ಗೋಣಿಕೊಪ್ಪಲು: ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಬಂದು 20 ವರ್ಷಗಳಾಗಿದ್ದು, ಕೊಡಗಿನ ಕೃಷಿಕರು, ರೈತರು, ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಇನ್ನೂ ಮುಂದೆಯೂ ಜನಪರ ಹೋರಾಟವನ್ನು ಹಮ್ಮಿಕೊಳ್ಳಲಾಗುವದು ಎಂದು ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ತಿಳಿಸಿದರು.
ಕಂದಾಯ ಇಲಾಖಾಧಿಕಾರಿಗಳ ದರ್ಪದ ವಿರುದ್ಧ 20 ವರ್ಷಗಳ ಹಿಂದೆ ಆರಂಭಗೊಂಡ ಹೋರಾಟ ಮುಂದೆ ಕೊಡಗು ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ ನಾಂದಿಯಾಯಿತು ಎಂದು ಗೋಣಿಕೊಪ್ಪಲು ಸಿಲ್ವರ್ ಸ್ಕೆç ಹೋಟೆಲ್ ಸಭಾಂಗಣದಲ್ಲಿ ಜರಗಿದ 20ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ಈವರೆಗೆ ಹಲವು ಭೃಷ್ಟ ಅಧಿಕಾರಿಗಳ ವಿರುದ್ಧ, ಸ್ವಾರ್ಥ ರಾಜಕಾರಣಿಗಳು ಹಾಗೂ ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗಾಗುತ್ತಿರುವ ಶೋಷಣೆ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬರಲಾಗಿದ್ದು, ಇತ್ತೀಚೆಗಿನ ವರ್ಷಗಳಲ್ಲಿ ಕೊಡಗು ಜಿಲ್ಲೆಗೆ ಆಮದಾಗಿ ಬರುತ್ತಿದ್ದ ವಿಯಟ್ನಾಮ್ ಕಾಳುಮೆಣಸು ಬಗ್ಗೆಯೂ ಹೋರಾಟ ಮಾಡಲಾಗಿತ್ತು. ಜಲಪ್ರಳಯ ಹಾಗೂ ಅತಿವೃಷ್ಟಿ ಸಂದರ್ಭ ನೀಡಲಾದ ಪರಿಹಾರ ಮೊತ್ತದ ತಾರತಮ್ಯ ಧೋರಣೆಯ ಬಗ್ಗೆಯೂ ಮುಂದೆ ಸಾರ್ವಜನಿಕ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರದ ಗಮನ ಸೆಳೆಯಲಾಗುವದು. ಕಾಡಾನೆ, ಹುಲಿ ಹಾಗೂ ಕಾಡುಹಂದಿ ಉಪಟಳ ದಿಂದಾಗಿಯೂ ಕೊಡಗಿನ ಜನತೆ ತೀವೃ ಆತಂಕ ಎದುರಿಸುತ್ತಿದ್ದು ಪರಿಹಾರ ವಿಳಂಬ ಹಾಗೂ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿಯೂ ಕೊಡಗಿನ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದರು.
ಕಾರ್ಯಕಾರಿ ಸಮಿತಿಗೆ ಆಯ್ಕೆ
ಕಾರ್ಯಕಾರಿ ಸಮಿತಿಗೆ ಮಹಿಳಾ ಸದಸ್ಯರನ್ನೂ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು ಗುಮ್ಮಟ್ಟಿರ ಅಕ್ಕಮ್ಮ, ಸುಳ್ಳೇರ ಸ್ವಾತಿ ಅಜ್ಜಮಾಡ ಸ್ಮಿತಾ ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ
ಕಾರ್ಯಚಟುವಟಿಕೆಯನ್ನು ಇತ್ತೀಚೆಗೆ ಹುದಾಳಿಯಿಂದ ಸಾವನ್ನಪ್ಪಿದ ಜಾನುವಾರು ಕಳೇಬರವನ್ನು ವಲಯಾ ಣ್ಯಾಧಿಕಾರಿ ಕಚೇರಿ ಮುಂಭಾಗ ತಂದು ಹೋರಾಟ ರೂಪಿಸಿದ್ದ ಮಲ್ಲಂಗಡ ರಂಜ ಉತ್ತಪ್ಪ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿವೃತ್ತ ಪ್ರಾಂಶುಪಾಲ ಬಾಚೀರ ಕಾರ್ಯಪ್ಪ, ಹೋರಾಟಗಾರ ವಿಶ್ವನಾಥ್, ಕಾಳಿ ಮಾಡ ಬೆಳ್ಯಪ್ಪ, ಅಜ್ಜಮಾಡ ರಚನ್ ಅವರನ್ನು ಆಯ್ಕೆ ಮಾಡಲಾಯಿತು.