.
376(2)(ಕೆ): ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ. ಕನಿಷ್ಠ 10 ವರ್ಷಗಳಿಂದ ಗರಿಷ್ಠ ಜೀವಾವಧಿ ಶಿಕ್ಷೆ.
-354(ಎ): ಲೈಂಗಿಕ ದೌರ್ಜನ್ಯ. 3 ವರ್ಷ ಶಿಕ್ಷೆ
- 354(ಬಿ): ಸಂತ್ರಸ್ತೆಯ ಬಟ್ಟೆ ಹಿಡಿದು ಎಳೆದಾಡಿರುವುದು. 3ರಿಂದ 7 ವರ್ಷಗಳವರೆಗೆ ಶಿಕ್ಷೆ.
-354(ಸಿ): ಮಹಿಳೆಯ ಲೈಂಗಿಕ ಕ್ರಿಯೆಯನ್ನು ಚಿತ್ರೀಕರಿಸುವುದು, ವೀಕ್ಷಿಸುವುದು. 3 ರಿಂದ 7 ವರ್ಷಗಳವರೆಗೆ ಶಿಕ್ಷೆ.
506- ಬೆದರಿಕೆ. ಗರಿಷ್ಠ 7 ವರ್ಷ ಶಿಕ್ಷೆ.
Advertisement