Advertisement
ಸೆ. 9 ರಂದು ಬಿಲ್ಲವ ಸಮಾಜ ಸೇವಾ ಸಂಘ ಪುಣೆ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 164 ನೇ ಜಯಂತಿ ಆಚರಣೆ ಅಂಗವಾಗಿ, ಸೋಮವಾರ ಪೇಟೆಯ ನರ ಪತ್‌ಗಿರಿ ಚೌಕ್‌ನಲ್ಲಿರುವ ಸಂತ ಘಾಡೆY ಮಹಾರಾಜ್ ಪ್ರಾರ್ಥನಾಗೃಹದಲ್ಲಿ ನಡೆದ ಗುರುಪೂಜೆ ನಡೆದಿದ್ದು, ಆನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಜನ ಸಾಮಾನ್ಯರ ಉ¨ªಾರಕ್ಕಾಗಿ ಅವತಾರವೆತ್ತಿದ ಪೂಜ್ಯ ನಾರಾಯಣ ಗುರುಗಳ ತತ್ವಾದರ್ಶವನ್ನು ಪಾಲನೆ ಮಾಡುತ್ತ, ನಮ್ಮ ಹಿರಿಯರು ಸ್ಥಾಪನೆ ಮಾಡಿದ ಈ ಸಂಸ್ಥೆಯನ್ನು ಸಮಾಜ ಬಾಂಧವರ ಕಷ್ಟ ಸುಖಗಳಿಗೆ ಪೂರಕವಾಗಿ ಕಾರ್ಯವನ್ನು ಮಾಡುತ್ತಾ ಬೆಳೆಸಬೇಕಾದ ಕರ್ತವ್ಯ ನಮ್ಮ ಮೇಲಿದೆ. ಪುಣೆ ಬಿಲ್ಲವ ಸಂಘ ಎಂಬುವುದು ಒಂದು ಕುಟುಂಬವಿದ್ದಂತೆ. ಸಮಾಜ ಬಾಂಧವರು ಎಲ್ಲರೂ ನಮ್ಮ ಬಂಧುಗಳು. ನಮ್ಮ ಮನೆಯಂತಿರುವ ಈ ಸಂಘವನ್ನು ಮಾದರಿ ಸಂಘವಾಗಿ ಮಾಡುವ ಧ್ಯೇಯ ನಮ್ಮದಾಗಬೇಕು ಎಂದರು.
Related Articles
Advertisement
ಕಾರ್ಯಕ್ರಮದಲ್ಲಿ ನಗರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. ಕಾರ್ಯಕ್ರಮಕ್ಕೆ ಸಮಾಜದ ಪ್ರಮುಖರಾದ ಸಂಘದ ಮಾಜಿ ಅಧ್ಯಕ್ಷರುಗಳಾದ ಸದಾಶಿವ ಸಾಲ್ಯಾನ್, ಸದಾನಂದ ಪೂಜಾರಿ, ಪೂಜಾ ಸಮಿತಿಯ ಕಾರ್ಯದರ್ಶಿ ಗಿರೀಶ್ ಪೂಜಾರಿ, ಶಿವರಾಂ ಪೂಜಾರಿ, ಶಂಕರ್ ಪೂಜಾರಿ, ಉತ್ತಂ ಪಣಿಯಾಡಿ, ಎಸ್. ಕೆ. ಪೂಜಾರಿ, ವಾಸುದೇವ ಪೂಜಾರಿ, ಜಯ ಟಿ. ಪೂಜಾರಿ, ವಸಂತ್ ಪೂಜಾರಿ, ವಿಶ್ವನಾಥ್ ಟಿ. ಪೂಜಾರಿ, ರಾಘು ಪೂಜಾರಿ, ಲೋಹಿತ್ ಪೂಜಾರಿ, ಶಿವರಾಂ ಪೂಜಾರಿ, ಪ್ರಿಯಾ ಪಣಿಯಾಡಿ, ರೇವತಿ ಪೂಜಾರಿ, ಉಮಾ ಕೆ. ಪೂಜಾರಿ, ವನಿತಾ ಎಸ್. ಕರ್ಕೇರ, ಲಲಿತಾ ಪೂಜಾರಿ ಅವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ವಿಶ್ವನಾಥ ಪೂಜಾರಿ ಕಡ್ತಲ ಅವರು ಸಭಾಗೃಹದ ಮೇಲ್ವಿಚಾರಣೆಯಲ್ಲಿ ಸಹಕರಿಸಿದರು.
ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿ ಗುರು ಕೃಪೆಗೆ ಪಾತ್ರರಾದರು. ಪ್ರಸಾದ ವಿತರಣೆಯ ಆನಂತರ ಸದಾಶಿವ ಸಾಲ್ಯಾನ್ ಮತ್ತು ಶಂಕರ ಪೂಜಾರಿ ದುರ್ಗಾ ಅವರ ಸೇವಾರ್ಥಕವಾಗಿ ಅನ್ನ ಸಂತರ್ಪಣೆ ಜರಗಿತು. ಸಂಘದ ಜೊತೆ ಕಾರ್ಯದರ್ಶಿ ಸುಂದರ ಕರ್ಕೇರ ಅವರು ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಪೂಜಾರಿ ವಂದಿಸಿದರು. ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳ ಯಾದಿಯನ್ನು ರೇವತಿ ಪೂಜಾರಿ ಅವರು ಓದಿದರು.
ಸಮಷ್ಟಿಯಲ್ಲಿ ಜನರು ಅಜ್ಞಾನದತ್ತ ಮುಖ ಮಾಡಿದಾಗ ವೇದಶಾಶ÷, ಪುರಾಣಗಳಿಂದ ಸಿಗದ ಜ್ಞಾನವನ್ನು ಸರಳ ಶೈಲಿಯಲ್ಲಿ ಜನ ಮಾನಸಕ್ಕೆ ದಾರೆಯೆರೆದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅಧ್ಯಾತ್ಮದ ತತ್ವಗಳೆಲ್ಲವನ್ನು ಸರಳ ರೀತಿಯಲ್ಲಿ ಬೋಧನೆ ಮಾಡಿ ಹಿಂದುಳಿದ ವರ್ಗಕ್ಕೆ ಚೈತನ್ಯದ ಸಂದೇಶ ನೀಡಿ ಸಮಾಜದಲ್ಲಿ ಸಮಾನತೆಯನ್ನು ಸಾರಿದವರು. ನಾರಾಯಣ ಗುರುಗಳು ಒಂದೇ ಜಾತಿಗೆ ಸೀಮಿತವಾದವರಲ್ಲ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಸಾರಿ ವಿಶ್ವ ಗುರುವಾದವರು ಅವರು. ಬ್ರಾಹ್ಮಣ ಜಾತಿವಾದುದಲ್ಲ ಅದೊಂದು ಗುಣ ಸ್ವಭಾವ. ಅದು ಪ್ರಕಟವಾಗಬೇಕಾದರೆ ವಿದ್ಯೆ ಬೇಕು. ಇದನ್ನೇ ಆಧಾರವಾಗಿ ಬ್ರಹ್ಮಶ್ರೀಗಳು ವಿದ್ಯೆಯಿಂದ ಸಂಘಟಿತರಾಗಿ ಎಂದು ಬೋಧಿಸಿ ಸಂಘಟಿತರಾಗಲು ಕರೆಕೊಟ್ಟವರು. ಸಂಘಟನೆಯಿಂದ ಯಾವ ಕೆಲಸವನ್ನು ಮಾಡಬಹುದು ಎಂದು ಜಗಕ್ಕೆ ತೋರಿಸಿ ಕೊಟ್ಟವರು ನಾರಾಯಣ ಗುರುಗಳು.ಕೊಳ್ತಿಗೆ ನಾರಾಯಣ ಗೌಡ,
ಪ್ರವಚನಕಾರರು, ಯಕ್ಷಗಾನ ಕಲಾವಿದರು ಚಿತ್ರ-ವರದಿ : ಹರೀಶ್ ಮೂಡಬಿದ್ರೆ ಪುಣೆ