Advertisement

ಪುಣೆ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ವಾರ್ಷಿಕ ಮಹಾಸಭೆ,ಸ್ನೇಹ ಮಿಲನ

04:16 PM Aug 23, 2018 | Team Udayavani |

ಪುಣೆ: ನಮ್ಮ ಹುಟ್ಟು ಎಲ್ಲಿಯೇ ಆದರೂ ನಾವು ಬೆಳೆದು, ಕಾರ್ಯಗೈಯುತ್ತಿರುವ ಸ್ಥಳ ನಮಗೆ ಅನ್ನ ನಿಡುವ ಕರ್ಮಭೂಮಿಯು ಕೂಡ ನಮ್ಮ ಮಾತೃ ಭೂಮಿಗೆ ಸಮಾನ. ಅಂತಹ ಪ್ರದೇಶದಲ್ಲಿ ನಾವಿರುವಲ್ಲಿ ನಮ್ಮ ಸಮಾಜದವರನ್ನು ಒಂದುಗೂಡಿಸಿ ನಮಗೊಂದು ಮಾತೃ ಸಂಸ್ಥೆಯಾಗಿ ಸಂಘವನ್ನು ಕಟ್ಟುತ್ತೇವೆ. ಅ ಮೂಲಕ ನಮ್ಮ ಸಮಾಜದ ಎಲ್ಲರನ್ನು ಒಂದೇ ವೇದಿಕೆಯ ಅಡಿಯಲ್ಲಿ ಸೇರಿಸಿಕೊಂಡು  ತಮ್ಮ ಕಷ್ಟ-ಸುಖಗಳ ಬಗ್ಗೆ ಚರ್ಚಿಸುವ  ಸದಾವಕಾಶವನ್ನು ಇಂತಹ  ಸಂಘಗಳು ಮಾಡುತ್ತಿವೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರದ ಸಾಂಸ್ಕೃತಿಕ ನಗರ  ಪುಣೆಯಂತಹ ನಗರದಲ್ಲಿ  ರಾಜಪುರ ಸಾರಸ್ವತ  ಬ್ರಾಹ್ಮಣ ಸಂಘವನ್ನು 25 ವರ್ಷಗಳ ಹಿಂದೆ ಸ್ಥಾಪಿಸಿ  ಸಮಾಜಪರ ಕಾರ್ಯಗಳನ್ನು ಮಾಡುವಲ್ಲಿ ಪಣತೊಟ್ಟಿದೆ ಇದು ಶ್ಲಾಘನೀಯ. ಇಲ್ಲಿ ನೆಲೆಸಿರುವ ಸಮಾಜ ಬಾಂಧವರು  ಜೊತೆಗೂಡಿ ಸಂಘದ  ಬೆಳವಣಿಗೆಯಲ್ಲಿ ಪಾಲುದಾರಗಬೇಕು. ಉಳ್ಳವರು ಬಡ ಬಾಂಧವರ ಸಹಾಯಕ್ಕೆ ನಿಂತು ಅವರನ್ನು ಮೇಲೆತ್ತುವ ಕಾರ್ಯವನ್ನು ಮಾಡಬೇಕು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ  ಸಹಕಾರ ನೀಡಬೇಕು. ಸಂಘದ  ಅಭಿವೃದ್ಧಿ ಸಮಾಜದ ಭಾಂದವರ ಕೈಯಲ್ಲಿದ್ದು, ಆಗ ಮಾತ್ರ ಬೆಳವಣಿಗೆ ಕಾಣಲು ಸಾಧ್ಯ ಎಂದು ಡಹಾಣು ರಾಜಪುರ ಸಾರಸ್ವತ ಸಂಘದ ಅಧ್ಯಕ್ಷ ಪ್ರಸಾದ್‌ ನಾಯಕ್‌ ನುಡಿದರು.

Advertisement

ಪುಣೆ ರಾಜಪುರ ಸಾರಸ್ವತ ಬ್ರಾಹ್ಮಣ ಸಂಘ  ಇದರ 25 ನೇ ವಾರ್ಷಿಕ  ಮಹಾಸಭೆ ಮತ್ತು ಸ್ನೇಹಮಿಲನ ಕಾರ್ಯಕ್ರಮವು ಆ.  15 ರಂದು  ಕಡಿRಯ ಕಾರ್ಗಿಲ್‌  ಹಾಲ್‌ನಲ್ಲಿ  ಸಂಘದ ಅಧ್ಯಕ್ಷ ಮಾಳ ಸದಾನಂದ  ನಾಯಕ್‌ ಅವರ ಅಧ್ಯಕ್ಷತೆಯಲ್ಲಿ  ನಡೆದಿದ್ದು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು ಸಂಘಕ್ಕೆ ಶುಭಹಾರೈಸಿದರು. ಅತಿಥಿಗಳಾಗಿ ಚಿತ್ರಕಾರ ವಿಲಾಶ್‌ ನಾಯಕ್‌, ಸಂಘದ ಮಾಜಿ ಅಧ್ಯಕ್ಷ ಗುಂಡು ನಾಯಕ್‌, ಶ್ರೀಧರ ನಾಯಕ್‌, ಸಂಘದ ಪ್ರಮುಖರಾದ ವಿನೋದಾ ನಾಯಕ್‌, ಸಹನಾ ನಾಯಕ್‌, ಪ್ರತಿಮಾ ನಾಯಕ್‌ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷರು, ಅತಿಥಿ-ಗಣ್ಯರು ದೀಪಬೆಳಗಿಸಿ ಮಹಾಸಭೆಯನ್ನು  ಉದ್ಘಾಟಿಸಿದರು. ಕಾರ್ಯದರ್ಶಿ  ಸುದರ್ಶನ್‌ ಬಿ. ವಿ. ವಾರ್ಷಿಕ ವರದಿಯನ್ನು  ಸಭೆ ಯಲ್ಲಿ ಮಂಡಿಸಿದರು. ಯೋಗೇಶ್‌ ನಾಯಕ್‌ ಅವ ರು ಸಂಘದ 2017-2018 ವಾರ್ಷಿಕ ಲೆಕ್ಕಪತ್ರ ವನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು.

ಕಾರ್ಯಕ್ರಮದ ಮೊದಲಿಗೆ ಸತ್ಯನಾರಾಯಣ ಪೂಜೆ ಜರಗಿತು. ಮಕ್ಕಳಿಗೆ ಸ್ವಾತಂತ್ರÂ ದಿನದ ವಿಷಯದ ಬಗ್ಗೆ  ಸ್ಥಳದÇÉೆಯೇ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು. ಈ ಸಂದರ್ಭದಲ್ಲಿ ವಿಲಾಸ್‌ ನಾಯಕ್‌ ಅವರು  ಉಪಸ್ಥಿತರಿದ್ದು, ಸಲಹೆ-ಸೂಚನೆಗಳನ್ನು ನೀಡಿದರು. ಮಕ್ಕಳಿಗೆ ಫ್ಯಾನ್ಸಿ ಡ್ರೆಸ್‌ ಸ್ಪರ್ಧೆ ಮತ್ತು ಸಮಾಜದ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ  ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ಚಿತ್ರಕಾರ ವಿಲಾಸ್‌ ನಾಯಕ್‌ ಅವರು ಸ್ಥಳದಲ್ಲಿಯೇ ಎರಡು ಚಿತ್ರಗಳನ್ನು ವೇಗವಾಗಿ ಬಿಡಿಸಿ ಸಭಿಕರಿಂದ  ಮೆಚ್ಚುಗೆ ಪಡೆದರು.  ಅತಿಥಿ ಗಣ್ಯರನ್ನು ಸಂಘದ ಅಧ್ಯಕ್ಷರು  ಸ್ಮರಣಿಕೆ ನೀಡಿ ಸಮ್ಮಾನಿಸಿದರು. ಅಲ್ಲದೆ ಕಳೆದ 25 ವರ್ಷಗಳಿಂದ ಸಂಘದ ಅಭಿವೃದ್ದಿಗೆ ಸಹಕರಿಸಿದ ಮಾಜಿ ಅಧ್ಯಕ್ಷರುಗಳು, ಗಣ್ಯರನ್ನು ಸತ್ಕರಿಸಲಾಯುತು.

ಸಭೆಯಲ್ಲಿ ಪ್ರಮುಖ  ಗಣ್ಯರಾದ ಆನಂದ ಪ್ರಭು, ಅರ್‌. ಎ. ನಾಯಕ್‌, ಶಿವರಾಂ ಪ್ರಭು, ದೇವದಾಸ್‌ ನಾಯಕ್‌, ದಿನೇಶ್‌ ನಾಯಕ್‌, ರಮೇಶ್‌ ಪ್ರಭು, ಗಣೇಶ್‌ ಪ್ರಭು, ಸುರೇಶ್‌  ವಿ. ನಾಯಕ್‌ ಹಾಗೂ ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು ಉಪಸ್ಥಿತರಿದ್ದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಯೋಗೇಶ್‌ ನಾಯಕ್‌ ಸ್ವಾಗತಿಸಿದರು. ಶ್ರೀಧರ್‌ ನಾಯಕ್‌ ಅವರು ವಂದಿಸಿದರು.

ಪುಣೆ ರಾಜಪುರ ಬ್ರಾಹ್ಮಣ  ಸಾರಸ್ವತ  ಸಂಘವು ಇದೀಗ ಬೆಳ್ಳಿ ಮಹೋತ್ಸ ವದ ಹೊಸ್ತಿಲಲ್ಲಿದ್ದು  25 ವರ್ಷಗಳಿಂದ ನಮ್ಮ ಸಮಾಜದ  ಏಳಿಗೆಗಾಗಿ, ಮಾಜಿ ಅಧ್ಯಕ್ಷರುಗಳು ಗಣ್ಯರು ಸಮಾಜ ಬಾಂದವರು ಶ್ರಮಿಸಿ¨ªಾರೆ. ಅವರೆಲ್ಲರಿಗೂ  ಧನ್ಯವಾದಗಳು. ನಮ್ಮ ಸಮಾಜದ ಜನ ಸಾಮಾನ್ಯರ  ಕಷ್ಟಗಳಿಗೆ ಆಗುವಂಥ ಕಾರ್ಯ ಗಳನ್ನು ಮಾಡುವಲ್ಲಿ ಸಹಕಾರ ನಿಡುವ  ಮೂಲಕ, ನಾವು ಪುಣೆಯಲ್ಲಿ ನೆಲೆಸಿರುವ ಸರ್ವ ರಾಜಪುರ ಸಾ ರಸ್ವತ ಸಮಾಜ ಬಾಂದವರು  ಜತೆಗೂಡಿ ಸಂಘದ  ಬೆಳವಣಿಗೆಯಲ್ಲಿ ಪಾಲುದಾರರಾಗಬೇಕು.
-ಸದಾನಂದ ನಾಯಕ್‌, ಅಧ್ಯಕ್ಷರು,ಪುಣೆ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ

Advertisement

ನಮ್ಮ ಯುವ ಜನತೆ ಜವಾಬ್ದಾರಿಯುತವಾಗಿ ನಮಗೆ ಹೊಂದಿಕೆಯಾಗುವ,  ವಿಶ್ವಾಸನೀಯವಾದ  ಕಾರ್ಯ ಕ್ಷೇತ್ರದಲ್ಲಿ ಧೈರ್ಯದಿಂದ ತೊಡಗಿಸಿಕೊಂಡಾಗ ಯಶಸ್ಸು ಖಂಡಿತವಾಗಿ ಲಭಿಸುತ್ತದೆ. ನಮ್ಮ ಯಶಸ್ಸಿನ ಹಿಂದೆ ನಮ್ಮ ಮಾರ್ಗದರ್ಶಕರ ಕಾರ್ಯವು ಪ್ರಮುಖ. ಇದರಿಂದ ನಾವು ಎಳೆಯಪ್ರಾಯದÇÉೇ ನಮ್ಮ  ಆಯ್ಕೆಯ ಕ್ಷೇತ್ರದಲ್ಲಿ ಗುರಿ, ವಿಶ್ವಾಸವನ್ನು ಹೊಂದಬೇಕು.
ವಿಲಾಸ್‌ ನಾಯಕ್‌  
ಏಷ್ಯಾದ ವೇಗದ ಚಿತ್ರಕಾರ  ಪ್ರಶಸ್ತಿ ಪುರಸ್ಕೃತರು   

ಚಿತ್ರ-ವರದಿ : ಹರೀಶ್‌ ಮೂಡಬಿದ್ರೆ

Advertisement

Udayavani is now on Telegram. Click here to join our channel and stay updated with the latest news.

Next