Advertisement

ನ್ಯಾ.ಕರ್ಣನ್‌ ವಿರುದ್ಧದ ಪೂರ್ಣ ತೀರ್ಪು ಪ್ರಕಟ

03:45 AM Jul 06, 2017 | Harsha Rao |

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೋಲ್ಕತಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಿ.ಎಸ್‌.ಕರ್ಣನ್‌ಗೆ ವಿಧಿಸಲಾಗಿರುವ 6 ತಿಂಗಳ ಜೈಲು ಶಿಕ್ಷೆ ಕುರಿತ ತೀರ್ಪಿನ ಪೂರ್ಣ ಆದೇಶವನ್ನೀಗ ಸುಪ್ರೀಂಕೋರ್ಟ್‌ ನೀಡಿದೆ. 

Advertisement

ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಮೊದಲ ಬಾರಿಗೆ ಕಾರ್ಯನಿರತ ನ್ಯಾಯಾಧೀಶರೊಬ್ಬರ ವಿರುದ್ಧ ಶಿಕ್ಷೆ ವಿಧಿಸಬೇಕಾ ದ್ದನ್ನು ನ್ಯಾಯಪೀಠ “ದುರದೃಷ್ಟ’ಕರ ಎಂದು ಬಣ್ಣಿಸಿದೆ. 

ನ್ಯಾ.ಕರ್ಣನ್‌ ಅನಪೇಕ್ಷಿತ ಮತ್ತು ಕೆಟ್ಟ ವರ್ತನೆಯನ್ನು ಪ್ರದರ್ಶಿಸಿದ್ದು, ನ್ಯಾಯಾಂಗ ವ್ಯವಸ್ಥೆಯನ್ನು ಗೇಲಿಮಾಡುವಂತೆ ಮಾಡಿದವು. ಆದ್ದರಿಂದ ಅವರಿಗೆ ಶಿಕ್ಷೆ ವಿಧಿಸಬೇಕಾಯಿತು ಎಂದು ಹೇಳಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೇಹರ್‌ ಅವರ ನೇತೃತ್ವದಲ್ಲಿ, ಒಟ್ಟು 7 ಮಂದಿ ನ್ಯಾಯಮೂರ್ತಿಗಳ  ಸಾಂವಿಧಾನಿಕ ಪೀಠ ಕರ್ಣನ್‌ ಪ್ರಕರಣದ ವಿಚಾರಣೆ ನಡೆಸಿದ್ದು, ಈ ಕುರಿತ ಸಂಪೂರ್ಣ ತೀರ್ಪನ್ನು ಸಹಿ ಸಮೇತ ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ಗೆ ಅಪ್ಲೋಡ್‌ ಮಾಡಲಾಗಿದೆ. ಮೇ 9ರಂದು ಕಿರು ತೀರ್ಪು ಪ್ರಕಟಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next