ಮುಂಬಯಿ, ನ. 5: ಎಳ್ಳಾರೆ ಶಂಕರೆ ನಾಯಕ್ ಭಾಗವತರ ಯಕ್ಷ ವೈಭವ ಮಕ್ಕಳ ಮೇಳ ಮುಂಬಯಿ ಇದರ 8ನೇ ವಾರ್ಷಿಕೋತ್ಸವ ಸಂಭ್ರಮವು ಡೊಂಬಿವಲಿಯ ವರದ ಸಿದ್ದಿವಿನಾಯಕ ಸೇವಾ ಮಂಡಲದ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ಛಲದಂಕ ಮಲ್ಲ ಕೌರವೇಶ್ವರ ಯಕ್ಷಗಾನ ಪ್ರದ ರ್ಶನಗೊಂಡಿತು. ಹಿಮ್ಮೇಳ ಭಾಗವತ ರಾಗಿ ಹೆರಂಜಾಲು ಗೋಪಾಲ ಗಾಣಿಗ, ಮದ್ದಳೆಯಲ್ಲಿ ರಾಘವೇಂದ್ರ ಭಟ್ ಸಕ್ಕೋಟ್ಟು, ಚೆಂಡೆಯಲ್ಲಿ ಮಂಜುನಾಥ್ ದೇವಾಡಿಗ ಸಹಕರಿಸಿದರು. ಕಲಾವಿದರಾಗಿ ಪೂರ್ಣನಂದ್ ನಾಯಕ್ ಎಳ್ಳಾರೆ. ಸತೀಶ್ ಪ್ರಭು ಮೂಲ್ಕಿ, ಅಶೋಕ್ ಶೆಟ್ಟಿ ಕೊಡ್ಲಾಡಿ. ನಾರಾಯಣ ಶೆಟ್ಟಿ ಕುಂಬ್ಳೆ, ಸ್ನೇಹಾ ನಾಯಕ್, ಸೂಯಾಶ್ ಪಾಟ್ಕರ್, ಖುಷಿ ನಾಯಕ್, ಗಿರೀಶ್ ಅರೂರ್, ದ್ವಿತೇಶ್ ಕಾಮತ್, ಕುಷಿ ಹರೀಶ್ ಶೆಟ್ಟಿ. ಶ್ರೇಯಾ, ಆದ್ಯ, ಸುಮಾ ಪ್ರಭು, ಸ್ಮಿತಾ ಪಾಟ್ಕರ್, ಸಂಗೀತಾ ನಾಯಕ್, ವರ್ಷಾ ನಾಯಕ್, ಸಿದ್ದಿ ನಾಯಕ್ ಪಾಲ್ಗೊಂಡಿದ್ದರು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ ಕಲಾಪೋಷಕ ಪಿಜತ್ತಡಿ ಉದಯ ಶೆಟ್ಟಿ ಕುಕ್ಕುಜೆಯವರು ಮಾತನಾಡಿ, ಮಹಾನಗರಿ ಮುಂಬಯಿಯಲ್ಲಿ ಯಕ್ಷಗಾನದ ಕಂಪನ್ನು ಸೂಸುತ್ತಿರುವ ಯಕ್ಷವೈಭವ ಮೇಳದ ಕಲಾ ಸೇವೆ ಅಪಾರ. ಮುಂಬಯಿಯಲ್ಲಿ ಕನ್ನಡ ಬಾರದ ಮಕ್ಕಳಿಗೆ ಯಕ್ಷಗಾನವನ್ನು ಕಲಿಸುತ್ತಿರುವ ಶಂಕರ್ ನಾಯಕ್ ಭಾಗವತರ ಸಾಧನೆ ಸ್ಮರಣೀಯ ಎಂದರು.
ಈ ಸಂದರ್ಭ ಗಣ್ಯರ ಸಮ್ಮುಖದಲ್ಲಿ ಯಕ್ಷಕಲಾವಿದ ಬಾಬುರಾಯ ಪ್ರಭು ಅವರನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಆರ್‌ಎಸ್‌ಬಿ ಸಮಾಜದ ಗಣ್ಯರಾದ ಸದಾಶಿವ ನಾಯಕ್, ಆರ್. ಜಿ. ನಾಯಕ್, ರಘುನಾಥ್ ಪ್ರಭು, ಶ್ರೀಧರ ಭಟ್ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಳದ ಸಂಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು. ಶಂಕರ್ ನಾಯಕ್ ಎಳ್ಳಾರೆ, ಪೂರ್ಣಾನಂದ್ ನಾಯಕ್ ಎಳ್ಳಾರೆ ಹಾಗೂ ಯಕ್ಷ ವೈಭವ ಮಕ್ಕಳ ಮೇಳದ ಬಾಲ ಕಲಾವಿದರು ಮತ್ತು ಪೋಷಕರು ಸಹಕರಿಸಿದರು. ಗೋಪಾಲಕೃಷ್ಣ ನಾಯಕ್ ಮತ್ತು ಗೆಳೆಯರಿಂದ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸುರೇಶ ಪಾಟ್ಕರ್ ಮತ್ತು ಸತೀಶ್ ನಾಯಕ್ ಕುಟುಂಬದವರಿಂದ ಲಘು ಉಪಾಹಾರದ ವ್ಯವಸ್ಥೆಯು ನಡೆಯಿತು.