Advertisement

ತೋಟಗಾರಿಕೆಗೆ ವಿಶೇಷ ಪ್ಯಾಕೇಜ್‌ ಘೋಷಿಸಿ

03:58 PM Mar 07, 2017 | Team Udayavani |

ಕಲಬುರಗಿ: ಈ ಭಾಗದಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಪ್ಯಾಕೇಜ್‌ ಪ್ರಕಟಿಸಿ ಹೆಚ್ಚಿನ ಆರ್ಥಿಕ ಪ್ರೋತ್ಸಾಹ ನೀಡಬೇಕು ಎಂದು ಕರ್ನಾಟಕ ರಾಜ್ಯ ತೋಟಗಾರಿಕೆ ಮಹಾಮಂಡಳಿ ಅಧ್ಯಕ್ಷಬಸವರಾಜ ಆರ್‌. ಪಾಟೀಲ ಹೇಳಿದರು.  

Advertisement

ನಗರದ ಶರಣಬಸವೇಶ್ವರ ಕೆರೆ ಉದ್ಯಾನವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳಫಲ-ಪುಷ್ಪ ಪ್ರದರ್ಶನ ಪ್ರದರ್ಶದಲ್ಲಿ ಪಾಲ್ಗೊಂಡ ಜಿಲ್ಲೆಯ ವಿವಿಧ ತಾಲೂಕುಗಳ 70 ರೈತರಿಗೆ ಪ್ರಶಂಸಾ ಪತ್ರ ಮತ್ತು ಸಮಗ್ರ ತೋಟಗಾರಿಕೆ ಕೈಪಿಡಿ ವಿತರಿಸಿ ಅವರು ಮಾತನಾಡಿದರು. 

ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಪ್ರಕಟಿಸಬೇಕು. ಜಿಲ್ಲೆಯ ವಾತಾವರಣ ತೋಟಗಾರಿಕೆ ಬೆಳೆಗಳಿಗೆ ಸೂಕ್ತವಾಗಿದ್ದು, ರೈತರಲ್ಲಿ ಜಾಗೃತಿ ಮೂಡಿಸಲು ತೋಟಗಾರಿಕೆ ಅಧಿಧಿಕಾರಿಗಳು ನಿರಂತರ ಪ್ರಯತ್ನ ಮಾಡಬೇಕು ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪುರ ಮಾತನಾಡಿ, ಈ ಭಾಗದಲ್ಲಿ ತೋಟಗಾರಿಕೆ ಬೆಳೆ ಸಮಗ್ರ ಅಭಿವೃದ್ಧಿಗೆ ಅನುವಾಗುವಂತೆ ಸರ್ಕಾರ ತೋಟಗಾರಿಕೆ ಕಾಲೇಜು ಪ್ರಾರಂಭಿಸಬೇಕು. ರೈತ ಸಮುದಾಯ ಕೃಷಿಯೊಂದನ್ನೇ ಅವಲಂಬಿಸದೆ ಪ್ರತಿ ದಿನ ಆದಾಯ ಒದಗಿಸುವ ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆಮುಂತಾದ ಉಪಕಸುಬುಗಳನ್ನು ಕೈಗೊಳ್ಳಬೇಕು.

ಇದಕ್ಕಾಗಿ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು. ಮಹಿಳೆಯರು ತಮ್ಮ ಕುಟುಂಬದ ಆರೋಗ್ಯಕರ ಜೀವನಕ್ಕಾಗಿ ಕೈತೋಟಕೈಗೊಳ್ಳುವ ಮೂಲಕ ತಮ್ಮ ತಮ್ಮ ಮನೆಗಳಿಗೆ ಬೇಕಾಗುವ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಬೇಕು ಎಂದು ಹೇಳಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಜಿ.ಚಂದ್ರಕಾಂತ ಅತಿಥಿಗಳಾಗಿದ್ದರು.

Advertisement

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮೊಹಮ್ಮದ್‌ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಶಿವಕುಮಾರ, ಸಂತೋಷ, ರಾಘವೇಂದ್ರ ಉಕ್ಕಿನಾಳ, ಬಾಬುರಾವ ಪಾಟೀಲ, ರಾಹುಲಕುಮಾರ ಬಾವಿದೊಡ್ಡಿ, ಸಹಾಯಕ ನಿರ್ದೇಶಕರಾದ ಸುರೇಂದ್ರನಾಥ, ರಾಜಕುಮಾರ, ಶಂಕರಗೌಡ ಪಾಲ್ಗೊಂಡಿದ್ದರು. ಸಹಾಯಕ ತೋಟಗಾರಿಕೆ ಅಧಿಕಾರಿ ಬಸವರಾಜೇಶ್ವರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next