Advertisement

ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟ

07:42 AM Dec 15, 2018 | |

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಹಿರಿಯ ರಂಗಕರ್ಮಿ  ಬಿ.ವಿ.ಕಾರಂತರ ಜತೆಗೂಡಿ ಮೈಸೂರು ರಂಗಾಯಣವನ್ನು ಕಟ್ಟಲು ಶ್ರಮಿಸಿದ ರಂಗಭೂಮಿಯ ಹಿರಿಯ ನಿರ್ದೇಶಕ ಪಿ.ಗಂಗಾಧರಸ್ವಾಮಿ ಅವರು ಅಕಾಡೆಮಿ ನೀಡುವ ಜೀವಮಾನ ಸಾಧನೆ ಗೌರವಕ್ಕೆ ಭಾಜನರಾಗಿದ್ದಾರೆ. ಹವ್ಯಾಸಿ ರಂಗಭೂಮಿ ಕ್ಷೇತ್ರದಲ್ಲಿ ಛಾಪುಮೂಡಿಸಿರುವ ಉಡುಪಿಯ ಹಿರಿಯ ರಂಗಸಾಧಕ ಟಿ.ಪ್ರಭಾಕರ್‌ ಕಲ್ಯಾಣಿ, ದಕ್ಷಿಣ ಕನ್ನಡ ಜಿಲ್ಲೆಯ ಹವ್ಯಾಸಿ ರಂಗನಿರ್ದೇಶಕಿ ಮತ್ತು ನಟಿ ಉಷಾ ಭಂಡಾರಿ ಸೇರಿ 24 ಮಂದಿ ರಂಗಸಾಧಕರು ಅಕಾಡೆಮಿಯ ವಾರ್ಷಿಕ ರಂಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Advertisement

ಕನ್ನಡ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್‌ ಪ್ರಶಸ್ತಿ ಸಾಧಕರ ಹೆಸರನ್ನು
ಪ್ರಕಟಿಸಿದರು. ಹಾಸ್ಯ ಕಲಾವಿದ ಕೆ.ಹಿರಣ್ಣಯ್ಯ ದತ್ತಿ ಪ್ರಶಸ್ತಿಗೆ ಹಾಸನದ ಹವ್ಯಾಸಿ ರಂಗಭೂಮಿ ಕಲಾವಿದ ನಿಕೋಲಸ್‌, ನಟರತ್ನ ಚಿಂದೋಡಿ ವೀರಪ್ಪ ನವರ ದತ್ತಿ ಪುರಸ್ಕಾರಕ್ಕೆ ಶಿವಮೊಗ್ಗದ ವೃತ್ತ ರಂಗಭೂಮಿ ನಟ ಮೃತ್ಯುಂಜಯಸ್ವಾಮಿ ಹಿರೇಮs…, ಪದ್ಮಶ್ರೀ ಚಿಂದೋಡಿ ಲೀಲಾ ಠ್ದತ್ತಿ ಪ್ರಶಸ್ತಿಗೆ ಧಾರವಾಡದ ವೃತ್ತಿರಂಗಭೂಮಿ ನಿರ್ದೇಶಕ ಎಂ.ಎಸ್‌. ಮಾಳವಾಡ ಹಾಗೂ ಕೆ.ರಾಮಚಂದ್ರಯ್ಯ ದತ್ತಿ ಪುರಸ್ಕಾರಕ್ಕೆ ರಾಮ ನಗರದ ಹವ್ಯಾಸಿ ರಂಗಭೂಮಿ ನಟ ನ.ಲಿ.ನಾಗರಾಜ್‌ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ಜೀವಮಾನ ಸಾಧನೆ ಪ್ರಶಸ್ತಿ 50 ಸಾವಿರ ರೂ.ನಗದು ಮತ್ತು ಫ‌ಲಕ, ವಾರ್ಷಿಕ ಪ್ರಶಸ್ತಿ 25 ಸಾವಿರ ರೂ.ನಗದು ಮತ್ತು ಫ‌ಲಕ
ಹಾಗೂ ದತ್ತಿ ಪ್ರಶಸ್ತಿ 5 ಸಾವಿರ ರೂ.ನಗದು ಹಾಗೂ ಸ್ಮರಣಿಕೆಯನ್ನು ಹೊಂದಿದೆ. 2019ರ ಫೆಬ್ರವರಿಯಲ್ಲಿ ಉಡುಪಿಯಲ್ಲಿ
ಹಮ್ಮಿಕೊಳ್ಳ ಲಾಗುವ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಅಕಾಡೆಮಿ ಪ್ರಶಸ್ತಿಗಾಗಿ ಹಲವು ಸಂಖ್ಯೆ  ಯಲ್ಲಿ ಅರ್ಜಿಗಳು ಬಂದಿದ್ದವು. ಆದರೆ ಆಯ್ಕೆ ಯಲ್ಲಿ ಸಾಮಾಜಿಕ ನ್ಯಾಯ ನೀಡಲಾಗಿದ್ದು, ಹಿರಿಯ ಕಲಾವಿದರಿಗೆ ಹೆಚ್ಚಿನ ಮನ್ನಣೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. 

ನಾಟಕ ಅಕಾಡೆಮಿಯ ವಾರ್ಷಿಕ ರಂಗ ಪ್ರಶಸ್ತಿ ಪಟ್ಟಿ: ಉಗಮಶ್ರೀನಿವಾಸ  (ಬೆಂಗಳೂರು), ಡಿ.ಎಲ್‌.ನಂಜುಂಡಸ್ವಾಮಿ
(ತುಮಕೂರು), ಜಕಾವುಲ್ಲಾ (ಹಾಸನ), ಪ್ರಭಾಕರ ಜೋಷಿ (ಕಲಬುರ್ಗಿ), ವಿಜಯಾನಂದ ಕರಡಿಗುಡ್ಡ (ರಾಯಚೂರು),
ಖಾಜೇಸಾಬ ಜಂಗಿ (ಬಾಗಲಕೋಟೆ), ಬಸಪ್ಪ ಮದರಿ (ವಿಜಯಪುರ), ಎಂ.ರವಿ (ಬೆಂಗಳೂರು), ಜಗದೀಶ್‌ ಕೆಂಗನಾಳ
(ಬೆಂಗಳೂರು ಗ್ರಾಮಾಂತರ), ಕಿರಗಸೂರು ರಾಜಪ್ಪ (ಚಾಮರಾಜನಗರ), ಟಿ.ಪ್ರಭಾಕರ ಕಲ್ಯಾಣಿ (ಉಡುಪಿ), ಎಸ್‌.ಆಂಜಿನಮ್ಮ
(ಬಳ್ಳಾರಿ), ಸಾವಿತ್ರಿ ನಾರಾಯಣಪ್ಪ ಗೌಡರ (ಗದಗ), ಮಕ್ಕಮ್ಮಲ್‌ ಹುಣಸಿಕಟ್ಟಿ (ಬೆಳಗಾವಿ), ಹನುಮಂತಪ್ಪ ಬಾಗಲಕೋಟಿ
(ಚಿತ್ರದುರ್ಗ), ಡಾ.ಕೆ.ವೈ.ನಾರಾಯಣ ಸ್ವಾಮಿ (ಕೋಲಾರ), ಉಷಾ ಭಂಡಾರಿ (ದಕ್ಷಿಣ ಕನ್ನಡ), ಡಿ.ಎಂ.ರಾಜಕುಮಾರ್‌
(ಶಿವಮೊಗ್ಗ), ಅಂಜಿನಪ್ಪ (ದೊಡ್ಡಬಳ್ಳಾಪುರ), ಹುಲಿವಾನ ಗಂಗಾಧರಯ್ಯ (ತುಮಕೂರು), ಮೋಹನ್‌ ಮಾರ್ನಾಡು ( ಮುಂಬಯಿ),
ಕೆಂಚೇಗೌಡ ಟಿ (ಮಂಡ್ಯ), ಮೈಮ್‌ ರಮೇಶ್‌ ( ಮೈಸೂರು), ಚಿಂದೋಡಿ ಚಂದ್ರಧರ (ದಾವಣಗೆರೆ) ಮತ್ತು ಈಶ್ವರದಲಾ (ತುಮಕೂರು).

Advertisement

Udayavani is now on Telegram. Click here to join our channel and stay updated with the latest news.

Next