ಮುಂಬಯಿ, ಅ. 22: ರಾಮರಾಜ ಕ್ಷತ್ರಿಯ ಮಹಿಳಾ ಮಂಡಳಿಯ ವತಿಯಿಂದ ಅ. 6ರಂದು ಸಾಕಿನಾಕಾದಲ್ಲಿರುವ ಕೇಪರ್ಸ್ ಸಭಾಗೃಹದಲ್ಲಿ ಶಾರದಾ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸಂಜೆ 6ರಿಂದ ಭಜನೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಪುರೋಹಿತರು ಮುಖ್ಯ ಅತಿಥಿಗಳಾದ ನಯನಾ ಆನಂದ್ ನಾಯ್ಕ ಮತ್ತು ಆನಂದ್ ನಾಯ್ಕ ಇವರ ಮುಖೇನ ಶಾರದಾ ಪೂಜೆಯನ್ನು ನೆರವೇರಿಸಿ ಪ್ರಸಾದವನ್ನು ವಿತರಿಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಾಯಿ ಶಾರದಾಂಬೆಯ ಕೃಪಾ ಕಟಾಕ್ಷಕ್ಕೆ ಪಾತ್ರರಾದರು. ಮಹಿಳೆಯರಿಗೆ ಅರಸಿನ ಕುಂಕುಮ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಭಾ ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ವೇದಿಕೆಯಲ್ಲಿ ಅಂದಿನ ಮುಖ್ಯ ಅತಿಥಿಯಾದ ನಯನಾ ಆನಂದ್ ನಾಯ್ಕ, ರಾಮರಾಜ ಕ್ಷತ್ರಿಯ ಸಂಘದ ಅಧ್ಯಕ್ಷರಾದ ಬಿ. ಗಣಪತಿ ಶೇರುಗಾರ್, ಕಾರ್ಯದರ್ಶಿ ದಯಾನಂದ ಶೇರುಗಾರ್, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ರತ್ನಾಕರ ಭಟ್ವಾಡಿ, ಮಹಿಳಾ ಮಂಡಳಿಯ ಅಧ್ಯಕ್ಷೆ ಶುಭಾ ರಾವ್, ಉಪಾಧ್ಯಕ್ಷೆ ಭಾರತಿ ಡಿ. ರಾವ್, ಕಾರ್ಯದರ್ಶಿ ವಿಪುಲಾ ಎಸ್. ನಾಯ್ಕ, ಕೋಶಾಧಿಕಾರಿ ಹೇಮಾ ವಿ. ನಾಯ್ಕ ಉಪಸ್ಥಿತರಿದ್ದರು.
ಮುಖ್ಯ ಅತಿಥಿ ನಯನಾ ಆನಂದ್ ನಾಯ್ಕ ಮಾತನಾಡಿ, ನಾವು ಕೇವಲ ನಮಗಾಗಿ ಬದುಕುವ ಬದಲು ಜೀವನದಲ್ಲಿ ಸಮಾಜಕ್ಕೆ ನಮ್ಮ ಕೊಡುಗೆಯು ಇರಬೇಕು. ಆಗ ಜೀವನಕ್ಕೆ ಒಂದು ಅರ್ಥ ಬರುತ್ತದೆ. ಮತ್ತು ತೃಪ್ತಿಯು ಸಿಗುತ್ತದೆ. ಈ ನಿಟ್ಟಿನಲ್ಲಿ ಇತರ ಮಿತ್ರರೊಂದಿಗೆ ನ್ಯಾಸ ಎಂಬ ಸಮಾಜ ಸೇವೆಯ ಸಂಸ್ಥೆಯನ್ನು ಪ್ರಾರಂಭಿಸಿ ಹಲವಾರು ಸಮಾಜಮುಖೀ
ಕೆಲಸಗಳನ್ನು ಮಾಡುತ್ತಿದ್ದೇವೆ. ಅದು ಅಲ್ಲದೆ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಚಿತ್ರ ಕಲೆಯ ತರಗತಿ ತೆಗೆದುಕೊಳ್ಳುವುದು, ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವುದು ಹೀಗೆ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ. ಇನ್ನುಮುಂದೆಯೂ ಕೂಡ ತಾಯಿ ಶಾರದಾ ಮಾತೆಯ ಆಶೀರ್ವಾದದಿಂದ ಹೆಚ್ಚಿನ ಕೆಲಸ ಸಮಾಜಕ್ಕಾಗಿ ಮಾಡುತ್ತೇವೆ ಎಂದರು. ಅಧ್ಯಕ್ಷ ಬಿ. ಗಣಪತಿಯವರು ಮಾತನಾಡಿ, ಇಂದಿನ ಯುವಕ ಯುವತಿಯರಲ್ಲಿ ತಾಳ್ಮೆ ತುಂಬಾ ಕಡಿಮೆಯಾಗುತ್ತಿದೆ. ಚಿಕ್ಕ ಚಿಕ್ಕ ವಿಷಯಕ್ಕೆ ವಿವಾಹ ವಿಚ್ಛೇದನ ಆಗ್ತಾ ಇದೆ. ಇದು ಸಮಾಜಕ್ಕೆ ಒಳಿತು ಮಾಡುವುದಿಲ್ಲ. ಹಾಗಾಗಿ ಈ ನಿಟ್ಟನಲ್ಲಿ ಮಕ್ಕಳು ಮತ್ತು ಹಿರಿಯರು ತುಂಬಾ ಜಾಗ್ರತೆ ವಹಿಸಬೇಕು ಎಂದರು. ಜತೆ ಕೋಶಾಧಿಕಾರಿ ಸ್ವರ್ಣಲತಾ ಆರ್. ಶೇರೆಗಾರ್ ಅತಿಥಿಗಳನ್ನು ಪರಿಚಯಿಸಿದರು.
ಮಂಡಳಿಯ ಅಧ್ಯಕ್ಷೆ ಶುಭಾ ರಾವ್ ಅವರು ಕಳೆದ 15 ವರ್ಷದಿಂದ ಕಾರ್ಯಕ್ರಮ ಯಶಶ್ವಿಯಾಗಲು ಶ್ರಮ ವಹಿಸಿದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರಿಗೂ ಹಾಗು ಪ್ರಸ್ತುತ ವರ್ಷದ ಸದಸ್ಯರಾದ ಸಂಜೀವಿ ಕೊತ್ವಾಲ…, ಮಹಾಲಕ್ಷ್ಮೀ ಪಿ. ನಾಯ್ಕ, ಆಶಾ ಡಿ. ಶೇರೆಗಾರ್, ರೂಪಾ ಆರ್. ಭಟ್ವಾಡಿ, ಸುಂದರಿ ಬಿ. ರಾವ್, ಸ್ನೇಹಾ ನಾಗರಾಜ್, ಗೀತಾ ಡಿ. ಶೇರೆಗಾರ್, ಇಂದಿರಾ ಎನ್. ಶೇರೆಗಾರ್,ನಾಗವೇಣಿ ವಿ. ಹೆಗ್ಡೆ, ದೀಪಿಕಾ ರಾವ್, ರೋಮಾ ಗಣೇಶ್, ನಯನಾ ಸಂತೋಷ್ ಶೇರೆಗಾರ್ ಮತ್ತು ಜಯಂತಿ ವಿ. ನಾಯ್ಕ ಇವರಿಗೆ ಮತ್ತು ಎಲ್ಲಾ ಸಮಾಜ ಭಾಂದವರಿಗೂ ಕೃತಜ್ಞತೆ ಸಲ್ಲಿಸಿದರು.
ಬಹುಮಾನ ಪ್ರಾಯೋಜಕರಾದ ಕೆ. ವಿ. ಹೆಗ್ಡೆ ಅವರು ಪ್ರತಿವರ್ಷದಂತೆಈ ವರ್ಷವೂ ದಾಂಡಿಯಾ ರಾಸ್‌ನಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೂ, ಮಕ್ಕಳಿಗೂ ಬಹುಮಾನ ವಿತರಿಸಿದರು. ವಿಪುಲಾ ಎಸ್. ನಾಯ್ಕ… ಕಾರ್ಯಕ್ರಮ ನಿರೂಪಿಸಿದರು. ದೀಪಿಕಾ ರಾವ್ ವಂದಿಸಿದರು. ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ದಾಂಡಿಯಾ ರಾಸ್‌ನಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು