ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ವಾರ್ಷಿಕ ವೇತನದ ಗುತ್ತಿಗೆಯನ್ನು ಬಿಸಿಸಿಐ ಬುಧವಾರ ಪ್ರಕಟಿಸಿದೆ. ಮೂವರು ಆಟಗಾರರು ಮಾತ್ರ ಎ ಗ್ರೇಡ್ ಪಡೆದಿದ್ದಾರೆ. ಅವರೆಂದರೆ ಚುಟುಕು ಮಾದರಿ ನಾಯಕಿ ಹರ್ಮನ್ ಪ್ರೀತ್ ಕೌರ್, ಉಪ ನಾಯಕಿ ಸ್ಮೃತಿ ಮಂಧನಾ ಮತ್ತು ಪೂನಂ ಯಾದವ್.
19 ಆಟಗಾರರನ್ನು ಈ ಗುತ್ತಿಗೆಯಲ್ಲಿ ಬಿಸಿಸಿಐ ಸೇರಿಸಿಕೊಂಡಿದೆ. ಏಕದಿನ ಮತ್ತು ಟೆಸ್ಟ್ ನಾಯಕಿ ಮಿಥಾಲಿ ರಾಜ್ ಹಾಗೂ ಅನುಭವಿ ಬೌಲರ್ ಜೂಲನ್ ಗೋ ಸ್ವಾಮಿಗೆ ಬಿ ಗ್ರೇಡ್ ಗೆ ಸೇರಿಸಿಕೊಳ್ಳಲಾಗಿದೆ. ನೂತನ ಬ್ಯಾಟಿಂಗ್ ಸೆನ್ಸೇಶನ್ ಶಫಾಲಿ ವರ್ಮಾ ಸಿ ಗ್ರೇಡ್ ನಿಂದ ಬಿ ಗ್ರೇಡ್ ಗೆ ಸೇರ್ಪಡೆಯಾಗಿದ್ದಾರೆ.
ಎ ಗ್ರೇಡ್ ಆಟಗಾರರು 50 ಲಕ್ಷ ರೂ. ಪಡೆದರೆ, ಬಿ ಗ್ರೇಡ್ ಗೆ 30 ಲಕ್ಷ ಮತ್ತು ಸಿ ಗ್ರೇಡ್ ಗೆ 10 ಲಕ್ಷ ವೇತನ ಪಡೆಯಲಿದ್ದಾರೆ.
ಬಿ ಗ್ರೇಡ್: ಮಿಥಾಲಿ ರಾಜ್, ಜುಲಾನ್ ಗೋಸ್ವಾಮಿ, ದೀಪ್ತಿ ಶರ್ಮಾ, ಪುನಂ ರಾವತ್, ರಾಜೇಶ್ವರಿ ಗಾಯಕ್ವಾಡ್, ಶಫಾಲಿ ವರ್ಮಾ, ರಾಧಾ ಯಾದವ್, ಶಿಖಾ ಪಾಂಡೆ, ತಾನಿಯಾ ಭಾಟಿಯಾ, ಮತ್ತು ಜೆಮಿಮಾ ರೊಡ್ರಿಗಸ್
ಸಿ ಗ್ರೇಡ್: ಮಾನ್ಸಿ ಜೋಶಿ, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಕರ್, ಹರ್ಲೀನ್ ಡಿಯೋಲ್, ಪ್ರಿಯಾ ಪುನಿಯಾ, ಮತ್ತು ರಿಚಾ ಘೋಷ್