ಪತ್ತನಂತಿಟ್ಟ: ಧಾರಾಕಾರ ಮಳೆಯ ನಡುವೆಯೂ ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಸಾವಿರಾರು ಭಕ್ತರು ಮಂಗಳವಾರ ಭೇಟಿ ನೀಡಿದ್ದಾರೆ.
ಕೊರೊನಾ ನಿಯಮಗಳನ್ನು ಅನುಸರಿಸಿ 18 ಮೆಟ್ಟಿಲುಗಳನ್ನು ಏರಿ ಭಕ್ತರು ದೇವರ ದರ್ಶನ ಮಾಡಿದ್ದಾರೆ. ಬೆಳಗಿನ ಜಾವ ದೇಗುಲದ ಬಾಗಿಲು ತೆರೆದ ಬಳಿಕ ಪ್ರಧಾನ ಅರ್ಚಕ ಎನ್.ಪರಮೇಶ್ವರನ್ ನಂಬೂದಿರಿ ಅವರು ದೇಗುಲದ ಗರ್ಭಗುಡಿಯಲ್ಲಿ ಸಾಂಪ್ರದಾಯಿಕ ಜ್ಯೋತಿ ಬೆಳಗಿದ್ದಾರೆ.
ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ದೇಗುಲ ಆಡಳಿತ ಮಂಡಳಿ ಮುಂದಿನ 3-4 ದಿನಗಳ ವರೆಗೆ ಸೀಮಿತ ಸಂಖ್ಯೆಯ ಭಕ್ತರಿಗೆ ಅವಕಾಶ ನೀಡಲು ನಿರ್ಧರಿಸಿದೆ.
ಇದನ್ನೂ ಓದಿ:ನಾಥೂರಾಮ್ ಗೋಡ್ಸೆ ಪುತ್ಥಳಿ ಸ್ಥಾಪನೆ: ಮಹಾಸಭಾ ಘೋಷಣೆ
ಚೆನ್ನೈಗೆ ಮತ್ತೆ ರೆಡ್ ಅಲರ್ಟ್: ಬಂಗಾಲಕೊಲ್ಲಿಯ ಆಗ್ನೇಯ ಭಾಗ ಮತ್ತು ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಮತ್ತೆ ಮಳೆ ಆತಂಕ ಎದುರಾಗಿದೆ. ಚೆನ್ನೈ ಸೇರಿ 4 ಜಿಲ್ಲೆಗಳಿಗೆ 19ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ.