Advertisement
ಇನ್ನೂ ಕೆಲವರು ರಾತ್ರಿ 10 ಗಂಟೆವರೆಗೆ ಹೋಟೆಲ್, ಬಾರ್ ಗಳಲ್ಲಿ ಸಮಯ ಕಳೆದು ಮನೆಯತ್ತ ಸಾಗಿದರು. ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಹೋಟೆಲ್, ಕ್ಲಬ್‌ಗಳಲ್ಲಿ ಯಾವುದೇ ಪಾರ್ಟಿಗಳನ್ನು ಆಯೋಜಿಸಲು ಅವಕಾಶ ಇರಲಿಲ್ಲ. 10 ಗಂಟೆಯೊಳಗೇ ಪಾರ್ಟಿಗಳಿದ್ದರೂ ಶೇ.50 ಮಾತ್ರ ಜನರಿಗೆ ಅವಕಾಶವಿತ್ತು. ಹೀಗಾಗಿ ಹೋಟೆಲ್, ಕ್ಲಬ್‌ಗಳಲ್ಲಿ ಪಾರ್ಟಿ ಆಯೋಜನೆಗೆ ಕೈ ಹಾಕಿರಲಿಲ್ಲ. ಕಳೆದ ವರ್ಷ ಸಿಮೀತ ಆಯೋಜನೆ ಮಾಡಿ ಒಂದಿಷ್ಟು ಆಯೋಜಕರು ನಷ್ಟ ಅನುಭವಿಸಿದ್ದರು.
ಕಳೆದ ಎರಡು ವರ್ಷಗಳಿಂದ ಯಾವುದೇ ವ್ಯಾಪಾರ-ವಹಿವಾಟು ಇಲ್ಲದೇ ಪರಿತಪಿಸುತ್ತಿರುವ ಇಂತಹ ಸಮಯದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಇದ್ದ ಒಂದು ಅವಕಾಶವನ್ನು ಸರಕಾರ ಕಸಿದುಕೊಂಡಿದೆ. ಹತ್ತು ಹಲವು ಕಾರ್ಯಕ್ರಮಗಳು, ಚುನಾವಣೆಗಳು, ರಾಜಕೀಯ ಕಾರ್ಯಕ್ರಮಗಳು, ಮದುವೆಗಳಿಗಿರದ ನಿಯಮಗಳನ್ನು ಹೊಸ ವರ್ಷದ ಆಚರಣೆಗೆ ರೂಪಿಸಿ ಹೋಟೆಲ್ ಉದ್ಯಮ ನಷ್ಟ ಅನುಭಿಸುವಂತೆ ಮಾಡಿದೆ ಎನ್ನುವುದು ಹೋಟೆಲ್ ಉದ್ಯಮಿಗಳ ಆಕ್ರೋಶವಾಗಿದೆ. ಎಲ್ಲಿಯೂ ಆಚರಣೆ ಇಲ್ಲ ನಗರದ ಡೆನಿಸನ್ ಹೋಟೆಲ್, ಓಶಿಯನ್ ಪರ್ಲ್, ನವೀನ ಹೋಟೆಲ್, ಹಂಸ್ ಹೋಟೆಲ್, ಕ್ಯೂಬಿಕ್ಸ್ ಹೋಟೆಲ್, ಫಾರ್ಚೂನ್ ಹೋಟೆಲ್, ಗ್ರ್ಯಾಂಡ್ ಹೋಟೆಲ್, ಫರ್ಲ್ ಹೋಟೆಲ್, ಪ್ರಸಿಡೆಂಟ್, ತಾರಾ ಎಮರಾಯಲ್ಡ್ ಹೋಟೆಲ್, ಕಾಟನ್ ಕೌಂಟಿ, ಲೋಟಸ್ ಗಾರ್ಡನ್ ಸೇರಿದಂತೆ ಎಲ್ಲ ಹೋಟೆಲ್ ಗಳಲ್ಲಿರುತ್ತಿದ್ದ ಹಬ್ಬದ ಕಳೆ ಈ ಬಾರಿ ಇರಲಿಲ್ಲ.
Related Articles
ಪ್ರದೀಪ್ ಶಾಹ್,
ಓಷಿಯನ್ ಪರ್ಲ್ ಹೋಟೆಲ್
Advertisement
ಹೊಸ ವರ್ಷದ ಆಚರಣೆ ಏನೂ ಇಲ್ಲ, ಕಳೆದ ವರ್ಷವೂ ಇದೇ ರೀತಿ ಆಗಿತ್ತು. ಸರಕಾರ ಹಾಗೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ರಾತ್ರಿ 9 ಗಂಟೆಗೆ ಬಂದ್ ಮಾಡಿ, ರಾತ್ರಿ 10 ಗಂಟೆಗೆ ಒಳಗಡೆ ಯಾರನ್ನು ತೆಗೆದುಕೊಳ್ಳುವಂತಿಲ್ಲ. ಹೀಗಾಗಿ ಈ ಬಾರಿಯೂ ಯಾವುದೇ ಸಂಭ್ರಮಾಚರಣೆಯಿಲ್ಲ.ಅರುಣ ಸವದತ್ತಿ,
ವ್ಯವಸ್ಥಾಪಕ, ಡೆನಿಸನ್ಸ್ ಹೋಟೆಲ್