Advertisement

70 ವರ್ಷ ದಾಟಿದ ಮರಗಳಿಗೂ ಪಿಂಚಣಿ ಘೋಷಣೆ !

12:51 AM Oct 08, 2023 | Team Udayavani |

ಚಂಡೀಗಢ: ಹರಿಯಾಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹುಲ್ಲು ಗಾವಲು ಸುಡುವ ಪ್ರಕರಣ ಹೆಚ್ಚುತ್ತಿದ್ದು, ಇದರಿಂದ ವಾಯು ಮಾಲಿನ್ಯವೂ ಅಧಿಕವಾಗಿರುವ ಹಿನ್ನೆಲೆಯಲ್ಲಿ ಮರಗಳನ್ನು ರಕ್ಷಿಸುವ ಮೂಲಕ ಸಮಸ್ಯೆ ಬಗೆಹರಿಸಲು ಸರಕಾರ ಮುಂ ದಾಗಿದೆ. ಇದಕ್ಕಾಗಿ 70 ವರ್ಷ ಮೇಲ್ಪಟ್ಟ ಮರಗಳನ್ನು ಪೋಷಿ ಸುವವರಿಗೆ 2,750 ರೂ.ಗಳ ಪಿಂಚಣಿ ಯನ್ನು ಘೋಷಿಸಿದೆ.

Advertisement

ಹೌದು, ಪ್ರಾಣವಾಯು ದೇವತಾ ಪಿಂಚಣಿ ಯೋಜನೆಯನ್ನು ನವೆಂ ಬರ್‌ 1ರಿಂದ ಆರಂಭಿಸುವುದಾಗಿ ರಾಜ್ಯ ಪರಿಸರ ಮತ್ತು ಅರಣ್ಯ ಸಚಿವ ಕನ್ವರ್‌ಪಾಲ್‌ ಗುರ್ಜರ್‌ ತಿಳಿಸಿದ್ದಾರೆ. ರಾಜ್ಯದಲ್ಲಿ 70 ವರ್ಷ ದಾಟಿದ 4 ಸಾವಿರ ಮರಗಳನ್ನು ಈಗಾಗಲೇ ಗುರುತಿಸಲಾಗಿದೆ. ಅಂಥ ಮರಗಳನ್ನು ಪೋಷಿಸುವವರಿಗೆ ವಾರ್ಷಿಕವಾಗಿ 2,750 ರೂ. ಪಿಂಚಣಿ ನೀಡಲಾಗುತ್ತದೆ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಈ ಉಪಕ್ರಮ ಆರಂಭಿಸಲಾಗುತ್ತಿದ್ದು, ದೇಶದಲ್ಲಿ ಇಂಥ ಪಿಂಚಣಿ ಯೋಜನೆ ಜಾರಿಗೆ ತರುತ್ತಿರುವ ಮೊದಲ ರಾಜ್ಯವೆಂಬ ಖ್ಯಾತಿಯೂ ಹರಿಯಾಣಕ್ಕೆ ಸೇರಲಿದೆ. ಯಾವುದೇ ನಿವಾಸಿಗಳ ಮನೆಯ ವ್ಯಾಪ್ತಿಯಲ್ಲಿ 70 ವರ್ಷ ದಾಟಿದ ಮರವಿದ್ದರೆ ಅದರ ಪಿಂಚಣಿ ಅವರಿಗೆ, ಹೊಲದಲ್ಲಿದ್ದರೆ ಆ ಹೊಲದ ರೈತರನಿಗೆ, ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿದ್ದರೆ ಅರಣ್ಯ ಇಲಾಖೆಯೂ ಫ‌ಲಾನುಭವಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next