Advertisement

ಅನಾಮಿಕ ಶ್ರೀಮಂತರು: ಸಾವಿತ್ರಿ ಜಿಂದಾಲ್‌

04:35 AM Jun 15, 2020 | Lakshmi GovindaRaj |

ಭಾರತದ ಕೆಲವೇ ಮಹಿಳಾ ಕೋಟ್ಯಧಿಪತಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಸಾವಿತ್ರಿ ಜಿಂದಾಲ್‌ ಅವರು ಯಾವುದೇ ಸಂಸ್ಥೆಯನ್ನು ಸ್ಥಾಪಿಸಿ ಆ ಸ್ಥಾನಕ್ಕೆ ಏರಿದವರಲ್ಲ. ಆದರೆ ಆ ಶ್ರೀಮಂತಿಕೆಗೆ ಅವರು ಪರೋಕ್ಷ  ಕಾರಣರು. ಸ್ಟೀಲ್‌ ಉತ್ಪಾದನೆಗೆ ಹೆಸರುವಾಸಿಯಾದ ಜಿಂದಾಲ್‌ ಸಂಸ್ಥೆಯ ಅಧೀನದಲ್ಲಿ ಹಲವಾರು ಅಂಗ ಸಂಸ್ಥೆಗಳಿವೆ. ಅದನ್ನು ಸ್ಥಾಪಿಸಿದ್ದು ಪ್ರಸಿದ್ಧ ಕೈಗಾರಿಕೋದ್ಯಮಿ ಒ.ಪಿ ಜಿಂದಾಲ್‌ ಅವರ ಪತ್ನಿಯೇ ಸಾವಿತ್ರಿ ಜಿಂದಾಲ್‌  2005ರಲ್ಲಿ ಒ.ಪಿ ಜಿಂದಾಲ್‌ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟರು.

Advertisement

ನಂತರ ಜಿಂದಾಲ್‌ ಸಮೂಹದ ಉಸ್ತುವಾರಿ, ಸಾವಿತ್ರಿ ಅವರ ಹೆಗಲೇರಿತು. ಕಾಂಗ್ರೆಸ್‌ ಪಕ್ಷದ ಮೂಲಕ ರಾಜಕೀಯಕ್ಕೂ ಬಂದ ಸಾವಿತ್ರಿಯವರು,  ಹರ್ಯಾಣದಲ್ಲಿ ಕ್ಯಾಬಿನೆಟ್‌ ಸಚಿವೆಯಾ ಗಿಯೂ ಸೇವೆ ಸಲ್ಲಿಸಿದ್ದಾರೆ. ಅಚ್ಚರಿಯೆಂದರೆ, ಅಷ್ಟೊಂದು ಶ್ರೀಮಂತಿಕೆ ಇದ್ದರೂ ಅವರಿಗೆ ಸಾಮಾಜಿಕ ಚಟುವಟಿಕೆಗಳಲ್ಲೇ ಹೆಚ್ಚಿನ ಆಸಕ್ತಿ. ಈಗ ಜಿಂದಾಲ್‌ ಸಂಸ್ಥೆಯ ನಾಲ್ಕು ಪ್ರಮುಖ  ವಿಭಾಗಗಳನ್ನು ಅವರ ಮಕ್ಕಳು ನೋಡಿಕೊಳ್ಳುತ್ತಿದ್ದಾರೆ. ಸಾವಿತ್ರಿ ಅವರನ್ನು ಮಾಧ್ಯಮಗಳು, “ಭಾರತದ ಶ್ರೀಮಂತ ತಾಯಿ’ ಎಂದು ಕರೆದಿದ್ದವು.

ಉದ್ಯೋಗ: ಎಂ.ಡಿ. ಜಿಂದಾಲ್‌ ಸಮೂಹ
ಸಂಪತ್ತು: 47,880 ಕೋಟಿ ರೂ.

Advertisement

Udayavani is now on Telegram. Click here to join our channel and stay updated with the latest news.

Next