Advertisement
ಅಂತಹ ಕಥೆ, ಪಾತ್ರ ಸಿಕ್ಕ ಖುಷಿಯಲ್ಲೇ “ಮಿ.ಪರ್ಫೆಕ್ಟ್’ ಚಿತ್ರವನ್ನು ಅನೂಪ್ ಸಾ.ರಾ.ಗೋವಿಂದು ಒಪ್ಪಿಕೊಂಡರು. ಆ ಚಿತ್ರದಲ್ಲಿ ಪಾತ್ರ ಹೇಗಿದೆ. ಕಥೆ ಎಂಥದ್ದು, ಗ್ಯಾಪ್‌ನಲ್ಲಿ ಅನೂಪ್ ಏನೆಲ್ಲಾ ಮಾಡುತ್ತಿದ್ದರು. ಅವರ ಕನಸಿನ ಪಾತ್ರವೇನು ಇತ್ಯಾದಿ ಕುರಿತು “ಉದಯವಾಣಿ’ ಜತೆ ಅನೂಪ್ ಮಾತಾಡಿದ್ದಾರೆ.
Related Articles
Advertisement
ಆದರೆ, ಇದು ಪಕ್ಕಾ ಸ್ವಮೇಕ್ ಚಿತ್ರ. ಹೈದರಾಬಾದ್ ತಂಡ ಸೇರಿ ಮಾಡುತ್ತಿರುವ ಕನ್ನಡದ ಮೊದಲ ಸಿನಿಮಾ ಇದು. ರಮೇಶ್ ಬಾಬು ಎಂಬುವವರು “ಮಿ. ಪರ್ಫೆಕ್ಟ್’ ಚಿತ್ರದ ನಿರ್ದೇಶಕರು. ಸುಬ್ಟಾರಾಯಡು ಈ ಚಿತ್ರ ನಿರ್ಮಿಸಿದ್ದಾರೆ. ಇನ್ನು, ಚಿತ್ರಕ್ಕೆ ಪ್ರಭಾಕರ್‌ರೆಡ್ಡಿ ಕ್ಯಾಮೆರಾ ಹಿಡಿದಿದ್ದಾರೆ. ನಾನಿಲ್ಲಿ ಒಬ್ಬ ಜವಾಬ್ದಾರಿಯತ ತಂದೆಯ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಹಿರಿಯ ಕಲಾವಿದ ರಮೇಶ್‌ಭಟ್ ನನ್ನ ತಂದೆಯಾಗಿ ನಟಿಸಿದ್ದಾರೆ.
ನನಗೆ ಶಾಲಿನಿ ನಾಯಕಿ. ಈ ಪಾತ್ರ ಆಯ್ಕೆ ಮಾಡಿಕೊಳ್ಳಲು ಕಾರಣ, ಪಾತ್ರದಲ್ಲಿ ವಿಭಿನ್ನತೆ ಜತೆಗೆ ಎನರ್ಜಿ ಇತ್ತು. ಸಮಾಜದಲ್ಲಿ ನಡೆಯುವ ಕೆಲ ಅವ್ಯವಸ್ಥೆಗಳನ್ನು ಇಲ್ಲಿ ಹೇಳಲಾಗಿದೆ. ಅಂತಹ ವ್ಯವಸ್ಥೆ ವಿರುದ್ಧ ಹೋರಾಡುವಂತಹ ಪಾತ್ರ ನನ್ನದು. ಹಲವು ಅಕ್ರಮ ಬಯಲಿಗೆಳೆಯುವ ಪಾತ್ರ ಇಲ್ಲಿದೆ. ಆದರೆ, ಅದು ಎಂತಹ ಅಕ್ರಮ ಅನ್ನೋದು ಸಿನಿಮಾದಲ್ಲಿ ಕಾಣಬೇಕು. ಕಥೆಗೆ ಪೂರಕವಾಗಿ ನಾಲ್ಕು ಹಾಡುಗಳಿವೆ.
ಎಲ್ಲಾ ಹಾಡುಗಳು ಜನರ ಮನಸ್ಸನ್ನು ಗೆದ್ದಿವೆ. ನನ್ನ ಪ್ರಕಾರ, ಇದುವರೆಗೆ ನಾನು ಇಂತಹ ಪಾತ್ರ ಮಾಡಿಲ್ಲ. ಮನರಂಜನೆ ಮೂಲಕ ಸಮಾಜಕ್ಕೊಂದು ಸಂದೇಶ ಸಾರುವ ಚಿತ್ರ ಇದಾಗಲಿದೆ. “ಮಿ.ಪರ್ಫೆಕ್ಟ್’ ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಚಿತ್ರ. ಇಲ್ಲಿ ಯೂತ್ಸ್ಗೆ ಬೇಕಾದಂತಹ ಎಲ್ಲಾ ಅಂಶಗಳೂ ಇವೆ ಎನ್ನುತ್ತಾರೆ ಅನೂಪ್ ಸಾ.ರಾ.ಗೋವಿಂದು.
ಸದ್ಯಕ್ಕೆ ಮಠ ಗುರುಪ್ರಸಾದ್ ಅವರ “ಅದೇಮಾ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅದಾದ ಬಳಿಕ ಬೇರೆ ಕಥೆ ಕೇಳುತ್ತೇನೆ. ನನಗೆ ಸಿನಿಮಾ ಮಾಡುವ ಅವಸರವಿಲ್ಲ. ಒಳ್ಳೆಯ ಕಥೆ ಸಿಕ್ಕರಷ್ಟೇ ಮಾಡ್ತೀನಿ. ನಿಧಾನವಾದರೂ ಸರಿ, ಒಂದಾದ ಮೇಲೊಂದು ಸಿನಿಮಾ ಮಾಡುವ ಗುರಿ ಇಟ್ಟುಕೊಂಡಿದ್ದೇನೆ. ಹೊಸ ಬಗೆಯ ಕಥೆ, ಪಾತ್ರ ಎದುರು ನೋಡುತ್ತಿದ್ದೇನೆ. ಒಳ್ಳೆಯ ಕಥೆ ಇದ್ದರೆ ಸಾಕು.
ಅದರಲ್ಲಿ ಯಾವುದೇ ಹೀರೋಯಿಸಂ ಅಂತೇನೂ ಬೇಕಿಲ್ಲ. ಕಥೆ ಹೀರೋ ಆಗಿದ್ದರಷ್ಟೇ ಸಾಕು. ತಮಗಾಗಿಯೇ ಕಥೆ ಹೆಣೆಯುವ ಅಗತ್ಯವೂ ಇಲ್ಲ. ಕಥೆ ಚೆನ್ನಾಗಿದ್ದರೆ, ಅದು ಹೊಂದಿಕೆಯಾಗುವಂತಿದ್ದರೆ, ಕಥೆಯನ್ನೇ ಹೀರೋ ಅಂದುಕೊಂಡು ಕೆಲಸ ಮಾಡುತ್ತೇನೆ ಎನ್ನುವ ಅನೂಪ್, “ಮಿ.ಪರ್ಫೆಕ್ಟ್’ ಬಳಿಕ ಹೊಸ ಸುದ್ದಿ ಹೊರಬಿಡುವ ಯೋಚನೆಯಲ್ಲಿದ್ದಾರೆ. ಇನ್ನು, ಫೆಬ್ರವರಿಯಲ್ಲಿ ಅವರ ಮದುವೆ ನಡೆಯಲಿದೆ.