ದೆಹಲಿಯಲ್ಲಿ 1942ರಲ್ಲಿ ಜನಿಸಿದ ವಿಕ್ರಂ ಲಾಲ್, ಆ ಕಾಲದಲ್ಲೇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಜರ್ಮನಿ ವಿಶ್ವವಿದ್ಯಾಲಯದಿಂದ ಪಡೆದಿದ್ದರು. ವಿದೇಶದಿಂದ ಹಿಂತಿರುಗಿದ ಅವರು, ತಂದೆಯ ಸುಪರ್ದಿಯಲ್ಲಿದ್ದ ಐಷರ್ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡರು. ಭಾರತದ ಮೊದಲ ಟ್ರ್ಯಾಕ್ಟರ್ ತಯಾರಕ ಸಂಸ್ಥೆ ಎಂದು ಕರೆಯಲ್ಪಡುವ ಐಷರ್ ಸಂಸ್ಥೆಯನ್ನು ವಿಕ್ರಂ ಲಾಲ್ ಅವರ ತಂದೆ, 1960ರಲ್ಲಿ ಸ್ಥಾಪಿಸಿದ್ದರು.
ವಿಕ್ರಂ, ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡ ನಂತರವೇ ಟ್ರ್ಯಾಕ್ಟರ್‌ಗೆ ಮಾತ್ರವೇ ಸೀಮಿತವಾಗದೇ ಅದರಾಚೆಗೂ ತನ್ನ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಯಿತು. ಅದರ ಫಲವಾಗಿ, ಹಗುರ ವಾಹನ ಮತ್ತು ಭಾರೀ ವಾಹನಗಳ ತಯಾರಿಯಲ್ಲಿಯೂ ಸಂಸ್ಥೆ ಹೆಸರು ಮಾಡಿತು. ಭಾರತದ ಹೆಸರಾಂತ ದ್ವಿಚಕ್ರವಾಹನ ತಯಾರಕ ಸಂಸ್ಥೆಯಾದ ರಾಯಲ್ ಎನ್ ಫೀಲ್ಡ್, ಐಷರ್ ಕಂಪನಿಯ ಅಧೀನದಲ್ಲಿದೆ ಎನ್ನುವ ಸಂಗತಿ ಅನೇಕರಿಗೆ ತಿಳಿದಿರಲಿಕ್ಕಿಲ್ಲ.
ವಿಕ್ರಂ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ. ಅವರು ಮೂರು ಶಾಲೆಗಳನ್ನು ತೆರೆದಿದ್ದಾರೆ. 4,000ಕ್ಕೂ ಹೆಚ್ಚು ಮಕ್ಕಳು ಅಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ “ಗುಡ್ ಅರ್ತ್ ಎಜುಕೇಷನ್ ಫೌಂಡೇಷನ್’ ಎನ್ನುವ ಎನ್‌ಜಿಓ ಮೂಲಕ, ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಕುರಿತು ಜಾಗೃತಿ ಮೂಡಿಸುವ ಕೆಲಸದಲ್ಲೂ ವಿಕ್ರಂ ನಿರತರಾಗಿದ್ದಾರೆ.
ಸಂಸ್ಥೆ: ಐಷರ್ ಮೋಟಾರ್ಸ್
ಸಂಪತ್ತು: 25,704 ಕೋಟಿ ರೂ. .