Advertisement

ವಾರ್ಷಿಕ ಸಭೆ, ಸವಿನೆನಪಿನ ಸಮುದಾಯ ಸಂಭ್ರಮ

12:19 PM Jun 02, 2019 | Sriram |

ಮಹಾನಗರ: ಬಲ್ಯಾಯ ಯಾನೆ ಕಣಿಶನ್‌ ಮಹಾಜನ ಸಂಘದ 64ನೇ ವಾರ್ಷಿಕ ಮಹಾಸಭೆ ಮತ್ತು64ನೇ ವರ್ಷದ ಸವಿನೆನಪಿನ ಸಮುದಾಯ ಸಂಭ್ರಮ ಯುವವೇದಿಕೆ ಹಾಗೂ ಮಹಿಳಾ ವೇದಿಕೆಯ ಸಹಯೋಗದಲ್ಲಿ ಇತ್ತೀಚೆಗೆ ಗರೋಡಿ ಬಳಿ ಇರುವ ಸರ್ವಮಂಗಳ ಸಭಾಭವನದಲ್ಲಿ ಜರಗಿತು.

Advertisement

ಗಣಪತಿ ಹೋಮ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ಮಕ್ಕಳಿಗಾಗಿ ರಂಗೋಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಛದ್ಮವೇಷ ಸ್ಪರ್ಧೆ ಇನ್ನಿತರ ಕಾರ್ಯ ಕ್ರಮಗಳು ನಡೆದವು.

ಮಧ್ಯಾಹ್ನ ಸಮುದಾಯ ಸಂಭ್ರಮದ ಸಭಾ ಕಾರ್ಯಕ್ರಮ ಸಂಘದ ಅಧ್ಯಕ್ಷ ದಿವಾಕರ್‌ ಕೆ. ಪಂಡಿತ್‌ ಅಧ್ಯಕ್ಷತೆಯಲ್ಲಿ, ಜರಗಿತು. ಕುಂಪಲದ ವೈದ್ಯ ಡಾ| ಕುಮಾರ ಸದಾನಂದ ಉದ್ಘಾಟಿಸಿದರು.

ಪ್ರತಿಭಾ ಪುರಸ್ಕಾರ
ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬಹುಮುಖ ಪ್ರತಿಭೆಗಳಿಗೆ ಅಭಿನಂದನೆ ನಡೆಯಿತು. ಸಮುದಾಯದ ಹಿರಿಯರನ್ನು ಸಮ್ಮಾನಿಸಲಾಯಿತು. ಸಂಘದ ಸೇವೆಗಾಗಿ ಡಾ| ಭಾಸ್ಕರ್‌ ಜಿ.ಬಿ. ಕೆಂಬಾರ್‌, ಹಿರಿಯ ನಾಟಿ ವೈದ್ಯೆ ಚಂದ್ರಾವತಿ ರಾಮ ಪಂಡಿತ್‌ ಬೆಳ್ಮಣ್‌, ಸಮಾಜ ಸೇವಾ ಕಾರ್ಯಕರ್ತ, ಹವ್ಯಾಸಿ ಯಕ್ಷಗಾನ ಕಲಾವಿದ, ಜ್ಯೋತಿಷಿ ಸುಬ್ರಾಯ ಬಲ್ಯಾಯ ಕಾವು ಅವರನ್ನು ಗೌರವಿಸಲಾಯಿತು.

ಅತಿಥಿಗಳಾಗಿ ಜ್ಯೋತಿಷಿ ಆನಂದ ಬಲ್ಯಾಯ ಎ. ಧರ್ಮತಡ್ಕ, ಶ್ರೀ ರಾಜರಾಜೇಶ್ವರಿ ಫೌಂಡೇಶನ್‌ನ ವಿಜಯ ಪ್ರಸಾದ್‌ ಆಳ್ವ, ರೋಶನಿ ನಿಲಯದ ಪ್ರೊ| ವಿನೀತಾ ಕೆ., ಎಸ್‌.ಆರ್‌.ಆರ್‌. ಮಸಾಲ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶೈಲೇಂದ್ರ ವೈ. ಸುವರ್ಣ ಭಾಗವಹಿಸಿ ಶುಭ ಕೋರಿದರು. ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್‌ ಡಿ. ಶೆಟ್ಟಿ, ಕಾರ್ಗಿಲ್ ಯೋಧ ಮೇಗಿನಮನೆ ಪ್ರವೀಣ್‌ ಶೆಟ್ಟಿ ಅವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು.

Advertisement

ಸಂಘದ ನಿರ್ದೇಶಕರು, ಪದಾಧಿ ಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಯುವ ವೇದಿಕೆ, ಮಹಿಳಾ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.

ಸಂಘದ ವಕ್ತಾರ ಸುರೇಶ್‌ ಕುಮಾರ್‌ ಮಾರಿಪಳ್ಳ ಪ್ರಸ್ತಾವನೆಗೈದರು. ಕಾರ್ಯ ದರ್ಶಿ ಜಯಪ್ರಕಾಶ್‌ ಪಂಡಿತ್‌ ಬಬ್ಬುಕಟ್ಟೆ ಸ್ವಾಗತಿಸಿ, ಮಲ್ಲಿಕಾ ಭಾನುಪ್ರಕಾಶ್‌ ನಿರ್ವಹಿಸಿದರು. ಜತೆ ಕಾರ್ಯದರ್ಶಿ ರಂಜನ್‌ ಬಲ್ಯಾಯ ವಂದಿಸಿ, ಯುವ ವೇದಿಕೆಯ ಗೋಪಾಲ್ ಕಲ್ಲಡ್ಕ ನಿರೂಪಿಸಿದರು. ಸ್ವಜಾತಿ ಬಾಂಧವರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next