Advertisement
ಸೆ. 30ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜರಗಿದ ಬಂಟರ ಸಂಘ ಮುಂಬಯಿ ಸಂಚಾಲಿತ ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ 33ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನದ ಪ್ರಸ್ತುತ ದಿನಗಳಲ್ಲಿ ಬ್ಯಾಂಕ್‌ನ ವ್ಯವಹಾರಗಳು ಪ್ರತಿಯೊಬ್ಬರು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಕುಳಿತು ನಿರ್ವಹಿಸುವಂತಾಗಿದೆ. ಮಾತೃಭೂಮಿ ಕೋ-ಆಪರೇಟಿವ್ ಸೊಸೈಟಿ ಆಧುನಿಕ ತಂತ್ರಜ್ಞಾನದೊಂದಿಗೆ ಗ್ರಾಹಕರಿಗೆ ಎಲ್ಲ ರೀತಿಯ ಸೌಲಭ್ಯ ನೀಡುತ್ತಿದೆ. ಹೊಟೇಲ್ ಉದ್ಯಮ ಸಹಿತ ಉದ್ಯಮ ರಂಗದ ಬೆಳವಣಿಗೆಯಲ್ಲಿ ಮತೃಭೂಮಿ ಉತ್ತಮವಾದ ಕೊಡುಗೆ ನೀಡುತ್ತಾ ಬಂದಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಿದ ಸಂತೃಪ್ತಿ ನಮಗಿದೆ ಎಂದು ತಿಳಿಸಿ ಗ್ರಾಹಕರಿಗೆ ಶೇ. 11ರಷ್ಟು ಡಿವಿಡೆಂಟ್ ಘೋಷಿಸಿದರು. ಸೊಸೈಟಿಯನ್ನು ಮತ್ತಷ್ಟು ಬಲಪಡಿಸುವಲ್ಲಿ ನಾವೆಲ್ಲರು ಒಂದಾಗಿ ಮುನ್ನಡೆಯೋಣ. ಗ್ರಾಹಕರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ತಿಳಿಸಿ ಸಿಬಂದಿ ಸೇವೆಯನ್ನು ಅಭಿನಂದಿಸಿದರು.
Related Articles
Advertisement
ಸೊಸೈಟಿಯ ಅಭಿವೃದ್ಧಿಯಲ್ಲಿ ಸಹಕರಿಸುತ್ತಿರುವ ವಿವಿಧ ಶಾಖೆಗಳ ಸಿಬಂದಿಯನ್ನು ಅಭಿನಂದಿಸಿ ಗೌರವಿಸಲಾಯಿತು. ಉಪಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ ವಂದಿಸಿದರು.
ಸೊಸೈಟಿಯ ಆರ್ಥಿಕ ಸಾಧನೆ:
2021ರ ಮಾ. 31ರ ವರೆಗಿನ ಆರ್ಥಿಕ ಸೂಕ್ಷ್ಮಾವಲೋಕನದಂತೆ ಮಾತೃಭೂಮಿಯ ಶೇರು ಬಂಡವಾಳ 2,370.32 ಲಕ್ಷ ರೂ. ಗಳಿಗೆ ಏರಿಕೆಯಾಗಿದ್ದು, ಒಟ್ಟು ಸಂಗ್ರಹ 2,340.16 ಲಕ್ಷ ರೂ., ಒಟ್ಟು ಠೇವಣಿ 8,020.34 ಲಕ್ಷ ರೂ. ಗಳಿಗೆ ಏರಿಕೆಯಾಗಿದೆ. ಒಟ್ಟು ಮುಂಗಡ ಮೊತ್ತ 9,791.20 ಲಕ್ಷ ರೂ., ವರ್ಕಿಂಗ್ ಕ್ಯಾಪಿಟಲ್ 13,565.86 ಲಕ್ಷ ರೂ., ನಿವ್ವಳ ಲಾಭ 324.31 ಲಕ್ಷ ರೂ. ಗಳಿಗೆ ವೃದ್ಧಿಯಾಗಿದೆ. 105.09 ಲಕ್ಷ ರೂ. ಎನ್‌ಪಿಎ ಮೀಸಲಿಟ್ಟು ವಿಶೇಷ ಸಾಧನೆಗೈದಿದೆ.
ಕಾರ್ಯವ್ಯಾಪ್ತಿ ವಿಸ್ತರಣೆ:
ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ಮುಂಬಯಿ ಮಹಾನಗರ ಹಾಗೂ ಉಪನಗರಗಳಾದ ಸಾಕಿನಾಕಾ, ಥಾಣೆ, ನಲಸೋಪರ, ಖಾರ್ಘರ್, ಕಲ್ಯಾಣ್, ಪುಣೆ, ನಾಸಿಕ್, ರಾಯಗಢ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಈ ಎಲ್ಲ ಶಾಖೆಗಳಿಗೆ ಮಾತೃಭೂಯಿ ಆಡಳಿತವು ಈಗಾಗಲೇ ಸ್ವತಂತ್ರ ಅಧಿಕಾರವನ್ನು ನೀಡಿರುವುದಲ್ಲದೆ, ಯಾವುದೇ ಬ್ಯಾಂಕ್ ಗ್ರಾಹಕರಿಗೆ ನೀಡುವ ಸೇವೆಗೆ ಅನುಗುಣವಾಗಿ ಸಂಪೂರ್ಣ ಸೇವೆ ಒದಗಿಸಲು ಶಾಖೆಗಳಿಗೆ ಸ್ವಾಯತ್ತತೆ ಕಲ್ಪಿಸಿಕೊಡಲಾಗಿದೆ.
ಕಳೆದ ಒಂದೂವರೆ ವರ್ಷದಿಂದ ಉದ್ದಿಮೆ ರಂಗದಲ್ಲಿ ಅದರಲ್ಲೂ ಹೊಟೇಲ್ ಉದ್ಯಮದಲ್ಲಿ ತುಳು-ಕನ್ನಡಿಗರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲೂ ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯ ಚಟುವಟಿಕೆಗಳು ಉತ್ತಮವಾಗಿತ್ತು. ಅವರು ಗ್ರಾಹಕರಿಗೆ ನೀಡಿದ ಸೇವೆಯೊಂದಿಗೆ ಸಂಸ್ಥೆಗೂ ಉತ್ತಮ ಲಾಭಾಂಶ ತಂದಿದ್ದಾರೆ. ಇದಕ್ಕಾಗಿ ನಾನು ಆಡಳಿತ ಮಂಡಳಿ ಹಾಗೂ ಸಿಬಂದಿಯನ್ನು ಅಭಿನಂದಿಸುತ್ತೇನೆ. ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಎಲ್ಲ ಸೌಲಭ್ಯಗಳು ಸಮಾಜ ಬಾಂಧವರ ಮನೆ-ಮನಗಳಿಗೆ ತಲುಪಿಸುವಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಮೂಲಕ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸೋಣ.-ಚಂದ್ರಹಾಸ್ ಕೆ. ಶೆಟ್ಟಿ, ಅಧ್ಯಕ್ಷರು, ಬಂಟರ ಸಂಘ ಮುಂಬಯಿ
-ಚಿತ್ರ-ವರದಿ: ಸುಭಾಷ್ ಶಿರಿಯ