Advertisement
ಬಳಿಕ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಜಯಾನಂದ ಜಾವಣ್ಣನವರ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕೈಗಾರಿಕೆ ಸ್ಥಾಪನೆ ಅತ್ಯಗತ್ಯವಾಗಿದೆ. ಉತ್ತರ ಕರ್ನಾಟಕದ ಹೃದಯ ಭಾಗವಾಗಿರುವ ಹಾವೇರಿ ಜಿಲ್ಲೆ ಶೈಕ್ಷಣಿಕ, ವಾಣಿಜ್ಯ, ಸಾಂಸ್ಕೃತಿಕವಾಗಿ ಬೆಳವಣಿಗೆ ಕಂಡಿದೆ. ಸುತ್ತಲಿನ ಜಿಲ್ಲೆಗಳ ಜನರೊಂದಿಗೆ ವ್ಯಾಪಾರ ಉದ್ಯೋಗದಿಂದ ಸಂಚಾರ ಸಂಪರ್ಕ ಹೊಂದಿದೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಹಾವೇರಿ ನಗರದಲ್ಲಿ ಉದ್ಯೋಗ ಸೃಷ್ಟಿಯಾಗಬೇಕಿದೆಎಂದರು.
ಎಂದರು.
Related Articles
Advertisement
ಜಿಲ್ಲೆಯಲ್ಲಿ ತುಂಗಭದ್ರಾ, ವರದಾ, ಕುಮದ್ವತಿ, ಧರ್ಮ, ನದಿಗಳ ನೀರನ್ನು ರೈತರಿಗೆ ಹಾಗೂ ಜಿಲ್ಲೆಯ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಸದ್ಬಳಕೆ ಮಾಡಲು ನೀರಾವರಿ ಯೋಜನೆಗೆ ಕನಿಷ್ಟ 1000 ಕೋಟಿ ರೂ. ಅನುದಾನ ಬಜೆಟ್‌ನಲ್ಲಿ ಮೀಸಲಿಡಬೇಕು. ಜಿಲ್ಲೆಯ 8 ತಾಲೂಕುಗಳ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗಾಗಿ 500ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಬೇಕೆಂದು ಮನವಿ ಮಾಡಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಕೆ.ಎಸ್. ಸಿದ್ದಬಸಪ್ಪ ಯಾದವ, ಕತಲಸಾಬ ಬಣಕಾರ, ಶಂಶಾದಬಿ ಕುಪ್ಪೆಲೂರ, ಕೆ.ಎಂ. ಸುಂಕದ, ಎಸ್.ಟಿ. ಹಿರೇಮಠ, ಮೋಹನ ಬಿನ್ನಾಳ, ಎಸ್.ಎಸ್. ಹಿರೇಮಠ, ಬಸನಗೌಡ್ರ ಸಿದ್ದನಗೌಡ್ರ, ಪ್ರಕಾಶ ಬಾರ್ಕಿ, ಈರಣ್ಣ ನವಲಗುಂದ, ಲೀಲಾವತಿ ಗೌಡಗೇರಿ, ಶಂಕ್ರಮ್ಮ ತಿಮ್ಮೇನಹಳ್ಳಿ, ಕೊಟ್ರೇಶ ಅಂಗಡಿ, ಅಮೀರಜಾನ ಬೇಪಾರಿ, ಮಂಜುನಾಥ ಕನ್ನಾಯಕನವರ, ಸಂಗಪ್ಪ ಪರಶೆಟ್ಟಿ, ಮಹಾಂತೇಶ ಬೇವಿನಹಿಂಡಿ ಇತರರು ಇದ್ದರು.